ಬೇಡಿಕೆಯೇ ದಲ್ಲಾಳಿಗಳಿಗೆ ವರದಾನ ಸಮೃದ್ಧಿ ಬೆಳೆ ಬಂದರೂ ರೈತರಿಗಿಲ್ಲ ಲಾಭ
ಜೋರಾಗಿದೆ ಅವರೆಕಾಯಿ ಮಾರಾಟ
Team Udayavani, Dec 26, 2019, 6:05 PM IST
ತಿರುಮಲೆ ಶ್ರೀನಿವಾಸ್
ಮಾಗಡಿ: ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಮಾರಾಟ ಭರದಿಂದ ನಡೆಯುತ್ತಿದ್ದು, ಇದರಿಂದಾಗಿ ಎಲ್ಲೆಡೆ ಅವರೆ ಕಾಯಿಯ ಸೊಗಡು ಗಮಗಮಿಸುತ್ತಿದೆ. ಮಾಗಡಿ ಕಲ್ಲುಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿನ ಕೆಂಪು ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದ ಅವರೆಕಾಯಿ ಬಹಳ ಚೆನ್ನಾಗಿ ಬರುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾದಂತೆಲ್ಲ ಅವರೆಕಾಯಿಯ ಸೊಗಡು ಹೆಚ್ಚಾಗಿಯೇ ಇರುತ್ತದೆ. ರುಚಿಯೂ ಅಧಿಕವಾಗಿರುತ್ತದೆ. ಇದರಿಂದ ಬೆಂಗಳೂರಿನಲ್ಲಿ ಮಾಗಡಿ ಅವರೆಕಾಯಿಗೆ ಭಾರಿ ಬೇಡಿಕೆ ಇದೆ.
ದಲ್ಲಾಳಿಗಳ ಲಾಭ: ತಾಲೂಕಿನಲ್ಲಿ ಸುಮಾರು 3 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಅವರೆಕಾಯಿ ಬೆಳೆಯುತ್ತಾರೆ. ರೈತರು ತಮ್ಮ ಹೊಲದಲ್ಲಿ ಅವರೆಕಾಯಿ ಕಿತ್ತು ಮುಂಜಾನೆಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ದಳ್ಳಾಳಿಗಳು ಬೆಂಗಳೂರಿನಿಂದ ಮಾಗಡಿಗೆ ಬಂದು ಕಡಿಮೆ ಬೆಲೆಗೆ ಖರೀದಿಸಿ, ಬೆಂಗಳೂ ರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೊಳ್ಳುತ್ತಾರೆ.
ಹುಣುಸೂರು ಅವರೆಕಾಯಿ ಮಾರಾಟ: ಮಾಗಡಿ ಅವರೆಕಾಯಿಗೆ ಬೇಡಿಕೆ ಹೆಚ್ಚಾದಂತೆಲ್ಲ. ಬೆಲೆಯಲ್ಲಿಯೂ ಹೆಚ್ಚಾಗಿದ್ದು, ಮಾಗಡಿಯಲ್ಲಿ ಕೆ.ಜಿ. ಅವರೆಕಾಯಿಗೆ 35 ರಿಂದ 50 ರೂ. ವರೆಗೂ ಮಾರಾಟವಾಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹುಣಸೂರಿನಿಂದ ಕಡಿಮೆ ಬೆಲೆಗೆ ಅವರೆಕಾಯಿ ಖರೀದಿಸಿ ತಂದು ಮಾಗಡಿ ಅವರೆಕಾಯಿ ಎಂದು ಸುಳ್ಳು ಹೇಳಿ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಜನರನ್ನು ಯಾಮಾರಿಸುವುದುಂಟು. ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತ, ತಾಲೂಕಿನ ವೆಂಗಳಪ್ಪನಹಳ್ಳಿ, ಕುದೂರು, ಮರೂರು, ತಿಪ್ಪಸಂದ್ರ ರಸ್ತೆ ಬದಿಗಳಲ್ಲಿ ಅವರೆಕಾಯಿ ಮಾರಾಟದ ರಾಶಿ,ರಾಶಿ ಕಣ್ಣಿಗೆ ರಾಚುತ್ತದೆ. ಕಾರು,ಬೈಕ್ ನಲ್ಲಿ ರಸ್ತೆಯಲ್ಲಿ ಸಂಚರಿಸುವವರು ವಾಹನಗಳನ್ನು ನಿಲ್ಲಿಸಿ ಮಾಗಡಿ ಅವರೆಕಾಯಿ ಎಂದೇ ಖರೀದಿಸುತ್ತಾರೆ. ಕೆಲವೆಡೆ ಮಾಗಡಿ ಅವರೆಕಾಯಿ ಜತೆಗೆ ಹುಣುಸೂರಿನ ಅವರೆ ಕಾಯಿ ಮಿಶ್ರಣ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜನರನ್ನು ಯಾಮಾರಿಸಿ ಹಣ ಗಳಿಸುವುದರಿಂದ ಗ್ರಾಹಕರ ಅಸಮಧಾನಕ್ಕೂ ಕಾರಣವಾಗಿದೆ.
ಅವರೆಕಾಯಿಯ ಮೇಳ: ಅದರಲ್ಲೂ ಚುಮ ಚುಮ ಚಳಿಗೆ ಅವರೆಕಾಯಿಯ ಖ್ಯಾದಗಳನ್ನು ತಯಾರಿಸಿಕೊಂಡು ಸವಿಯಲು
ಹೇಳಿ ಮಾಡಿಸಿದಂತ ಧನುರ್ಮಾಸ. ಈ ಮಾಸದಲ್ಲೇ ಅವರೆಕಾಯಿಯಿಂದ ತಯಾರಿಸಿದ ಆಹಾರ ಮೇಳ ಸಹ ಹಲವು ವರ್ಷಗಳಿಂದಲೂ ಬೆಂಗಳೂರಿನ ವಿಶ್ವೇಶ್ವರಪುರಂನ ವಾಸವಿ ರಸ್ತೆಯಲ್ಲಿ ಮತ್ತು ಮಲ್ಲೇಶ್ವರಂನಲ್ಲಿ ನಡೆದುಕೊಂಡು ಬರುತ್ತಿದೆ. ಅವರೆಕಾಯಿಯ ಖ್ಯಾದ ಆಹಾರ ಪ್ರಿಯರನ್ನು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.
ಕೆಂಪು, ಮರಳು ಮಿಶ್ರಿತ ಭೂಮಿಯಾಗಿರುವುದರಿಂದ
ಉತ್ತಮ ಇಳುವರಿಬರುತ್ತದೆ. ಸೊಗಡಿನಿಂದ ಕೂಡಿದ ಮಾಗಡಿ
ಅವರೆಕಾಯಿ ಬಹಳ ರುಚಿಯಾಗಿರುತ್ತದೆ. ಆದ್ದರಿಂದ ಪಟ್ಟಣ ನಗರ ಪ್ರದೇಶದಲ್ಲಿ ಅತ್ಯಂತಬೇಡಿಕೆಯೂ ಇದೆ.
● ಶಿವಶೆಂಕರ್,
ಸಹಾಯಕ ಕೃಷಿ ನಿರ್ದೇಶಕ
ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ದಳ್ಳಾಳಿಗಳ ಕಪಿ ಮುಷ್ಠಿಗೆ ರೈತರು ಸಲಕಿ ನಷ್ಟ ಹೊಂದಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರೈತರು ಬೆಳೆದ ಬೆಳೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ತುಂಬ ಅನಕೂಲವಾಗುತ್ತದೆ.
●ಸಿ. ರಾಜಣ್ಣ ,
ವಿಠಲಾಪುರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.