ಶಾಲಾ-ಕಾಲೇಜಲ್ಲಿ ಶೇ.60 ಹಾಜರಾತಿ ಹೆಚ್ಚಳ
8,643 ಶಿಕ್ಷಕರಿಗೆ ಕೋವಿಡ್ ಪರೀಕ್ಷೆ , ಎಲ್ಲ ವರದಿಗಳು ನೆಗೆಟಿವ್ ವಿದ್ಯಾರ್ಥಿಗಳಿಗೆ ಆತಂಕ ದೂರ
Team Udayavani, Jan 6, 2021, 1:14 PM IST
ಮಂಡ್ಯ: ಜಿಲ್ಲೆಯಲ್ಲಿ ಜ.1ರಿಂದ ಶಾಲೆ ಹಾಗೂಕಾಲೇಜುಗಳು ಆರಂಭಗೊಂಡಿದ್ದು, ಇಲ್ಲಿಗೆ 5 ದಿನಗಳು ಕಳೆದಿದ್ದು, ಹಾಜರಾತಿಯಲ್ಲಿ ಏರಿಕೆ ಕಂಡಿದೆ.
ಸಮಯ ನಿಗದಿಯಂತೆ 7ರಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆರಂಭಿಸಲಾಗಿತ್ತು. ಮೊದಲ ದಿನ ಆತಂಕದಿಂದಲೇ ಶಾಲೆಗೆಆಗಮಿಸಿದ್ದ ವಿದ್ಯಾರ್ಥಿಗಳಿಗೆ ಈಗ ಆತಂಕ ದೂರವಾಗಿದ್ದು, ನಿರಾಳರಾಗಿದ್ದಾರೆ.
ಶೇ.60ರಷ್ಟು ಹಾಜರಾತಿ ಹೆಚ್ಚಳ: ಮೊದಲ ದಿನ ಶೇ.30ರಷ್ಟಿದ್ದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ 5 ದಿನಗಳ ಬಳಿಕ ಶೇ.60ರಷ್ಟು ಏರಿಕೆ ಕಂಡಿದೆ. ಶಾಲೆ ಹಾಗೂ ಕಾಲೇಜುಗಳ ಎರಡರಲ್ಲೂ ಶೇ.60ರಷ್ಟು ಹೆಚ್ಚಳವಾಗಿದೆ.
ಗ್ರಾಮೀಣ ಭಾಗದಲ್ಲೇ ಹೆಚ್ಚು: ನಗರ ಪ್ರದೇಶಕ್ಕೆ ಹೋಲಿಸಿಕೊಂಡರೆ ಗ್ರಾಮೀಣ ಭಾಗದಲ್ಲಿ ಹಾಜರಾತಿ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿನ ಭಯ ಕಡಿಮೆಯಾಗಿರುವುದು. ಶಾಲೆ ಹಾಗೂ ಕಾಲೇಜು ಹತ್ತಿರವಿರುವುದರಿಂದ ಪೋಷಕರು ಮಕ್ಕಳನ್ನು ಯಾವುದೇ ಭಯವಿಲ್ಲದೆ ಕಳುಹಿಸುತ್ತಿದ್ದಾರೆ. ಇದರಿಂದ ಹಾಜರಾತಿ ಹೆಚ್ಚಿದೆ.
8643 ಶಿಕ್ಷಕರಿಗೆ ನೆಗೆಟಿವ್: ಶಾಲಾ-ಕಾಲೇಜು ಆರಂಭ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಶಿಕ್ಷಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಅದರಂತೆ ಇಲ್ಲಿಯವರೆಗೆ ಸುಮಾರು 8643 ಶಿಕ್ಷಕ ಹಾಗೂ ಶಿಕ್ಷಕ ವೃಂದವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಇನ್ನೂ ಕೆಲವು ಶಿಕ್ಷಕರ ವರದಿ ಬರಬೇಕಾ ಗಿದೆ. ಅಲ್ಲದೆ, ಮಾದರಿ ಸಂಗ್ರಹವೂ ಸಹ ನಡೆಯುತ್ತಿದೆ.
ಮಕ್ಕಳಿಗಿಲ್ಲ ಪರೀಕ್ಷೆ: ಶಾಲೆಯ ಯಾವುದೇ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿಲ್ಲ. ಬದಲಾಗಿ ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಗುತ್ತಿದ್ದು, ದೇಹದಲ್ಲಿನ ಉಷ್ಣಾಂಶ ಹೆಚ್ಚಿರುವ ವಿದ್ಯಾರ್ಥಿಗಳು ಹಾಗೂ ನೆಗಡಿ, ಕೆಮ್ಮು, ಜ್ವರದಂಥ ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸೂಚಿಸಲಾಗುತ್ತಿದೆ.
ಹಾಸ್ಟೆಲ್ ಹಾಗೂ ವಸತಿ ನಿಲಯಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿಲ್ಲ.
ಶಾಲೆಗಳಿಗೆ 2.07 ಲಕ್ಷ ಮಕ್ಕಳು ಪ್ರವೇಶ :
ಜಿಲ್ಲೆಯಲ್ಲಿ 2525 ಶಾಲೆಗಳಿದ್ದು, ಈ ಪೈಕಿ 1810 ಸರ್ಕಾರಿ ಶಾಲೆಗಳು, 715 ಖಾಸಗಿ ಶಾಲೆಗಳಿವೆ. ಈಗಾಗಲೇ 2.07 ಲಕ್ಷ ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 159 ಪಿಯು ಕಾಲೇಜುಗಳಿವೆ. ಈಪೈಕಿ 11 ಕಾಲೇಜುಗಳಿಗೆ ವಿದ್ಯಾರ್ಥಿಗ ಳದಾಖಲಾತಿ ನಡೆದಿಲ್ಲ. ಉಳಿದ 148ರಲ್ಲಿ 70ಸರ್ಕಾರಿ, 25 ಅನುದಾನಿತ, 2 ಮೊರಾರ್ಜಿದೇಸಾಯಿ ಹಾಗೂ 51 ಖಾಸಗಿ ಅನುದಾನ ರಹಿ ಕಾಲೇಜುಗಳು. ನವೆಂಬರ್ ಅಂತ್ಯದವರೆಗೆ ಪ್ರಥಮ ಪಿಯುಗೆ 13,236, ದ್ವಿತೀಯ ಪಿಯುಗೆ 12,299 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಜಿಲ್ಲೆಯ ಯಾವುದೇ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕವರ್ಗದವರಿಗೂ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಅಧ್ಯಾಪಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. –ಕೆ.ಜಿ.ಗುರುಸ್ವಾಮಿ, ಡಿಡಿಪಿಯು, ಮಂಡ್ಯ
ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಲಾ ಗುತ್ತಿದೆ. ಇದುವರೆಗೂ ಯಾರಿಗೂ ಸೋಂಕು ಕಂಡು ಬಂದಿಲ್ಲ. ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ. ಅಲ್ಲದೆ, ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಬ್ರಿಟನ್‌ನಿಂದ ಜಿಲ್ಲೆಗೆ 20 ಮಂದಿ ಆಗಮಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಇದರಿಂದ ರೂಪಾಂತರಿ ವೈರಸ್‌ನ ಭೀತಿ ಇಲ್ಲ. –ಡಾ.ಸಂಜಯ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.