ಮದ್ದೂರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ
Team Udayavani, Apr 20, 2019, 11:31 AM IST
ಮದ್ದೂರು: ಮಂಡ್ಯ ಕ್ಷೇತ್ರದ ಲೋಕಸಭೆ ಚುನಾವಣೆ ಶಾಂತಿಯುತವಾಗಿ ಮುಗಿ ದಿದ್ದು ತಾಲೂಕು ಸೇರಿದಂತೆ ಪಟ್ಟಣ ದೆಲ್ಲೆಡೆ ಸೋಲು, ಗೆಲುವಿನ ಲೆಕ್ಕಾಚಾರ ವನ್ನು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ.
ಎಲ್ಲೆಡೆ ಚರ್ಚೆ: ತಾಲೂಕಿನ ಕೆ.ಹೊನ್ನಲಗೆರೆ, ಕೆಸ್ತೂರು, ಬೆಸಗರಹಳ್ಳಿ, ಕೊಪ್ಪ, ಭಾರತಿನಗರ ಸೇರಿ ಪಟ್ಟಣದ ಪ್ರಮುಖ ಜನಸಂದಣಿ ಪ್ರದೇಶಗಳಾದ ಶಿಂಷಾ ಬ್ಯಾಂಕ್, ತಾಲೂಕು ಆಸ್ಪತ್ರೆ, ಸಂಜಯ ವೃತ್ತ, ಪ್ರವಾಸಿಮಂದಿರ ಸೇರಿದಂತೆ ಶಿವಪುರ ಸಾರ್ವಜನಿಕ ಸ್ಥಳಗಳಲ್ಲಿ ಜೆಡಿಎಸ್, ಕಾಂಗ್ರೆಸ್, ರೈತ ಸಂಘ ಹಾಗೂ ಬಿಜೆಪಿ ಮತ್ತು ಅಂಬರೀಶ್ ಅಭಿಮಾನಿಗಳು ಚರ್ಚೆಯಲ್ಲಿ ನಿರತರಾಗುವ ಜತೆಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ.
ಈ ಬಾರಿ ಹೆಚ್ಚು ಮತದಾನ: 2014ರ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರಾದ್ಯಂತ ಶೇ.73 ಮತದಾನ ನಡೆದಿತ್ತಲ್ಲದೇ ಪ್ರಸಕ್ತ ಸಾಲಿನಲ್ಲಿ ಶೇ.82.33 ಮತದಾನ ನಡೆದಿದೆ. ಕ್ಷೇತ್ರಾದ್ಯಂತ 208080 ಒಟ್ಟು ಮತದಾರರಿದ್ದು ಈ ಪೈಕಿ 85461 ಪುರುಷರು, 85846 ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು 171307 ಮಂದಿ ಮತದಾನ ಮಾಡಿದ್ದಾರೆ.
ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮತದಾನ ನಡೆದಿರುವುದು ಗೆಲುವು ಯಾರ ಮುಡಿಗೆ ಸೇರಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿ ಬೆಂಬಲಿಗರು ಗೆಲುವು ಖಚಿತವೆಂದು ಹೇಳುತ್ತಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರು ಗೆಲುವು ಶತಸಿದ್ಧವೆನ್ನುತ್ತಿದ್ದಾರೆ.
ಕಾಯಬೇಕಿದೆ: ಗ್ರಾಮೀಣ ಭಾಗಗಳಲ್ಲಿ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾಅಂಬರೀಶ್ ಬೆಂಬಲಿಗರು ಬೆಟ್ಟಿಂಗ್ ಭರಾಟೆಯಲ್ಲಿ ನಿರತರಾಗಿರುವುದು ಸಾಮಾನ್ಯವಾಗಿದ್ದು ಮತದಾರ ಯಾರ ಕೈಹಿಡಿದ್ದಾನೆಂಬುದು ಮೇ 23ರ ಬಳಿಕವೇ ತಿಳಿಯಲಿದೆ. ಅಲ್ಲಿಯವರೆಗೂ ಮತದಾರ ಕಾಯಲೇಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.