ರಾಂಪುರ ಏತ ನೀರಾವರಿ ಮುಖ್ಯನಾಲೆ ಬಿರುಕು
Lingasaguru: Rampur's irrigation project
Team Udayavani, Sep 22, 2019, 3:37 PM IST
ಲಿಂಗಸುಗೂರು: ಕಳೆದ ತಿಂಗಳು ಕಾಲುವೆಗೆ ಹರಿಸಿದ ನೀರಿನ ಒತ್ತಡಕ್ಕೆ ಹಾಗೂ ಇತ್ತೀಚೆಗೆ ಎರಡ್ಮೂರು ದಿನ ಸುರಿದ ಮಳೆಗೆ ತಾಲೂಕಿನ ರಾಂಪುರ ಏತ ನೀರಾವರಿ ಯೋಜನೆ ಮುಖ್ಯ
ನಾಲೆಯಲ್ಲಿ ಬಿರುಕು ಬಿಟ್ಟಿದ್ದು, ನಾಲೆ ಒಡೆಯುವ ಭೀತಿ ಎದುರಾಗಿದೆ.
ರಾಂಪುರ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ 4ನೇ ಕಿ.ಮೀ. ನರಕಲದಿನ್ನಿ ಬಳಿಯ ನಾಲೆಯನ್ನು ಕೆಲ ತಿಂಗಳ ಹಿಂದಷ್ಟೇ ಸಂಪೂರ್ಣ ದುರಸ್ತಿ ಮಾಡಲಾಗಿತ್ತು. ನಾಲೆಯ ಎರಡು ಬದಿಯ ಲೈನಿಂಗ್‌ಗೆ ಸಿಮೆಂಟ್ ಕಾಂಕ್ರಿಟ್ ಹಾಕಲಾಗಿತ್ತು. ಆದರೆ ನಾಲೆಗಳ ದುರಸ್ತಿ ಕಾಮಗಾರಿ ಸಕಾಲಕ್ಕೆ ಮುಗಿದಿರಲಿಲ್ಲ. ಇದೇ ವೇಳೆ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದು ಬಸವಸಾಗರ ಜಲಾಶಯ ಭರ್ತಿ ಆಗಿದ್ದರಿಂದ ನಾಲೆಗೆ ನೀರು ಹರಿಸಲಾಗಿತ್ತು. ಈ ನೀರಿನ ಒತ್ತಡಕ್ಕೆ ಕಾಲುವೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಎರಡ್ಮೂರು ದಿನ ಸುರಿದ ಮಳೆಗೆ ಕಾಲುವೆ ಪಕ್ಕದ ರಸ್ತೆ ಮಣ್ಣು ಕುಸಿದು ಕಾಲುವೆ ಎರಡೂ ಬದಿಯ ಗೋಡೆಯ
ಸಿಮೆಂಟ್ ಕಿತ್ತು ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾಲುವೆ ಬಿರುಕು ಬಿಡಲು ಕಳಪೆ ಕಾಮಗಾರಿಯೇ ಕಾರಣ ಎಂದು ರೈತರು ದೂರಿದ್ದರೆ, ರಾಂಪುರ ಏತ ನೀರಾವರಿ ಯೋಜನೆ ಕಿರಿಯ ಅಭಿಯಂತರ ಮಂಜುನಾಥ, ಜಮೀನುಗಳಿಗೆ ನೀರು ಬರಲಿ ಎಂದು ಕಾಲುವೆ ವ್ಯಾಪ್ತಿಯ ರೈತರು ಅಲ್ಲಲ್ಲಿ ಕಾಲುವೆಗೆ ಬೋಂಗಾ ಹಾಕಿದ್ದರಿಂದ ಕಾಲುವೆ ಬಿರುಕು ಬಿಟ್ಟಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.