ಕೆಂಪೇಗೌಡ ಜಯಂತಿ ಆಚರಣೆ ಅರ್ಥಪೂರ್ಣವಾಗಿರಲಿ
ಕೆಂಪೇಗೌಡ ಕಾಲದ ಪಳೆಯುಳಿಕೆ ಉಳಿಸುವ ಕೆಲಸವಾಗಲಿ, ರಾಜಕಾರಣಿಗಳು ಭಾಷಣಕ್ಕೆ ಸಿಮೀತ ಬೇಡ
Team Udayavani, Jun 27, 2019, 4:54 PM IST
ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ.
ಮಾಗಡಿ: ಬೃಹತ್ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ ಜಯಂತಿ ಕೇವಲ ರಾಜಕಾರಣಿಗಳ ಭಾಷಣಕ್ಕೆ ಸಿಮೀತವಾಗಿದೆ. ಅವರು ಕಟ್ಟಿದ ಗುಡಿ, ಗೋಪುರಗಳು, ಕೋಟೆ ಕೊತ್ತಲುಗಳು, ಕೆರೆಕಟ್ಟೆ, ಕಲ್ಯಾಣಿಗಳು ಕಣ್ಮರೆಯಾಗಿವೆ. ಅವುಗಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕೆಲಸವೂ ಆಗಿಲ್ಲ. ಪ್ರವಾಸಿ ತಾಣವೂ ಇಲ್ಲ. ಜೂ.27ರ ಗುರುವಾರ ನಡೆಯಲಿರುವ ಕೆಂಪೇಗೌಡ ಜಯಂತಿ ಆರ್ಥಪೂರ್ಣವಾಗಿರಲಿ, ಅವರ ಕಾಲದ ಪಳೆಯುಳಿಕೆಗಳನ್ನು ಉಳಿಸುವ ಕೆಲಸವಾಗಲಿ ಎಂಬುದೇ ಎಲ್ಲರ ಆಶಯ.
ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷ: ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ ಪತ್ತೆಯಾಗಿ 4 ವರ್ಷಗಳೇ ಕಳೆದಿದೆ. ರಾಷ್ಟ್ರ ನಾಯಕರು, ರಾಜ್ಯದ ಸಚಿವರು, ಬಿಬಿಎಂಪಿ ಮೇಯರ್, ಸದಸ್ಯರು, ಮಠಾಧೀಶರು, ಕೆಂಪೇಗೌಡ ಅಭಿಮಾನಿಗಳು ಭೇಟಿ ನೀಡಿದ್ದಾರೆ. ಪೂಜೆ ಪುರಸ್ಕಾರಗಳ ಮಾಡಿ ಅವರ ಆದರ್ಶ ತತ್ವಗಳನ್ನು ಹಾಡಿ ಹೊಗಳಿ ಹೋದರು. ಈ ಐಕ್ಯಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವುದಾಗಿ ವೇದಿಕೆ ಏರಿ ಮಾರುದ್ದ ಭಾಷಣ ಬಿಗಿದು ಹೋದವರು ಇಲ್ಲಿಯವರೆವಿಗೂ ಒಬ್ಬ ನಾಯಕನಾಗಲಿ ಹಿಂತಿರುಗಿ ನೋಡಿಲ್ಲ. ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದೆ. ಸರ್ಕಾರ ಸಹ ಕೋಟ್ಯಂತರ ರೂ. ಮಂಜೂರು ಮಾಡಿದ್ದಾಗಿ ಮಾಧ್ಯಮಗಳ ಮೂಲಕ ಪ್ರಚಾರಗಿಟ್ಟಿಸಿಕೊಂಡರು. ಬಿಬಿಎಂಪಿ ಸಹ 5 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದಾಗಿ ಹೇಳಿಕೆ ಸಹ ನೀಡಿ ನಾಲ್ಕುವರ್ಷಗಳೆ ಕಳೆದಿದೆ. ನಯಾ ಪೈಸೆ ಖರ್ಚಾಗಿಲ್ಲ.
ಹಿರಿಯ ಕೆಂಪೇಗೌಡರ ಸಮಾಧಿ ಶಿಥಿಲ:
ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಅವರ ಸಮಾಧಿ ಶಿಥಿಲಗೊಂಡಿದೆ. ದಿನೇ ದಿನೆ ಕಾಲನ ಲೀಲೆಗೆ ಕರಗಿ ಹೋಗುತ್ತಿದೆ. ಇದರ ಸಂರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ವರ್ಷಕ್ಕೊಮ್ಮೆ ಕೆಂಪೇಗೌಡ ಹೆಸರಿನಲ್ಲಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಕೆಂಪೇಗೌಡ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಿದೆ. ಕೆಂಪೇಗೌಡರ ಕಾಲದ ಪಳಯುಳಿಕೆಗಳ ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿÃುವುದು ನಿಜಕ್ಕೂ ಕೆಂಪೇಗೌಡರಿಗೆ ಮಾಡುವ ಅಪಮಾನವಾಗಿದೆ.
ಇನ್ನಾದರೂ ಸರ್ಕಾರ ಎಚ್ಚೆತ್ತು ಇಲ್ಲಿನ ಕೆಂಪಾಪುರದಲ್ಲಿನ ಹಿರಿಯ ಕೆಂಪೇಗೌಡ ಐಕ್ಯ ಸ್ಥಳವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಅವರ ಕಾಲದ ಎಲ್ಲಾ ಗುಡಿಗೋಪುರಗಳು, ಕೋಟೆ ಕೊತ್ತಲುಗಳು, ಕೆರೆಕಟ್ಟೆ, ಕಲ್ಯಾಣಿಗಳ ಸಂರಕ್ಷಣೆ ಮಾಡುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ಅಭಿಮಾನಿಗಳ ಆಶಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.