ಗ್ರಂಥಾಲಯ ವಂಚಿತ ಅಲೆಮಾರಿಗಳು
ಎರಡು ಗ್ರಂಥಾಲಯ ಬಂದ್ ಹಳೆ ಕಟ್ಟಡಗಳು ಶಿಥಿಲ ಅನುದಾನವಿದ್ದರೂ ಹೊಸ ಕಟ್ಟಡ ನಿರ್ಮಾಣವಿಲ್ಲ
Team Udayavani, Oct 23, 2019, 3:21 PM IST
ಶಿವರಾಜ ಕೆಂಭಾವಿ
ಲಿಂಗಸುಗೂರು: ಅಲೆಮಾರಿ ಸಮುದಾಯ ದವರು ವಿದ್ಯೆ, ಜ್ಞಾನ, ಓದುವ ಅಭಿರುಚಿ ಬೆಳೆಸಿಕೊಂಡು ಸಾಕ್ಷರತಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಪಟ್ಟಣದಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಎರಡು ಗ್ರಂಥಾಲಯ ತೆರೆಯಲಾಗಿತ್ತು ಆದರೆ ಗ್ರಂಥಪಾಲಕರ ನಿರ್ಲಕ್ಷ್ಯದಿಂದ ಹಲವಾರು ತಿಂಗಳಿಂದ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದೆ.
ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯನ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತಿದೆ. ಆದರೆ ಪಟ್ಟಣದ ಸಂತೆಬಜಾರ್‌ನಲ್ಲಿ ಹಳೆಯ ಸುಣಗಾರಗಲ್ಲಿ ಶಾಲಾ ಕಟ್ಟಡವೊಂದರಲ್ಲಿ ನಡೆಸುತ್ತಿರುವ ಅಲೆಮಾರಿ ಗ್ರಂಥಾಲಯ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದೆ.
ಮತ್ತೊಂದು ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ತೆರೆಯಲಾಗಿದೆ. ಆದರೆ ಈ ಬಗ್ಗೆ ಅಲೆಮಾರಿ ಸಮುದಾಯಕ್ಕೆ ಮಾಹಿತಿ ಇಲ್ಲದಿರುವುದರಿಂದ ಗ್ರಂಥಾಲಯ ಸೌಲಭ್ಯದಿಂದ ಅಲೆಮಾರಿ ಸಮುದಾಯ ದೂರ ಉಳಿದಿದೆ.
ಅಲೆಮಾರಿ ಸಮುದಾಯ ಗ್ರಂಥಾಲಯ ನಡೆಸುತ್ತಿರುವ ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆ ಯಲ್ಲಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷದ ಹಿಂದೆಯೇ 10 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಯಲ್ಲಿ ಹಳೆ ಕಟ್ಟಡ ತೆರವುಗೊಳಿಸುವುದಕ್ಕೆ ಅನುದಾನ ಕೊರತೆ ಇರುವುದರಿಂದ
ಹೊಸ ಕಟ್ಟಡ ನಿರ್ಮಾಣ ಕಾರ್ಯ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದೆ.
ಒಂದೂವರೆ ವರ್ಷದಿಂದ ಗ್ರಂಥಾಲಯ ಬಂದ್ ಆಗಿದ್ದರೂ ಗ್ರಂಥಪಾಲಕನಿಗೆ ಮಾತ್ರ ಪ್ರತಿ ತಿಂಗಳು ಸಂಬಳ ಕೈ ಸೇರುತ್ತಿದೆ. ಇದಲ್ಲದೆ ಪತ್ರಿಕೆಗಳನ್ನು ತರಿಸದಿದ್ದರೂ ಅವುಗಳ ಬಿಲ್ ಗ್ರಂಥಪಾಲಕನ ಜೇಬಿಗೆ ಸೇರುತ್ತಿದೆ. ಗ್ರಂಥಾಲಯ ತೆಗೆಯದಿದ್ದರೂ ಸಂಬಳ ನೀಡುತ್ತಿರುವ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳ ಕಾರ್ಯವೈಖರಿ ಮೆಚ್ಚುವಂತಹದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.