ಸಕ್ಕರೆ ಜಿಲ್ಲೆಗೆ 4 ರಾಷ್ಟ್ರೀಯ ಪ್ರಶಸ್ತಿಗಳ ಗರಿ
Team Udayavani, Jun 18, 2020, 5:17 AM IST
ಮಂಡ್ಯ: ಜಿಪಂ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಮಂಡ್ಯ ಜಿಲ್ಲೆಗೆ ನಾಲ್ಕು ವಿಭಾಗಗಳಲ್ಲಿ ರಾಷ್ಟ್ರೀಯ ಪುರಸ್ಕಾರ ದೊರ ಕಿದೆ ಎಂದು ಜಿಪಂ ಸಿಇಒ ಕೆ.ಯಾಲಕ್ಕೀಗೌಡ ತಿಳಿಸಿದರು.
ಮಂಡ್ಯ ಜಿಪಂಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ (ಸಾಮಾನ್ಯ ವಿಭಾಗ)- 50 ಲಕ್ಷ ರೂ., ಮದ್ದೂರಿನ ಅಣ್ಣೂರು ಗ್ರಾಪಂಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತ ಪುರಸ್ಕಾರ (ವಿಷಯಾಧಾರಿತ ವಿಭಾ ಗ)- 10 ಲಕ್ಷ ರೂ., ಮದ್ದೂರಿನ ಹೆಮ್ಮನಹಳ್ಳಿ ಗ್ರಾಪಂಗೆ ಮಕ್ಕಳ ಸ್ನೇಹಿ ಗ್ರಾಪಂ ಪುರಸ್ಕಾರ- 5 ಲಕ್ಷ ರೂ. ಹಾಗೂ ಶ್ರೀರಂಗಪಟ್ಟಣದ ನಗುವ ನಹಳ್ಳಿ ಗ್ರಾಪಂಗೆ ನಮ್ಮಗ್ರಾಮ ನಮ್ಮ ಯೋಜ ನೆ- 5 ಲಕ್ಷ ರೂ. ನಗದು ಪುರಸ್ಕಾರ ದೊರಕಿರು ವುದಾಗಿ ಹೇಳಿದರು.
ಏ.24ರಂದು ರಾಷ್ಟ್ರೀಯ ಪಂಚಾಯತ್ ನದಂದು ಭಾರತ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಬೇಕಿತ್ತಾದರೂ, ಕೋವಿಡ್ ಹಿನ್ನೆಲೆ ಯಲ್ಲಿ ಪ್ರಶಸ್ತಿ ಪ್ರದಾನವನ್ನು ಮುಂದೂಡಲಾ ಗಿದೆ. ಪ್ರಶಸ್ತಿಯು ಫಲಕ, ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಂಡ್ಯ ಜಿಪಂ ಸಾಧನೆಗಳೇನು?: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲಾ ಗ್ರಾಪಂಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಆದ್ಯತೆ. ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಜಲಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ. ಗ್ರಾಪಂಗಳ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು. ವಿದ್ಯುತ್ ಬಿಲ್ ಮರು ಹೊಂದಾಣಿಕೆ ಮತ್ತು ಬಾಕಿ ಬಿಲ್ ಪಾವತಿಗೆ ಪ್ರಾಮುಖ್ಯತೆ. ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಾಪಂನಿಂದ 5 ಸಾವಿರ ರೂ.ಗಳ ಸಹಾಯಧನ ನೀಡಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಲು ಕ್ರಮ. ಅಂಗನವಾಡಿಗಳಲ್ಲಿ ಹಾಲು ಮತ್ತು ಮೊಟ್ಟೆ ವಿತರಣೆಗೆ ಕ್ರಮ.
ಸರ್ಕಾರದ ವಿವಿಧ ವಸತಿ ಯೋಜನೆಗಳಡಿ 9121 ಮನೆಗಳನ್ನು ಪೂರ್ಣಗೊಳಿಸಿ ಶೇ.90ರಷ್ಟು ಸಾಧನೆ. ಗ್ರಾಪಂ ತ್ತೈಮಾಸಿಕ ಕೆಡಿಪಿ ಸಭೆಗಳ ಪರಿಣಾಮಕಾರಿ ಅನುಷ್ಠಾನ, ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಗ್ರಾಪಂಗಳು ಸ್ವಂತ ಅಂತರ್ಜಾಲತಾಣ ಹೊಂದಿರುವುದು. ಮಕ್ಕಳ ಮತ್ತು ಮಹಿಳಾ ಗ್ರಾಮ ಸಭೆಗಳ ಯಶಸ್ವಿ ಯೋಜನೆ ಅಲ್ಲದೆ, ಮೈಸೂರಿನ ಅಬ್ದುಲ್ ನಜೀರ್ ಸಾಬ್ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದರಂತೆ ಒಟ್ಟು 7 ಮಹಿಳಾ ಗ್ರಾಮಸಭೆ ಗಳ ಯಶಸ್ವಿ ಆಯೋಜನೆ.
ಬಯಲು ಬಹಿರ್ದೆಸೆ ಮುಕ್ತ: ಹೆಮ್ಮನಹಳ್ಳಿ 2016-17 ಮತ್ತು 2017-18ನೇ ಸಾಲಿನಲ್ಲಿ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಲಭಿ ಸಿದೆ. ಅಲ್ಲದೆ, 2016-17ನೇ ಸಾಲಿಗೆ ನಮ್ಮ ಗ್ರಾಮ ನಮ್ಮ ಯೋಜನೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ. ಕರ್ನಾಟಕ ಸರ್ಕಾರ 2017-18ನೇ ಸಾಲಿನಲ್ಲಿ ಬಯಲು ಬಹಿ ರ್ದೆಸೆ ಮುಕ್ತ ಗ್ರಾಪಂ ಎಂದು ಘೋಷಿಸಿದೆ.
ನಮ್ಮ ಗ್ರಾಮ ನಮ್ಮ ಯೋಜನೆ ಜಾರಿ: ನಗುವನಹಳ್ಳಿ ಜಿಲ್ಲೆಯಲ್ಲಿ ಮೊದಲ ವೆಬ್ ಸೈಟ್ ರೂಪಿಸಿದ ಗ್ರಾಪಂ ಎನ್ನುವ ಹೆಗ್ಗಳಿಕೆ. ರಾಜ್ಯಸರ್ಕಾರ 2017-18ನೇ ಸಾಲಿನಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಎಂದು ಘೋಷಿಸಿದೆ. ಎಲ್ಲಾ ಸಮುದಾಯ ಅಭಿವೃದ್ಧಿ ಯೋಜ ನೆಗಳನ್ನು ಜನರ ಸಹಭಾಗಿತ್ವದಿಂದ ನಮ್ಮ ಗ್ರಾಮ ನಮ್ಮ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.