8 ದಿನದಲ್ಲಿ 6.76 ಲಕ್ಷ ರೂ. ದಂಡ ವಸೂಲಿ
Team Udayavani, Sep 14, 2019, 1:21 PM IST
ದ್ವಿಚಕ್ರ ವಾಹನಗಳ ದಾಖಲೆ ಪರಿಶೀಲಿಸುತ್ತಿರುವ ಪೊಲೀಸರು.
ಮಂಡ್ಯ: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡ ಪ್ರಯೋಗ ಇದೀಗ ಜಿಲ್ಲೆಯಲ್ಲಿ ಸದ್ದಿಲ್ಲದೆ ಜಾರಿಯಾಗಿದೆ. ಸೆ.1ರಿಂದ ವಿಧಿಸಲಾಗುತ್ತಿರುವ ದಂಡ ಮೊತ್ತದ ಬಿಸಿಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಕೇವಲ ಎಂಟು ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ 1752 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 6.76 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಕಳೆದ ಎಂಟು ತಿಂಗಳಲ್ಲಿ 58,699 ಪ್ರಕರಣಗಳು ದಾಖಲಾಗಿ 82.64 ಲಕ್ಷ ರೂ. ದಂಡ ವಸೂಲಿ ಮಾಡಿದೆ.
ಈವರೆಗೆ ಸಂಚಾರ ನಿಯಮಗಳ ಬಗ್ಗೆ ಜಿಲ್ಲೆಯ ಬಹುತೇಕ ಜನರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಪೊಲೀಸರು ಅಡ್ಡಗಟ್ಟಿ ವಾಹನಗಳ ತಪಾಸಣೆ ನಡೆಸಿ ದಂಡ ವಸೂಲಿಗೆ ಮುಂದಾದರೋ ಜನರು ಬೆಚ್ಚಿಬಿದ್ದರು. ದುಬಾರಿ ದಂಡ ಭರಿಸಲಾಗದೆ ಹೌಹಾರಿದರು. ಜೇಬಲ್ಲಿದ್ದ ಹಣವೆಲ್ಲವೂ ದಂಡ ಕಟ್ಟುವುದಕ್ಕೆ ಖಾಲಿಯಾಗುತ್ತಿತ್ತು. ಖಾಲಿ ಜೇಬಿನಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದೀಗ ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯಿದೆಯ ನಿಯಮಗಳು ಮತ್ತು ಭಾರಿ ಮೊತ್ತದ ದಂಡ ಪ್ರಯೋಗ ಜಾರಿಯಾದ ನಂತರದಲ್ಲಿ ಜನರಿಗೆ ತಲೆ ಬಿಸಿ ಉಂಟುಮಾಡಿದೆ. ಈಗ ವಾಹನಗಳ ದಾಖಲೆಗಳಿಲ್ಲದೆ ಸಂಚಾರಕ್ಕಿಳಿಯುವುದಕ್ಕೂ ಜನರು ಭಯಪಡುತ್ತಿದ್ದಾರೆ.
ಏನೇನು ಪ್ರಕರಣಗಳು?: ವಾಹನಗಳ ವಿಮೆ, ಆರ್‌ಸಿ, ಎಫ್‌ಸಿ, ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಡಿಎಲ್ನ್ನು ವಾಹನಗಳ ಚಾಲನೆ ವೇಳೆ ಚಾಲಕರು ತಮ್ಮೊಂದಿಗೆ ಇಟ್ಟುಕೊಳ್ಳುವುದು ಕಡ್ಡಾಯ. ನಿಗದಿತ ವೇಗದಲ್ಲಿ ಮಾತ್ರ ವಾಹನ ಚಾಲನೆ ಮಾಡುವುದು. ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ದ್ವಿಚಕ್ರ ವಾಹನಗಳ ಹ್ಯಾಂಡಲ್, ಬಂಪರ್‌ಗಳ ವಿನ್ಯಾಸವನ್ನು ಬದಲಿಸುವಂತಿಲ್ಲ. ಕರ್ಕಶ ಧ್ವನಿಯ ಹಾರ್ನ್ಗಳನ್ನು ಉಪಯೋಗಿಸುವಂತಿಲ್ಲ. ರಸ್ತೆಯಲ್ಲಿ ವಾಹನ ಚಾಲನೆ ವೇಳೆ ವ್ಹೀಲಿಂಗ್ ಮಾಡುವಂತಿಲ್ಲ, ತ್ರಿಬ್ಬಲ್ ರೈಡಿಂಗ್‌ಗೂ ನಿಷೇಧವಿದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳ ಬಂಪರ್‌ಗಳ ವಿನ್ಯಾಸವೂ ಮೂಲ ರೂಪದಲ್ಲೇ ಇರಬೇಕು. ವಾಹನಗಳಿಗೆ ಅಧಿಕ ಭಾರ ಹಾಕುವಂತಿಲ್ಲ ಎಂಬುದು ಸೇರಿದಂತೆ ಸಾಕಷ್ಟು ನಿಯಮಗಳನ್ನು ಚಾಲಕರು ವಾಹನ ಚಾಲನೆ ವೇಳೆ ಪಾಲಿಸುವುದು ಅನಿವಾರ್ಯವಾಗಿದೆ.
ಕುಡಿದು ವಾಹನ ಚಾಲನೆ ಪ್ರಕರಣ 20: ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ 7 ದಿನಗಳಲ್ಲಿ 20 ಪ್ರಕರಣಗಳು ವರದಿಯಾಗಿವೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರನ್ನು ತಪಾಸಣೆ ನಡೆಸಿ ದಂಡ ಮೊತ್ತ ಪಾವತಿಸಲು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಆದರೆ, ಸಂಚಾರ ನಿಯಮಗಳನ್ನು ಉಲ್ಲಂಘನೆ, ಚಾಲನಾ ಪರವಾನಗಿ, ವಾಹನಗಳ ದಾಖಲೆಗಳನ್ನು ಹೊಂದಿಲ್ಲದವರ ವಿರುದ್ಧವೂ ಹೊಸ ಮೋಟಾರು ವಾಹನ ಕಾಯಿದೆಯ ಪ್ರಕಾರ ಸ್ಥಳದಲ್ಲೇ ಪ್ರಕರಣ ದಾಖಲಿಸಿ ದುಬಾರಿ ದಂಡವನ್ನು ಅಲ್ಲೇ ವಸೂಲಿ ಮಾಡಲಾಗುತ್ತಿದೆ.
ಜಿಲ್ಲೆಯ ಜನರಲ್ಲಿ ತಲ್ಲಣ ಸೃಷ್ಟಿಸಿರುವ ಹೊಸ ಮೋಟಾರು ವಾಹನ ಕಾಯಿದೆ ಜಾರಿ ಹಾಗೂ ದುಬಾರಿ ಮೊತ್ತದ ದಂಡ ಪ್ರಯೋಗ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಹೀಗಾಗಿ ವಾಹನ ಚಾಲನಾ ಪರವಾನಗಿ ಮತ್ತು ವಾಹನಗಳ ವಿಮೆ ಮಾಡಿಸಿಕೊಳ್ಳಲು ಜನರು ಮುಗಿ ಬಿದ್ದಿದ್ದಾರೆ. ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನವೀಕರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೊಸದಾಗಿ ವಾಹನ ಚಾಲನಾ ಪರವಾನಗಿ ಪಡೆಯುವವರು, ನವೀಕರಣ ಮಾಡಿಸುವವರು ಹಾಗೂ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಹೊಂದಿದ್ದವರು ನಾಲ್ಕು ಚಕ್ರದ ವಾಹನದ ಚಾಲನಾ ಪರವಾನಗಿ ಪತ್ರ ಪಡೆಯಲು ಸಲ್ಲಿಸುತ್ತಿರುವ ಅರ್ಜಿಗಳ ಸಂಖ್ಯೆ ಕಳೆದೊಂದು ವಾರದಿಂದ ಹೆಚ್ಚಾಗುತ್ತಿದೆ. ಬಹುತೇಕರು ಸೈಬರ್ ಸೆಂಟರ್‌ಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕುತ್ತಿರುವುದರಿಂದ ಆರ್‌ಟಿಒ ಕಚೇರಿಗೆ ಬರುವವರ ಸಂಖ್ಯೆ ಸಹಜವಾಗಿ ಕಡಿಮೆ ಇದೆ. ಕಚೇರಿಗೆ ಅಲೆಯಲು ಬಯಸದ ಬಹಳಷ್ಟು ಜನರು ಮಧ್ಯವರ್ತಿಗಳ ಮೂಲಕ ವಾಹನಗಳ ದಾಖಲೆ ಸಂಗ್ರಹಕ್ಕೆ ಅರ್ಜಿ ಹಾಕುತ್ತಿದ್ದಾರೆ. ಆದರೆ, ಆರ್‌ಟಿಒ ಕಚೇರಿಯಲ್ಲಿ ಚಾಲನಾ ಪರವಾನಗಿ ನವೀಕರಣ ಹಾಗೂ ಕಾರು ಬೈಕು ಒಟ್ಟುಗೂಡಿಸಿ ಒಂದೇ ಚಾಲನ ಪರವಾನಗಿ ನೀಡುವ ಸಾಫ್ಟ್ವೇರ್ ಬದಲಾಯಿಸಲಾಗಿದೆ. ಅದಿನ್ನೂ ಪೂರ್ಣಪ್ರಮಾಣದಲ್ಲಿ ಅಪ್‌ಡೇಟ್ ಆಗದಿರುವ ಹಿನ್ನೆಲೆಯಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇದರ ಜೊತೆಗೆ ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿಯೂ ಕಚೇರಿ ಕೆಲಸಗಳೆಲ್ಲವೂ ಮಂದಗತಿಯಲ್ಲಿ ಸಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.