11 ಕಲ್ಲುಗಣಿ, 22 ಕ್ರಷರ್‌ ಗುತ್ತಿಗೆ ರದ್ದು

ಪರಿಸರ ವಿಮೋಚನಾ ಪತ್ರವನ್ನು ಸಲ್ಲಿಸದ ಹಿನ್ನೆಲೆ: ಜು.31ರಿಂದ ರದ್ದು ಜಾರಿ: ಹಿರಿಯ ಭೂ ವಿಜ್ಞಾನಿ ಎಂ.ವಿ.ಪದ್ಮಜಾ

Team Udayavani, Aug 4, 2021, 6:01 PM IST

Mining

ಸಾಂದರ್ಭಿಕ ಚಿತ್ರ..

ಮಂಡ್ಯ: ಜು.28ರಂದು ನಡೆದ ಜಿಲ್ಲಾ ಟಾಸ್ಕ್ ಪೋರ್ಸ್‌ ಸಮಿತಿ ಸಭೆಯಲ್ಲಿ ಪರಿಸರ ವಿಮೋಚನಾ ಪತ್ರವನ್ನು ಸಲ್ಲಿದ 11 ಕಲ್ಲುಗಣಿ ಗುತ್ತಿಗೆ ಹಾಗೂ 22 ಕ್ರಷರ್‌ಗಳ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಂ.ವಿ.ಪದ್ಮಜಾ ತಿಳಿಸಿದ್ದಾರೆ.

ಜು.31ರಿಂದ ಜಾರಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ‌ ಘಟಕಗಳ ಲೈಸೆನ್ಸಿಂಗ್‌ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ತೀರ್ಮಾನದಂತೆ ಅವಧಿ ವಿಸ್ತರಿಸಿ ನೀಡಿ ‌ಕಲ್ಲುಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧ ‌ಪಟ್ಟ ಪ್ರಾಧಿಕಾರದಿಂದ ಇದುವರೆಗೆ ಪರಿಸರ ವಿಮೋಚನಾ ಪತ್ರ ಪಡೆದು ಕಚೇರಿಗೆ ಹಾಜರುಪಡಿಸದೆ ಇರುವ ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲು ಗ್ರಾಮ ವ್ಯಾಪ್ತಿಯಲ್ಲಿ 11 ಕಲ್ಲುಗಣಿ ಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿದೆ. ಇದು ಜು.31ರಿಂದ ರದ್ದು ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ.

ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ‌ ಲೈಸೆನ್ಸಿಂಗ್‌ ಮತ್ತು ನಿಯಂತ್ರಣ ಪ್ರಾಧಿಕಾರ ‌ ಕ್ರಷರ್‌ ಪರವಾನಿಗೆಗೆ ಸಹಿ ಮಾಡಿ ವಿತರಿಸಿರುವ ‌ ಕ್ರಷರ್‌ ಪರವಾನಿಗೆಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್‌ ಮತ್ತು ನಿಯಂತ್ರಣ ಪ್ರಾಧಿಕಾರವು 22 ಕ್ರಷರ್‌ಗಳ ಪರವಾನಿಗೆ (ಫಾರಂ-ಎ) ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಲಿತ ದಳ ರಚನೆ: ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗಮಂಗಲ ತಾಲೂಕುಗಳಲ್ಲಿ ಅ® ‌ಧಿಕೃತ ಕಲ್ಲುಗ ‌ಣಿಗಾರಿಕೆ, ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ಫೋರ್ಸ್‌ ವತಿಯಿಂದ ತಾಲೂಕು ವಾರು ಕಂದಾಯ, ಅರಣ್ಯ, ಪಂಚಾಯತ್‌ರಾಜ್‌, ಪೊಲೀಸ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡಂತೆ ಚಾಲಿತ ದಳವನ್ನು ರಚಿಸಲಾಗಿದೆ.

ಪ್ರತಿದಿನ 4 ಕೋಟಿ ರೂ. ಸರ್ಕಾರಕ್ಕೆ ಆದಾಯ
ಕೆಲವೊಂದು ಗಣಿಗಾರಿಕೆ ನಿಷೇಧಿಸುವ ಬಗ್ಗೆ ನನಗೂ ನಾಲ್ಕೆçದು ದಿನಗಳ ಹಿಂದೆಯೇ ಮಾಹಿತಿ ಬಂತು. ಆದರೆ ಯಾವ ರೀತಿಯಲ್ಲಿ ರದ್ದು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟಪಡಿಸಿಲ್ಲ ಎಂದು ಶ್ರೀರಂಗಪಟ್ಟಣದ ರೈತ ಮುಖಂಡ ಮಂಜೇಶ್‌ಗೌಡ ತಿಳಿಸಿದರು. ಉದಯವಾಣಿಗೆ
ಪ್ರತಿಕ್ರಿಯಿಸಿದ ಅವರು, ಹಿಂದೆ ಇದ್ದ ಹಿರಿಯ ಭೂ ವಿಜ್ಞಾನಿ ನಾಗಭೂಷಣ್‌ ಅವಧಿಯಲ್ಲಿ ಒಂದೇ ಕ್ವಾರೆಯನ್ನು ಐದು ಮಂದಿಗೆ ಅನುಮತಿ ನೀಡಿದ್ದರು. ಇದರಲ್ಲಿ ಒಂದು ಗಣಿ ಗುತ್ತಿಗೆ ರದ್ದು ಮಾಡಿದರೆ ಇನ್ನುಳಿದ ನಾಲ್ಕು ಮಂದಿ ನಡೆಸುತ್ತಾರೆ. ಕಲ್ಲನ್ನು ಬೇರೆ ಕಡೆ ಅಕ್ರಮವಾಗಿ ಅರಣ್ಯ ಪ್ರದೇಶದಿಂದ ತರಿಸಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಬೇಕು. ಇದರ ಬಗ್ಗೆ ನಾವು ದೂರು ನೀಡಿದ್ದೇವೆ. ಸರಿಯಾದ ಕ್ರಮ ಕೈಗೊಂಡರೆ ಪ್ರತಿದಿನ 4 ಕೋಟಿ ರೂ. ಸರ್ಕಾರಕ್ಕೆ ಆದಾಯ ಬರಲಿದೆ.

ಸೂಕ್ಷ್ಮಪ್ರದೇಶ:ಜಂಟಿ ತಂಡ ರಚನೆ
ಎಲ್ಲ ತಾಲೂಕುಗಳಲ್ಲಿ ನಡೆಯುತ್ತಿರುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ ಹಾಗೂ ಕ್ರಷರ್‌ ಘಟಕಗಳು ಕಾರ್ಯನಿರ್ವಹಣೆ ಸಂಬಂಧ ಅತೀ ಹೆಚ್ಚು ದೂರು ಬರುತ್ತಿರುವ ಪ್ರದೇಶಗಳಾದ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ, ಆನೆಕುಪ್ಪೆ, ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ, ಶಿಂಷಾ ನದಿ ಪಾತ್ರ, ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ, ಜಕ್ಕನಹಳ್ಳಿ, ಕಾಳೇನಹಳ್ಳಿ,ಗೌಡಹಳ್ಳಿ, ಗಣಂಗೂರು, ಹಂಗರಹಳ್ಳಿ,ಮುಂಡಗದೊರೆ, ಸಿದ್ದಾಪುರ, ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಕಾವಲು, ಚಿನಕುರಳಿ,ಕಾಮನಾಯಕನಹಳ್ಳಿ, ಶಂಭೂನಹಳ್ಳಿ, ನರಹಳ್ಳಿ, ನಾಗಮಂಗಲ ತಾಲೂಕಿನ ಸಂಕನಹಳ್ಳಿ, ಗಂಗಸಮುದ್ರ, ದೇವರಹೊಸೂರು,ಕಾಂತಾಪುರ, ಕೆ.ಆರ್‌.ಪೇಟೆ ತಾಲೂಕಿನ ಅಕ್ಕಿಹೆಬ್ಟಾಳು, ಹೇಮಾವತಿ ನದಿ ಪಾತ್ರ, ಮಳವಳ್ಳಿ ತಾಲೂಕಿನಆಗಸನಪುರ ಗ್ರಾಮಗಳನ್ನು ಸೂಕ್ಷ್ಮಪ್ರದೇಶಗಳೆಂದು ಗುರುತಿಸಿ ನಿಗಾ ವಹಿಸಲು ಕಂದಾಯ, ಅರಣ್ಯ, ಪಂಚಾಯತ್‌ರಾಜ್‌, ಪ್ರಾದೇಶಿಕ ಸಾರಿಗೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳ ಒಳಗೊಂಡಂತೆ ಜಂಟಿ ತಂಡಗಳ ರಚನೆ ಮಾಡಲಾಗಿದೆ.

119ವಾಹನ, 33.73 ಲಕ್ಷ ದಂಡ
ಜಿಲ್ಲೆಯಾದ್ಯಂತ ಅನಧಿಕೃತ ಉಪ ಖನಿಜ ಗಣಿಗಾರಿಕೆ, ದಾಸ್ತಾನು ಸಂಬಂಧ 12 ಪಿಸಿಆರ್‌ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ
ದಾಖಲಿಸಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ಅನಧಿಕೃತ ಉಪಖನಿಜ ಸಾಗಾಣಿಕೆ ಸಂಬಂಧ ಏಪ್ರಿಲ್‌ 2021ರಿಂದ ಇಲ್ಲಿಯವರೆಗೆ ಒಟ್ಟು 119 ವಾಹನಗಳಿಂದ 33.73 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

ಪೂರ್ಣ ಪ್ರಮಾಣದಲ್ಲಿ ಕ್ರಮಕೈಗೊಂಡಿಲ್ಲ. ನವೀಕರಣವಾಗದ ಹಾಗೂ ಪರಿಸರ ಇಲಾಖೆಯಿಂದ ವಿಮೋಚನಾ ಪತ್ರ ಸಲ್ಲಿಸದ ಗಣಿ ಹಾಗೂ
ಕ್ರಷರ್‌ ಎಂದು ಹೇಳಿದ್ದಾರೆ. ಆದರೆ ವಿಮೋಚನಾ ಪತ್ರ ಸಲ್ಲಿಸಿದ ಮೇಲೆ ಅನುಮತಿ ನೀಡುತ್ತೇವೆ ಎಂದರ್ಥವೇ?. ಕೂಡಲೇ ಸಂಪೂರ್ಣ ಕ್ರಮಕೈಗೊಳ್ಳಬೇಕು.
– ಕೆ.ಆರ್‌.ರವೀಂದ್ರ, ಆರ್‌ಟಿಐ ಕಾರ್ಯಕರ್ತ

ಸಂಪೂರ್ಣ ನಿಷೇಧಕ್ಕೆಕ್ರಮ ವಹಿಸಬೇಕು.ಕೆಲವೊಂದು ಮಾತ್ರ ರದ್ದುಪಡಿಸಲಾಗಿದೆ. ಆದರೆ, ಈಗಾಗಲೇ ಅನುಮತಿ ನೀಡಿರುವ ಗಣಿ ಗುತ್ತಿಗೆಗಳಲ್ಲಿ ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ. ಅಲ್ಲದೆ, ಪರವಾನಗಿ ಮುಗಿದಿದ್ದರೂ ಕಲ್ಲು ತೆಗೆಯುತ್ತಿದ್ದಾರೆ. ಇದರ ವಿರುದ್ಧಯಾವಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಜಿಲ್ಲೆಯ ಜನರ ಮುಂದೆ ರದ್ದುಪಡಿಸುವ ನಾಟಕವಾಡುತ್ತಿದ್ದಾರೆ.
– ತೇಜಸ್‌ಗೌಡ,ಕೋಡಿಶೆಟ್ಟಿಪುರ

ಇದೊಂದು ಕಣ್ಣೊರೆಸುವ ತಂತ್ರ.ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಸಂಸ್ಥೆಕೆಆರ್‌ಎಸ್‌ ವ್ಯಾಪ್ತಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ವರದಿ ನೀಡಿದೆ. ಅದರಂತೆ ಸಂಪೂರ್ಣವಾಗಿ ಗಣಿಗಾರಿಕೆಯನ್ನೇ ನಿಷೇಧಿಸುವ ಕ್ರಮ ಜರುಗಿಸಬೇಕು.ಕೆಲವು ಮಾತ್ರ ರದ್ದುಪಡಿಸಿದ್ದೇವೆ ಎಂದು ಹೇಳುವುದು ಸರಿಯಲ್ಲ.ಕೂಡಲೇ ಎಲ್ಲ ಗಣಿಗಾರಿಕೆಯನ್ನು ನಿಷೇಧಿಸಬೇಕು.
-ಎ.ಎಲ್‌.ಕೆಂಪೂಗೌಡ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

1-knna

Mandya:87ನೇ ಕನ್ನಡ ಸಾಹಿತ್ಯ ಸಮ್ಮೇಳನ:ಹಿಂದಿ ಹೇರಿಕೆಯ ವಿರುದ್ಧ ಕಹಳೆ-ಗೊ.ರು.ಚನ್ನ ಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.