25 ಸಾವಿರ ಹೆಕ್ಟೇರ್ ಪ್ರದೇಶದ ಕಬ್ಬು ಬೆಳೆ ಹಾನಿ
5,401 ಹೆಕ್ಟೇರ್‌ನಲ್ಲಿ ಉರುವಲಾಗಿರುವ ಬೆಳೆ • ನೀರು ಬಿಟ್ಟರೆ 19,817 ಹೆಕ್ಟೇರ್ ಬೆಳೆ ಉಳಿವ ಸಂಭವ
Team Udayavani, Jul 17, 2019, 12:47 PM IST
ಮಂಡ್ಯ ತಾಲೂಕು ಬೇವುಕಲ್ಲು ಗ್ರಾಮದಲ್ಲಿ ನೀರಿಲ್ಲದೇ ಕಬ್ಬು ಬೆಳೆ ಹಾನಿಯಾಗಿದೆ.
ಮಂಡ್ಯ: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿತು ಎಂಬಂತೆ ಬೆಳೆ ಒಣಗಿದ ಮೇಲೆ ನೀರು ಬಿಟ್ಟರೆ ಏನು ಪ್ರಯೋಜನ. ರೈತರು ನೀರಿಗಾಗಿ ಕೂಗಿಟ್ಟಾಗಲೇ ನಾಲೆಗಳಿಗೆ ನೀರು ಹರಿಸಿದ್ದರೆ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದ ಜಿಲ್ಲೆಯ 25218 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾನಿಗೊಳಗಾಗಿದೆ.
ಜಿಲ್ಲೆಯ 35268 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆದು ನಿಂತಿದೆ. ಈ ಪೈಕಿ 25218 ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದ್ದು, 10050 ಹೆಕ್ಟೇರ್ ಪ್ರದೇಶದ ಕಬ್ಬು ಬೆಳೆ ಉತ್ತಮ ಸ್ಥಿತಿಯಲ್ಲಿದೆ. 5401 ಹೆಕ್ಟೇರ್‌ನಲ್ಲಿರುವ ಕಬ್ಬು ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಗಿದೆ.
ಇದೀಗ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಿರುವುದರಿಂದ 19817 ಹೆಕ್ಟೇರ್‌ನಲ್ಲಿರುವ ಬೆಳೆ ಚೇತರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದು, ಇದರಲ್ಲೂ ಪೂರ್ಣ ಪ್ರಮಾಣದ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಮಂಡ್ಯ ತಾಲೂಕಲ್ಲಿ ಹೆಚ್ಚು ಹಾನಿ: ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಕಬ್ಬು ಬೆಳೆ ಹಾನಿಗೊಳಗಾಗಿರುವುದರಲ್ಲಿ ಮಂಡ್ಯ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಈ ತಾಲೂಕಿನಲ್ಲಿರುವ 13754 ಹೆಕ್ಟೇರ್ ಕಬ್ಬಿನಲ್ಲಿ 10972 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಗೆ ಹಾನಿ ಸಂಭವಿಸಿದೆ. 2782 ಹೆಕ್ಟೇರ್‌ನಷ್ಟು ಬೆಳೆ ಉತ್ತಮ ಸ್ಥಿತಿಯಲ್ಲಿದ್ದರೆ, 3294 ಹೆಕ್ಟೇರ್ ಬೆಳೆ ನಾಶವಾಗಿದೆ. ನೀರು ದೊರಕಿದರೆ 7678 ಹೆಕ್ಟೇರ್‌ನಲ್ಲಿರುವ ಬೆಳೆ ಚೇತರಿಕೆ ಕಾಣುವ ಲಕ್ಷಣಗಳಿವೆ.
ಮದ್ದೂರಲ್ಲಿ 1090 ಹೆಕ್ಟೇರ್‌ನಲ್ಲಿ ಬೆಳೆ ನಾಶ: ಮದ್ದೂರು ತಾಲೂಕಿನ ಒಟ್ಟು 8174 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 5539 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, 1545 ಹೆಕ್ಟೇರ್‌ನಲ್ಲಿ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. 1090 ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದ್ದು, 5539 ಹೆಕ್ಟೇರ್ ಪ್ರದೇಶದ ಬೆಳೆಗೆ ನೀರು ದೊರಕಿದರೆ ಇಳುವರಿಯಲ್ಲಿ ಪ್ರಗತಿ ಕಾಣುವ ಸಾಧ್ಯತೆಗಳಿವೆ.
ಮಳವಳ್ಳಿಯಲ್ಲಿ 165 ಹೆಕ್ಟೇರ್ ಬೆಳೆ ಹಾನಿ: ಮಳವಳ್ಳಿ ತಾಲೂಕಿನಲ್ಲಿರುವ 951 ಹೆಕ್ಟೇರ್‌ನಲ್ಲಿರುವ ಕಬ್ಬು ಬೆಳೆಯಲ್ಲಿ 625 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಕೇವಲ 326 ಹೆಕ್ಟೇರ್‌ನಲ್ಲಿರುವ ಕಬ್ಬು ಉತ್ತಮ ಸ್ಥಿತಿಯಲ್ಲಿದ್ದು, 165 ಹೆಕ್ಟೇರ್ ಬೆಳೆ ಪೂರ್ಣ ಹಾನಿಗೊಳಗಾಗಿದೆ. 460 ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ನೀರು ದೊರಕಿದರೆ ಚೇತರಿಕೆ ಕಾಣಬಹುದು.
ಶ್ರೀರಂಗಪಟ್ಟಣದಲ್ಲಿ 1002 ಹೆಕ್ಟೇರ್‌ನಲ್ಲಿ ಬೆಳೆ ತ್ತಮ ಸ್ಥಿತಿ: ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ 2059 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 1057 ಹೆಕ್ಟೇರ್‌ನಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿದೆ. 1002 ಹೆಕ್ಟೇರ್‌ನಲ್ಲಿ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು, 83 ಹೆಕ್ಟೇರ್‌ನಲ್ಲಿ ಸಂಪೂರ್ಣ ಹಾನಿಯಾಗಿದೆ. ಈ ಬೆಳೆಗೆ ನೀರು ಹರಿಸಿದರೂ ಚೇತರಿಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. 974 ಹೆಕ್ಟೇರ್ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ನೀರು ದೊರೆತರಷ್ಟೇ ಬೆಳೆಯ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ.
ಪಾಂಡವಪುರದಲ್ಲಿ ಒಣಗುತ್ತಿದೆ ಕಬ್ಬು: ಪಾಂಡವಪುರ ತಾಲೂಕಿನ 3767 ಹೆಕ್ಟೇರ್ ಪ್ರದೇಶದಲ್ಲಿರುವ ಕಬ್ಬಿನ ಪೈಕಿ 2938 ಹೆಕ್ಟೇರ್‌ನಲ್ಲಿರುವ ಕಬ್ಬು ಒಣಗುತ್ತಿದೆ. 3829 ಹೆಕ್ಟೇರ್‌ನಲ್ಲಿರುವ ಕಬ್ಬು ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ನೀರು ಹರಿಸಿದರೂ ಚೇತರಿಕೆ ಕಾಣಲಾಗದೆ ಸಂಪೂರ್ಣ ಹಾನಿಗೊಳಗಾಗಿರುವ ಕಬ್ಬಿನ ಪ್ರದೇಶ 302 ಹೆಕ್ಟೇರ್‌ನಷ್ಟಿದೆ. 2636 ಹೆಕ್ಟೇರ್ ಪ್ರದೇಶದಲ್ಲಿರುವ ಕಬ್ಬಿಗೆ ನೀರು ಸಿಕ್ಕರೆ ಚೇತರಿಕೆ ಕಾಣಬಹುದು.
ಕೆ.ಆರ್.ಪೇಟೆಯಲ್ಲಿ 442 ಹೆಕ್ಟೇರ್‌ನಲ್ಲಿ ಬೆಳೆ ಸಂಪೂರ್ಣ ಹಾನಿ: ಕೆ.ಆರ್.ಪೇಟೆ ತಾಲೂಕಿನ 6411 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆದು ನಿಂತಿದೆ. ಇದರಲ್ಲಿ 2870 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗುವ ಸ್ಥಿತಿಯಲ್ಲಿದೆ. 3541 ಹೆಕ್ಟೇರ್‌ನಲ್ಲಿರುವ ಕಬ್ಬು ಉತ್ತಮ ಸ್ಥಿತಿಯಲ್ಲಿದ್ದು, 442 ಹೆಕ್ಟೇರ್‌ನಲ್ಲಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. 2428 ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ನೀರು ದೊರೆತರಷ್ಟೇ ಇಳುವರಿ ಸುಧಾರಣೆ ಕಾಣಲು ಸಾಧ್ಯವಾಗುವ ಸಂಭವವಿದೆ.
ನಾಗಮಂಗಲ ತಾಲೂಕಿನಲ್ಲಿರುವ 152 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಇದರಲ್ಲಿ 127 ಹೆಕ್ಟೇರ್‌ನಲ್ಲಿ ಕಬ್ಬು ಒಣಗುತ್ತಿದ್ದು, 25 ಹೆಕ್ಟೇರ್‌ನಲ್ಲಷ್ಟೇ ಬೆಳೆ ಸುಸ್ಥಿತಿಯಲ್ಲಿದೆ. 25 ಹೆಕ್ಟೇರ್‌ನಲ್ಲಿ ಕಬ್ಬು ಪೂರ್ಣ ಒಣಗಿದ್ದು,102 ಹೆಕ್ಟೇರ್ ಪ್ರದೇಶದ ಕಬ್ಬಿಗೆ ನೀರು ದೊರೆತರಷ್ಟೇ ಉಳಿಯುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.