ಹಸಿರೀಕರಣಕ್ಕೆ ಸಾಮಾಜಿಕ ಅರಣ್ಯ ಇಲಾಖೆ ಪಣ
ನರ್ಸರಿಯಲ್ಲಿ ಬೆಳೆಸುತ್ತಿದೆ 37 ಸಾವಿರ ಸಸಿ ಮುಂಗಾರಿನಲ್ಲಿ ನೆಡಲು ಸಿದ್ಧತೆ ಕಳೆದ ವರ್ಷ ನೆಟ್ಟ ಗಿಡಗಳ ರಕ್ಷಣೆಗೆ ನೀರು-ಗೊಬ್ಬರ
Team Udayavani, Apr 13, 2019, 11:29 AM IST
ಲಿಂಗಸುಗೂರು: ಪಟ್ಟಣದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಿರುವ ಬೇವಿನ ಸಸಿಗಳು.
ಲಿಂಗಸುಗೂರು: ತಾಲೂಕಿನ ವಿವಿಧೆಡೆ ಸಸಿಗಳನ್ನು ನೆಟ್ಟು ಹಸಿರೀಕರಣ ಮಾಡಲು ಸಾಮಾಜಿಕ ಅರಣ್ಯ ಇಲಾಖೆ ಪಣ ತೊಟ್ಟಿದೆ. ಇದಕ್ಕಾಗಿ ಮುಂಬರುವ ಮುಂಗಾರು ಹಂಗಾಮಿನಲ್ಲಿ ಸುಮಾರು 37 ಸಾವಿರ ವಿವಿಧ ಸಸಿಗಳನ್ನು ನೆಡಲು ಸಿದ್ಧತೆ ನಡೆಸಿದೆ. ವಿವಿಧ ಜಾತಿಗಳ ಸಸಿಗಳನ್ನು ಪೋಷಿಸಿ ಬೆಳೆಸುತ್ತಿದೆ.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಬರುವ ಮುಂಗಾರು ಮಳೆ ಆಧರಿಸಿ ಪಟ್ಟಣ, ಗ್ರಾಮ, ಶಾಲೆ, ರಸ್ತೆ ಅಕ್ಕ-ಪಕ್ಕ ಸೇರಿದಂತೆ ಕಾಯ್ದಿಟ್ಟ ಅರಣ್ಯಭೂಮಿಯಲ್ಲಿ ಅರಣ್ಯೀಕರಣಕ್ಕೆ ಹಾಗೂ ಸಾರ್ವಜನಿಕರಿಗೆ ವಿವಿಧ
ಯೋಜನೆಗಳಲ್ಲಿ ಮಾರಾಟಕ್ಕಾಗಿ ಲಿಂಗಸುಗೂರು ಪಟ್ಟಣ, ತಾಲೂಕಿನ ಕರಡಕಲ್ ನರ್ಸರಿಗಳಲ್ಲಿ ಬೇವು, ಹುಣಸೆ, ಮಾವು, ನೇರಳೆ, ಮಹಾಗನಿ, ಹೊಂಗೆ, ಇತರೆ ಸೇರಿಒಟ್ಟು 36,800 ಸಸಿಗಳನ್ನು ಬೆಳೆಸಲಾಗುತ್ತಿದೆ. ಜೂನ್‌ನಿಂದ ಯೋಜನೆ ರೂಪಿಸಿಕೊಂಡು ಗಿಡಗಳನ್ನು ನೆಡಲಾಗುತ್ತಿದೆ. ಅರಣ್ಯ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಶ್ರೀಗಂಧ, ಹೆಬ್ಬೇವು, ರಕ್ತಚಂದನ, ಪೇರಲ, ನಿಂಬೆ, ಕರಿಬೇವು, ಮಹಾಗನಿ, ಸಾಗುವಾನಿ ಸೇರಿ ಒಟ್ಟು 25,300 ಗಿಡಗಳನ್ನು ಬೆಳೆಸಲಾಗುತ್ತಿದೆ. ಇವುಗಳನ್ನು ಮೇ ಕೊನೆ ಅಥವಾ ಜೂನ್‌ನಲ್ಲಿ ರೈತರಿಗೆ
ವಿತರಿಸಲು ಕ್ರಮ ವಹಿಸಲಾಗುತ್ತದೆ.
ಗಿಡಗಳ ರಕ್ಷಣೆಗೆ ಶ್ರಮ: 2018-19ನೇ ಸಾಲಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆ ತಾಲೂಕಿನಲ್ಲಿ ಕಳೆದ ವರ್ಷದ ಜೂನ್ ತಿಂಗಳಲ್ಲಿ 10,500 ಸಸಿಗಳನ್ನು ನೆಟ್ಟಿದ್ದಾರೆ. ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ 5,600, ಮುದಗಲ್ ವ್ಯಾಪ್ತಿಯಲ್ಲಿ 1,600, ಮಸ್ಕಿ ವ್ಯಾಪ್ತಿಯಲ್ಲಿ 900, ಅಮರೇಶ್ವರ ಕ್ರಾಸ್‌ದಿಂದ ಪೈದೊಡ್ಡಿವರೆಗಿನ ಒಟ್ಟು 6 ಕಿ.ಮೀ.ವರೆಗೆ 2,400 ಸಸಿಗಳನ್ನು ನೆಡಲಾಗಿದೆ.
ಹೊಂಗೆ, ಮಾವು, ಮಹಾದಾನಿ, ಜಂಬುನೇರಳೆ, ಹೊನ್ನಿ, ಬಗಂ, ಅರಳಿ, ಬದಾಮಿ ಸೇರಿ ಇನ್ನಿತರ ಜಾತಿ ಗಿಡಗಳನ್ನು ಹಾಕಲಾಗಿದೆ. ಆದರೆ ಮಳೆ ಕೊರತೆಯಿಂದಾಗಿ ಮತ್ತು ಬಿಸಿಲಿನ ಪ್ರಖರತೆಗೆ ಗಿಡಗಳು ಒಣಗುವ ಆತಂಕ
ಎದುರಾಗಿತ್ತು. ಜೊತೆಗೆ ಕೀಟ ಬಾಧೆ ಕೂಡ ಕಾಡಲಾರಂಭಿಸಿವೆ.
ಇದರಿಂದ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಗಿಡಗಳನ್ನು ಹೇಗಾದರೂ ಸಂರಕ್ಷಣೆ ಮಾಡುವ ಉದ್ದೇಶದಿಂದ ಗಿಡಗಳಿಗೆ ಗೊಬ್ಬರ ಹಾಕಿ, ಟ್ಯಾಂಕರ್ ಮೂಲಕ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಲಿಂಗಸುಗೂರು ಪಟ್ಟಣದ ಪ್ರಮುಖ ರಸ್ತೆ, ಶಾಲಾ-ಕಾಲೇಜು, ವಿವಿಧ ಲೇಔಟ್‌ಗಳಲ್ಲಿ ಮತ್ತು ಮಸ್ಕಿ, ಮುದಗಲ್ಲ ನಗರಗಳಲ್ಲಿ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ವಿವಿಧೆಡೆ ಸಸಿ ನೆಡೆಲು ಗುಂಡಿಗಳನ್ನು ತೋಡಲಾಗಿದೆ.
ತಾಲೂಕಿನಲ್ಲಿ ಅರಣ್ಯ ಇಲಾಖೆಯ 12,343 ಹೇೆಕ್ಟೆರ್ ಅರಣ್ಯ ಭೂ ದೇಶವಿದೆ. ಈ ಪೈಕಿ 8,467.18 ಎಕರೆ ಪ್ರದೇಶ ಅರಣ್ಯೀಕರಣಕ್ಕಾಗಿ ಕಾಯ್ದಿರಿಸಲಾಗಿದೆ. 2,154.05 ಎಕರೆ ರಕ್ಷಿತ ಅರಣ್ಯ ಪ್ರದೇಶವಾಗಿದೆ. 19,395.33 ಎಕರೆ ಅವರ್ಗಿಯ ಅರಣ್ಯ ಪ್ರದೇಶವಾಗಿದೆ.
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕೆಲವೆಡೆಗಳಲ್ಲಿ ನೆಡಲಾದ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತದೆ. ಬರುವ ಮುಂಗಾರು ಹಂಗಾಮಿನಲ್ಲಿ ಮಳೆ ನಿರೀಕ್ಷೆಯೊಂದಿಗೆ ಅರಣ್ಯೀಕರಣ ಕಾರ್ಯ ಚುರುಕುಗೊಳಿಸಲಾಗುತ್ತಿದೆ.
.ರಾಜೇಶ,ಅಧ್ಯಕ್ಷರು,
ಸಾಮಾಜಿಕ ವಲಯ ಅರಣ್ಯಾಧಿಕಾರಿ
ಶಿವರಾಜ ಕೆಂಬಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.