ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ
ಇಲ್ಲಿಲ್ಲ ನೀರಿನ ಸಮಸ್ಯೆಯೋಜನೆ ಸಾಕಾರಕ್ಕೆ ಸಾರ್ವಜನಿಕರ ಸಹಭಾಗಿತ್ವ
Team Udayavani, Mar 31, 2019, 4:42 PM IST
ಲಕ್ಷ್ಮೇಶ್ವರ: ಬರಗಾಲದಲ್ಲಿಯೂ ಯತ್ನಳ್ಳಿ ಗ್ರಾಮದ ಕೆರೆ ಭರ್ತಿಯಾಗಿರುವುದು.
ಲಕ್ಷ್ಮೇಶ್ವರ: ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಸುಳಿಗೆ ಸಿಲುಕಿ ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದ ಕೆರೆ, ಬಾವಿಗಳು ಅಸಡ್ಡೆಗೊಳಗಾಗಿ ಇನ್ನಿಲ್ಲದಂತಾಗಿವೆ. ಆದರೆ ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿನ ಜನತೆ ತಮ್ಮೂರಿನ ಕೆರೆಯನ್ನು ಕಾಪಾಡಿಕೊಂಡಿದ್ದಾರೆ. ಇದರಿಂದ ಬರಗಲಾದ ಸಂದಿಗ್ಧ ಸ್ಥಿತಿಯಲ್ಲೂ ನೀರಿನ ತೊಂದರೆ ಉಂಟಾಗಿಲ್ಲ. ಇದು ಇತರೇ ಗ್ರಾಮದ ಜನರಿಗೆ ಪ್ರೇರಣೆಯಾಗಿದೆ.
ಗ್ರಾಮದಲ್ಲಿರುವ ಸುಮಾರು 4.24 ಎಕರೆ ವಿಸ್ತಾರದ ಕೆರೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಗ್ರಾಮದ ದಕ್ಷಿಣ ಭಾಗದ ಕೃಷಿ ಜಮೀನುಗಳಿಂದ ಹರಿದು ಬರುವ ನೀರನ್ನು ಮೂರು ಹಂತದಲ್ಲಿ ವಿಂಗಡಿಸಿ ಕೆರೆಗೆ ಸಂಗ್ರಹಿಸಲಾಗುತ್ತದೆ. ಮಳೆ ನೀರಿನೊಂದಿಗೆ ಹರಿದು ಬರುವ ಮುಳ್ಳು ಕಂಟಿ, ತ್ಯಾಜ್ಯ, ಹೂಳು ಕೆರೆಗೆ ಹರಿದು ಬರದಂತೆ ತಡೆಗೋಡೆ ನಿರ್ಮಿಸಿದ್ದಾರೆ. ಇದು ತುಂಬಿದ ನಂತರವೇ ಮೂಲ ಕೆರೆಗೆ ಸ್ವತ್ಛವಾದ ನೀರು ಸಂಗ್ರಹವಾಗಿ ಕೆರೆ ಸಂಪೂರ್ಣ ತುಂಬಿದ ಬಳಿಕವೇ ನೀರು ಕೋಡಿಯ ಮೂಲಕ ಹೊರ ಹೋಗುತ್ತದೆ.
ಈ ಕೆರೆಯ ಅಭಿವೃದ್ಧಿಗಾಗಿ 2015-16ನೇ ಸಾಲಿನ ಆರ್‌ಐಡಿಎಫ್-21ರ ಯೋಜನೆಯಡಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸುತ್ತಲೂ 540 ಮೀಟರ್ ಕಲ್ಲಿನ ಪಿಚ್ಚಿಂಗ್ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಮಳೆಯಿಂದ ಕೆರೆಗೆ ನೀರು ಸಂಗ್ರಹವಾಗಿ ಪಿಚ್ಚಿಂಗ್ ಮಾಡಲು ಅಡ್ಡಿಯಾಯಿತು. ಗ್ರಾಮಸ್ಥರು ಸರ್ಕಾರದ ಅನುದಾನದ ಬಳಕೆಗೆ ಪಿಚ್ಚಿಂಗ್ ಬದಲು ಕೆರೆಯ ಸುತ್ತಲೂ ತಂತಿಬೇಲಿ ಅಳವಡಿಸಲು ಸಣ್ಣ ನೀರಾವರಿ ಇಲಾಖೆಗೆ ದುಂಬಾಲು ಬಿದ್ದರು. ಗ್ರಾಮಸ್ಥರ ಆಸೆಯದಂತೆ ಇಲಾಖೆಯು ಕಾಮಗಾರಿ ಬದಲಿಸಿ ಕೆರೆಯ ಸುತ್ತಲೂ ತಂತಿ ಬೇಲಿ ಅಳಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಸಾರ್ವಜನಿಕರ ಸಹಭಾಗಿತ್ವದ ಕಾರಣದಿಂದ ನೀರಿನ ಬರಕ್ಕೆ ಕೆರೆಯೇ ಪರಿಹಾರವಾಗಿದೆ.
ಮೂರು ಹಂತದಲ್ಲಿ ಕೆರೆ ನಿರ್ಮಾಣ
ಮೂರು ಹಂತದಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ. 1ನೇ ಹಂತದಲ್ಲಿನ ಕೆರೆಯಲ್ಲಿನ ಕಸಕಡ್ಡಿಗಳಿಂದ ಕೂಡಿದ ನೀರನ್ನು ಜಾನುವಾರು, ಕುರಿ ಮೇಕೆಗಳಿಗೆ ಉಪಯೋಗಿಸಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಈ ಕೆರೆಯಲ್ಲಿನ ಹೂಳು ಸ್ವಚ್ಛಗೊಳಿಸಿದರೆ ಮಾತ್ರ ಸಾಕು. 2 ಮತ್ತು 3ನೇ ಹಂತದ ಕೆರೆಗೆ ನೈಸರ್ಗಿಕವಾಗಿಯೇ ನೀರು ಫಿಲ್ಟರ್ ಆಗಿ ಸಂಗ್ರಹವಾಗುತ್ತದೆ. ಇದೇ ನೀರನ್ನು ಜನತೆ ವರ್ಷಪೂರ್ತಿ ಕುಡಿಯಲು ಮತ್ತು ಬಳಕೆ ಮಾಡುತ್ತಾರೆ.
ಅನುದಾನ ನೀಡಲು ಸ್ಥಳೀಯರ ಮನವಿ
ಗ್ರಾಮದ ಕೆರೆ ನೈಸಗಿಕವಾಗಿ ನೀರು ಸಂಗ್ರಹವಾಗುವ ಸೂಕ್ತ ಸ್ಥಳದಲ್ಲಿದ್ದು, ವರ್ಷಪೂರ್ತಿ ನೀರು ಸಂಗ್ರಹವಾಗುವ ಕೆರೆ ನಮ್ಮೂರಿನ ಜನರ ಆಸರೆ ಮತ್ತು ಹೆಮ್ಮೆಯಾಗಿದೆ. ಭವಿಷತ್ತಿನಲ್ಲಿ ಈ ಕೆರೆಯ ಸುತ್ತಲೂ ಕಲ್ಲಿನ ಪಿಚ್ಚಿಂಗ್, ಉದ್ಯಾನ ಸೇರಿ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ವಿವಿಧ ಯೋಜನೆಗಳಡಿ ಅನುದಾನ ತಂದು ಮಾದರಿ ಕೆರೆಯನ್ನಾಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ ಗ್ರಾಮದ ಸಿ.ಬಿ. ಪಾಟೀಲ, ಕರಿಭರಮಗೌಡ್ರ, ಶೇಖರಗೌಡ ಪಾಟೀಲ ಮತ್ತಿತರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.