ಪಾಕ್ ಏಜೆಂಟ್‌ರಂತೆ ರಾಹುಲ್ ವರ್ತನೆ
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಶೆಟ್ಟರ ಟೀಕೆ ಹೈಕ ಭಾಗದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ
Team Udayavani, Apr 10, 2019, 4:12 PM IST
ಲಿಂಗಸುಗೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಉದ್ಘಾಟಿಸಿದರು.
ಲಿಂಗಸುಗೂರು: ರಾಹುಲ್ ಗಾಂಧಿ ದೇಶದ ಸೈನಿಕರ ಕರ್ತವ್ಯವನ್ನು ಸಂಶಯದಿಂದ ಕಂಡು ಅವರ ಆತ್ಮಸ್ಥೈರ್ಯ ಕುಗ್ಗಿಸುವ ರೀತಿ ಮಾತನಾಡುತ್ತಿದ್ದಾರೆ. ಪಾಕ್ ಪರ ಹೇಳಿಕೆ ನೀಡುತ್ತಿರುವ ರಾಹುಲ್‌ಗಾಂಧಿ ಆ ದೇಶದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಾಗ್ಧಾಳಿ ನಡೆಸಿದರು.
ಲೋಕಸಭೆ ಚುನಾವಣೆ ಪ್ರಚಾರಾರ್ಥ ಪಟ್ಟಣದ ಬಿಜೆಪಿ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿ ಕಾರದಲ್ಲಿದ್ದಾಗ ಉಗ್ರಗಾಮಿಗಳು ಅನೇಕ ಕಡೆ ಬಾಂಬ್ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ಸೈನಿಕರು ಸಿದ್ಧರಿದ್ದರೂ ಅವರಿಗೆ ಕಾಂಗ್ರೆಸ್ ಸರ್ಕಾರ ಅ ಧಿಕಾರ ನೀಡಲಿಲ್ಲ. ಹೀಗಾಗಿ ದೇಶದ ಭದ್ರತೆಗೆ ಅಪಾಯ ಬಂದೊದಗಿತ್ತು. ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ದಾಳಿ ನಡೆಸುವ ಉಗ್ರರನ್ನು ಮಟ್ಟ ಹಾಕಲು ಸೈನಿಕರಿಗೆ ಪರಮಾಧಿಕಾರ ನೀಡಿದ್ದಾರೆ. ಇದು ಮೋದಿಯವರ ತಾಕತ್ತು. ಪಾಕಿಸ್ತಾನ ಪೋಷಿತ ಉಗ್ರರ ನೆಲೆಗಳ ಮೇಲೆ ದೇಶದ ಸೈನಿಕರು ದಾಳಿ ನಡೆಸಿದರೆ ಇದಕ್ಕೆ ರಾಹುಲ್ ಗಾಂಧಿ
ಸಾಕ್ಷಿ ಕೇಳುತ್ತಾರೆ. ಹಾಗಾದರೆ ರಾಹುಲ್ ಸೋನಿಯಾ ಗಾಂಧಿಯವರ ಮಗ ಎಂಬುದಕ್ಕೆ ಸಾಕ್ಷಿ ಕೇಳಬೇಕಾ ಎಂದು ಪ್ರಶ್ನಿಸಿದರು.
60 ವರ್ಷಗಳ ಕಾಲ ಏನೂ ಮಾಡದ ಕಾಂಗ್ರೆಸ್ ಈಗ ಮತ್ತೆ ಅ ಧಿಕಾರಕ್ಕಾಗಿ ಹಾತೊರೆಯುತ್ತಿದೆ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡತನ ನಿರ್ಮೂಲನೆ ಬಗ್ಗೆ ಹೇಳುತ್ತಲೇ ಇದೆ. ಆದರೆ 60 ವರ್ಷಗಳ ಕಾಲ ದೇಶದ ಅಭಿವೃದ್ಧಿ ಮರೆತು ಲೂಟಿ ಮಾಡುವುದರಲ್ಲೇ ಕಾಲ ಕಳೆದಿದೆ. ದೇಶದಲ್ಲಿ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ ಎಂದರು.
ದೇಶದ ರಕ್ಷಣೆಗಾಗಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ಅಗತ್ಯ ಎಂಬುದು ಜನರೇ ನಿರ್ಧರಿಸಿದ್ದಾರೆ. ನರೇಂದ್ರ ಮೋದಿಯವರ ದಿಟ್ಟತನ ನಿರ್ಧಾರ, ಜನಪ್ರಿಯ ಯೋಜನೆಗಳು, ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದನ್ನು ಅರಿತಿರುವ ಜನ ಮೋದಿ ಅವರನ್ನು ಮತ್ತೇ ಪ್ರಧಾನಿ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮತ್ತೆ ಅಧಿ ಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.
ಹೈದರಾಬಾದ್ ಕರ್ನಾಟಕ ಭಾಗದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಲಿಂಗಸುಗೂರು ತಾಲೂಕಿನವರಾದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಶೆಟ್ಟರ್ ಕರೆ ನೀಡಿದರು.
ಸುರಪುರ ಶಾಸಕ ರಾಜುಗೌಡ ಮಾತನಾಡಿ, ಪಾಕಿಸ್ತಾನದ ಮೇಲೆ ನಡೆದ ದಾಳಿಯನ್ನು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಹೇಳಿಕೆ ನೀಡುವ ಮೂಲಕ ವೋಟಿಗಾಗಿ ಬಿ.ವಿ.ನಾಯಕರು ತಮ್ಮ ಸ್ವಾಭಿಮಾನವನ್ನೇ ಮಾರಾಟ ಮಾಡಿದ್ದಾರೆ. ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ನೀಡದೇ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದೇ ಎಲ್ಲಿ ಹೋಗಿದ್ದರು, ಗುಬ್ಬಿ ಹುಡುಕಲು ಹೋಗಿದ್ದರಾ ಎಂದು ಪ್ರಶ್ನಿಸಿದರು.
ಬಿ.ವಿ. ನಾಯಕರನ್ನು ಗೆಲ್ಲಿಸಲು ಸಚಿವ ಸತೀಶ ಜಾರಕಿಹೊಳಿ ಅವರು ವಾಲ್ಮೀಕಿ ಸಮಾಜದ ಮುಖಂಡರ ಮನೆಗೆ ಹೋಗಿ ಬರುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ವಾಲ್ಮೀಕಿ ಸಮಾಜ ನೆನಪಾಗುತ್ತಾ..? ಎಂದು ಹರಿಹಾಯ್ದರು.
ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ಶಾಸಕರಾದ ಶಿವರಾಜ ಪಾಟೀಲ, ಹಾಲಪ್ಪ ಆಚಾರ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಜಿಪಂ ಅಧ್ಯಕ್ಷೆ ಆದಮನಿ ವೀರಲಕ್ಷ್ಮೀ , ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಎನ್.ಶಂಕ್ರಪ್ಪ, ಶಂಕರಗೌಡ ಅರವಿ, ಟಿ.ಆರ್.ನಾಯ್ಕ, ತ್ರಿವಿಕ್ರಮ ಜೋಶಿ, ಶಶಿರಾಜ ಮಸ್ಕಿ, ಡಾ| ಶಿವಬಸಪ್ಪ, ಗಿರಿಮಲ್ಲನಗೌಡ ಕರಡಕಲ್, ವೀರನಗೌಡ ಲೆಕ್ಕಿಹಾಳ ಇತರರು ಇದ್ದರು.
ದೇವೇಗೌಡರ ಮತ್ತೆ ಪ್ರಧಾನಿ ಕನಸು ಭಗ್ನ
ಮಾಜಿ ಪ್ರಧಾನಿ ದೇವೇಗೌಡರು ಮತ್ತೂಮ್ಮೆ ಪ್ರಧಾನಿ ಆಗಬೇಕೆಂಬ ಆಸೆಯಿಂದ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಘಟಬಂಧನ್‌ದ ಎಲ್ಲ ಪ್ರಮುಖರನ್ನು ಆಹ್ವಾನಿಸಿದ್ದರು. ಆದರೆ ಈಗ ಅವರೆಲ್ಲರೂ ಇವರಿಗೆ ಕೈಕೊಟ್ಟಿದ್ದಾರೆ. ದೇವೇಗೌಡರ ಪ್ರಧಾನಿ ಆಗುವ ಕನಸು ಭಗ್ನವಾಗಿದೆ. ಜೆಡಿಎಸ್ ಕೇವಲ ತಂದೆ-ಮಕ್ಕಳ ಪಕ್ಷವಲ್ಲ ಸೊಸೆ, ಮೊಮ್ಮಕ್ಕಳ ಪಕ್ಷವಾಗಿದೆ. ಮೂರು ಕಡೆಗಳಲ್ಲಿ ದೇವೇಗೌಡರ ಕುಟಂಬದವರು ಸರ್ಧಿಸಿದ್ದಾರೆ ಅಲ್ಲಿನ ಜನತೆ ಕುಟಂಬ ರಾಜಕಾರಣಕ್ಕೆ ಬೇಸತ್ತಿದ್ದಾರೆ. ಪತ್ನಿ ಚೆನ್ನಮ್ಮ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರೆ ದೇವೇಗೌಡರ ಆಸೆ ಪೂರ್ತಿ ಆಗುತ್ತದೆ ಎಂದು ಶೆಟ್ಟರ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.