ಸಾಲ ಮನ್ನಾದಿಂದ 8,145 ಕೋಟಿ ಹೊರೆ: ಸಿದ್ದರಾಮಯ್ಯ
Team Udayavani, Sep 9, 2017, 6:35 AM IST
ಮದ್ದೂರು: ಸಹಕಾರ ಸಂಘಗಳಲ್ಲಿ ರೈತರು ಮಾಡಿದ 50ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದರಿಂದ
ಸರ್ಕಾರದ ಮೇಲೆ 8,145 ಕೋಟಿ ರೂ.ಹೊರೆ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾಡೇರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಪ್ರತಿ ಲೀಟರ್‌ಗೆ 20 ಪೈಸೆ ನೀಡಬೇಕೆಂದು ಬೇಡಿಕೆ
ಇಟ್ಟಿದ್ದಾರೆ. ಕೆಲವರು ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸುವಂತೆಯೂ ಮನವಿ ಮಾಡಿದ್ದಾರೆ. ಆದರೆ, ರೈತರ
ಸಾಲ ಮನ್ನಾ ಮಾಡಿದ್ದರ ಪರಿಣಾಮವಾಗಿ ಸರ್ಕಾರದ ಮೇಲೆ ಬಿದ್ದಿರುವ ಹೊರೆಯನ್ನು ಸರಿದೂಗಿಸಬೇಕಿದೆ.
ಇಲ್ಲದಿದ್ದರೆ ಈಗಲೇ ಘೋಷಣೆ ಮಾಡಿ ಬಿಡುತ್ತಿದ್ದೆ ಎಂದು ವಿಷಾದಿಸಿದರು. ಕಬ್ಬಿಗೆ ಹೆಚ್ಚಿನ ಬೆಲೆ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಅದರಂತೆ ಹೆಚ್ಚು ಬೆಲೆ ನೀಡಲು ಸೂಚನೆ ನೀಡಿದ್ದೇನೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.