ಬರ ‘ಬವಣೆ’ಯಲ್ಲೂ ಬೆಳೆಯಿತು “ನವಣೆ’
ಕಡಿಮೆ ಖರ್ಚಿನಲ್ಲೂ ಉತ್ತಮ ಇಳುವರಿಮಳೆ ಕೊರತೆ ಸಿರಿಧಾನ್ಯ ಬೆಳೆಗೆ ಆಗದು ತೊಂದರೆ
Team Udayavani, Sep 26, 2019, 6:34 PM IST
ಕುಷ್ಟಗಿ: ತಾಲೂಕಿನ ಹಂಚಿನಾಳದ ರೈತ ಈಶಪ್ಪ ಮೆಳ್ಳಿ ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನವಣೆ ಬರ ಪರಿಸ್ಥಿತಿಯಲ್ಲಿ ಉತ್ತಮ ಬೆಳೆ ಬಂದಿದೆ.
ಉದ್ದುಮ ಹಾರಕ, ಕೋರಲೆ, ಬರಗು, ನವಣೆ ಇತ್ಯಾದಿ ಸಿರಿಧಾನ್ಯ ಪ್ರಸ್ತುತ ಪ್ರಮುಖ ಆಹಾರ ಬೆಳೆ ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲೂ ಉತ್ತಮ ಬೆಳೆ ನಿರೀಕ್ಷಿಸಿಸಬಹುದಾಗಿದೆ. ಶುಷ್ಕ, ಒಣ ಪರಿಸ್ಥಿತಿಗಳಲ್ಲಿ ಕಡಿಮೆ ಫಲವತ್ತತೆಯಲ್ಲೂ ಈ ಬೆಳೆ ಬೆಳೆಬಹುದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಇವನ್ನು ಬೆಳೆಯುವಲ್ಲಿ ರೈತರಲ್ಲಿ ನಿರಾಸಕ್ತಿ ಕಂಡು ಬಂದಿದೆ. ಇದೇ ಸಂಧರ್ಭದಲ್ಲಿ ರೈತ ಸಿರಿ ಯೋಜನೆ ಜಾರಿಯಲ್ಲಿದ್ದು, ಹಂಚಿನಾಳ ರೈತ ಈಶಪ್ಪ ಮೆಳ್ಳಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದ ನವಣೆ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ರೈತ ಈಶಪ್ಪ ಮೆಳ್ಳಿ ಮೂರು ಎಕರೆ ಜಮೀನನಲ್ಲಿ ಕೃಷಿ ಮಾಡುತ್ತಿದ್ದು, ಕೊಳವೆಬಾವಿ ಅಳವಡಿಸಿಕೊಂಡಿದ್ದಾರೆ. ಅಂತರ್ಜಲ ತೀವ್ರ ಕೊರತೆ ಹಿನ್ನೆಲೆಯಲ್ಲಿ ಅಗತ್ಯ ಸಂದರ್ಭದಲ್ಲಿ ಒಮ್ಮೆ ಮಾತ್ರ
ಕೊಳವೆಬಾವಿ ನೀರನ್ನು ತುಂತುರು ನೀರಾವರಿ ಮೂಲಕ ಬಳಸಿಕೊಳ್ಳಲಷ್ಟೇ ಸಾಕಾಗುತ್ತದೆ. ರೈತ ಈಶಪ್ಪ ಅವರು, ಮಳೆಯಾಶ್ರಿತ ಬೆಳೆ ಬೆಳೆಯುವುದು ಅನಿವಾರ್ಯ ಪರಿಸ್ಥಿತಿಯಲ್ಲೂ, ಒಂದೂವರೆ ಎಕರೆ ಹತ್ತಿ ಬೆಳೆದಿದ್ದು, ಇನ್ನೂ ಒಂದೂವರೆ ಎಕರೆಯಲ್ಲಿ
ರೈತ ಸಿರಿ ಯೋಜನೆಯಲ್ಲಿ ನವಣೆ ಎಸ್.ಎಂ.ಟಿ 100-1 ಈ ತಳಿ ಬೆಳೆದಿದ್ದಾರೆ. ಸದ್ಯ ಹತ್ತಿ ಕಾಯಿ ಕಟ್ಟುವ ಹಂತದಲ್ಲಿದೆ. ನವಣೆ ಮಾತ್ರ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿದ್ದು, ಮಳೆ ತೀರ ಅಭಾವ ಪರಿಸ್ಥಿತಿಯಲ್ಲಿ ಬೆಳೆ ಒಣಗುವುದನ್ನು ನೋಡಲಾಗದೇ ತುಂತುರು ನೀರಾವರಿ ಮೂಲಕ ನೀರುಣಿಸಿದ್ದರಿಂದ ನವಣೆ ಬಂಪರ್ ಇಳುವರಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.