ಮಂಡ್ಯ ಬಳಿ 1600 ಟನ್ ಲಿಥಿಯಂ ಪತ್ತೆ: ಎಎಂಡಿ ತಂಡದಿoದ ಪರಿಶೀಲನೆ
Team Udayavani, Jan 11, 2021, 11:00 PM IST
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಬಳಿ ಅಪರೂಪದ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ದೃಢಪಟ್ಟಿದ್ದು, ಇದು ಎಷ್ಟು ಪ್ರಮಾಣದಲ್ಲಿ ಸಿಗಲಿದೆ ಎಂದು ಸೋಮವಾರ ಕೇಂದ್ರದ ಪರಮಾಣು ಶಕ್ತಿ ಇಲಾಖೆಯ(ಡಿಎಇ) ಒಂದು ಭಾಗವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ(ಎಎoಡಿ)ಯ ತಂಡ ಪರಿಶೀಲನೆ ನಡೆಸಿದೆ.
ದೇಶದ ಯಾವುದೇ ಭಾಗದಲ್ಲೂ ಸಿಗದ ಅಪರೂಪದ ಲೋಹ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಭಾಗಗಳಲ್ಲೂ ಹುಡುಕಾಟ ನಡೆಸಿತ್ತು. ಅದರಂತೆ ಕಳೆದ ವರ್ಷ ಅಲ್ಲಾಪಟ್ಟಣ ಹಾಗೂ ಗಂಜ್ರಾ ಬಳಿಯ ಬೆಟ್ಟಗುಡ್ಡಗಳಲ್ಲಿ ಶೋಧ ನಡೆಸಿದಾಗ ಲಿಥಿಯಂ ಹಾಗೂ ಕಲ್ಲಿದ್ದಲು ಇರುವುದು ಗೊತ್ತಾಗಿತ್ತು. ಅಂದಿನಿoದಲೂ ಅಧಿಕಾರಿಗಳ ತಂಡ ಸಂಶೋಧನೆಯಲ್ಲಿ ತೊಡಗಿದ್ದರು.
ಲಿಥಿಯಂ ನಿಕ್ಷೇಪ ಬಹುಮುಖ್ಯವಾಗಿದ್ದು, ಎಲೆಕ್ಟ್ರಿಕ್ ವಾಹನಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್ ರಿಚಾರ್ಜ್ ಬ್ಯಾಟರಿ ಸೇರಿದಂತೆ ವಿವಿಧ ಯಂತ್ರೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ.
ಸೋಮವಾರ ಆಗಮಿಸಿದ್ದ ಎಎಂಡಿ ಸಂಶೋಧಕರ ತಂಡ ಅಲ್ಲಾಪಟ್ಟಣದ ಗುಡ್ಡದ ಮೇಲ್ಭಾಗದ ನೆಲ ಹಾಗೂ ಸ್ವಲ್ಪ ಒಳಭಾಗದಲ್ಲಿ ಸಂಶೋಧನೆ ನಡೆಸಿದಾಗ ಅಲ್ಪ ಪ್ರಮಾಣದ ಲಿಥಿಯಂ ಇರುವುದು ದೃಢಪಟ್ಟಿದೆ. ಕಳೆದ ವರ್ಷ ಸಂಶೋಧನೆ ನಡೆಸಿದ್ದ ತಂಡ ಲಿಥಿಯಂ ಇರಬಹುದು. ಸುಮಾರು 14 ಸಾವಿರ ಟನ್ ಲಿಥಿಯಂ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಸೋಮವಾರ ನಡೆಸಿದ ಸಂಶೋಧನೆ ತಂಡ ಪ್ರಾಥಮಿಕ ಸಮೀಕ್ಷೆಗಳ ಪ್ರಕಾರ 1600 ಟನ್ ಲಿಥಿಯಂ ನಿಕ್ಷೇಪ ಎಂದು ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
ಲಿಥಿಯಂ ನಿಕ್ಷೇಪಗಳು ಬಹಳ ಅಮೂಲ್ಯವಾದ ಸಂಪತ್ತಾಗಿದ್ದು, ಭಾರತವು ಸ್ವಾವಲಂಬನೆ ಸಾಧಿಸಲು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮುಂದುವರೆಯಬೇಕಾದರೆ ಲಿಥಿಯಂ ಅಗತ್ಯವಾಗಿದೆ. ಈಗಾಗಲೇ ಭಾರತ ವಿವಿಧ ದೇಶಗಳಿಂದ ಲಿಥಿಯಂ ಅನ್ನು ಅಮದು ಮಾಡಿಕೊಳ್ಳುತ್ತಿದೆ.
ರಾಜಸ್ಥಾನ, ಛತ್ತೀಸ್‌ಘಡ, ಗುಜರಾತ್ ಹಾಗೂ ಒಡಿಶಾ ರಾಜ್ಯಗಳ ವಿವಿಧ ಭಾಗಗಳಲ್ಲಿ ಲಿಥಿಯಂ ನಿಕ್ಷೇಪವನ್ನು ಹೊರತೆಗೆಯುವ ಕಾರ್ಯಗಳು ನಡೆಯುತ್ತಿವೆ. ಅದರ ಮಧ್ಯೆ ಮಂಡ್ಯದ ಶ್ರೀರಂಗಪಟ್ಟಣದ ಬಳಿ ಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಅಲ್ಲಾಪಟ್ಟಣ ಬಳಿ ಇದೇ ಸಂಶೋಧಕರ ತಂಡ ಸ್ಥಳದಲ್ಲಿ ಬೀಡು ಬಿಟ್ಟು ನಿಕ್ಷೇಪ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಆಗ ಲಿಥಿಯಂ ಇರುವುದು ದೃಢಪಟ್ಟಿತ್ತು. ನಂತರ ಕೊರೊನಾದಿಂದ ತಂಡ ಹುಡುಕಾಟ ಕಾರ್ಯ ನಿಲ್ಲಿಸಿತ್ತು. ಈಗ ಮತ್ತೆ ಮರು ಚಾಲನೆ ದೊರೆತಿದೆ.
ಶ್ರೀರಂಗಪಟ್ಟಣದ ಅಲ್ಲಾಪಟ್ಟಣ ಬಳಿ ಲಿಥಿಯಂ ಹಾಗೂ ಕಲ್ಲಿದ್ದಲು ಪತ್ತೆಯಾಗಿದೆ. ಇದು ಹಲವಾರು ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ಸೋಮವಾರ ಎಎಂಡಿ ತಂಡ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್ ಉದಯವಾಣಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.