ತಾಯಿ ಜತೆ ಸ್ಕೂಟರ್‌ನಲ್ಲೇ ದೇಶ ಸುತ್ತಿದ ಮಗ.!
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇದೇ ಸ್ಕೂಟರ್ ನಲ್ಲಿ ತೀರ್ಥಯಾತ್ರೆ ಮಾಡಿದ್ದಾರೆ
Team Udayavani, Aug 29, 2020, 3:25 PM IST
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲೊಬ್ಬರು ತಾಯಿಗಾಗಿ ಸಂಕಲ್ಪ ಮಾಡಿ ದೇಶಾದ್ಯಂತ ತಾಯಿ ಜತೆ ತೀರ್ಥಯಾತ್ರೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣದ ರಂಗನಾಥ ನಗರದ ನಿವಾಸಿ ಕೃಷ್ಣಕುಮಾರ್, ವೃದ್ಧ ತಾಯಿ ಆಸೆಯಂತೆ ತೀರ್ಥಯಾತ್ರೆ ಸಂಕಲ್ಪ ತೊಟ್ಟು ತಂದೆ ಕೊಡಿಸಿದ ಚೇತಕ್ ಸ್ಕೂಟರ್‌ನಲ್ಲೇ ದೇಶ ಸುತ್ತಿದ್ದಾರೆ. 70 ವರ್ಷದವರೆಗೂ ಯಾವುದೇ ಸ್ಥಳಕ್ಕೂ ಹೋಗದೇ ಮನೆಯಲ್ಲಿಯೇ ಇದ್ದ ತನ್ನ ತಾಯಿಗೆ ದೇಶದ ತೀರ್ಥ ಸ್ಥಳ ಸೇರಿದಂತೆ ಪಕ್ಕದ ಭೂತಾನ್, ಬರ್ಮಾ, ನೇಪಾಳಕ್ಕೂ ಕರೆದೊಯ್ದು ತೀರ್ಥ ಕ್ಷೇತ್ರದ ದರ್ಶನ ಮಾಡಿಸಿದ್ದಾರೆ.
ಸತತ 4 ವರ್ಷ ಪ್ರಯಾಣ: ತನ್ನ ತಾಯಿಗೆ ಇಡೀ ದೇಶದ ತೀರ್ಥ ಕ್ಷೇತ್ರದ ದರ್ಶನ ಮಾಡಿಸಿದ್ದು ತನ್ನ ತಂದೆ ಕೊಡಿಸಿದ ಈ ಹಳೆಯ ಚೇತಕ್ ಸ್ಕೂಟರ್‌ನಲ್ಲೇ. ಸತತ 4 ವರ್ಷ ಬರೋಬ್ಬರಿ ಸುಮಾರು 56,000 ಕಿ.ಮೀ.ದೂರ ಕ್ರಮಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇದೇ ಸ್ಕೂಟರ್ ನಲ್ಲಿ ತೀರ್ಥಯಾತ್ರೆ ಮಾಡಿದ್ದಾರೆ. ಅಚ್ಚರಿ ಎಂದರೆ ಇವರ ಈ ಹಳೆಯ ಸ್ಕೂಟರ್ ಎಲ್ಲಿಯೂ ಒಮ್ಮೆಯೂ ಕೈ ಕೊಟ್ಟಿಲ್ಲವಂತೆ. ಈ ಹಳೆಯ ಸ್ಕೂಟರ್ ಜತೆಗೆ ಭಾವನಾತ್ಮಕ ಸಂಬಂಧವಿದೆ. ಈ ಸ್ಕೂಟರ್ ಅನ್ನು ತಂದೆ ಕೊಡಿಸಿದ್ದು ಎನ್ನುವ ಕೃಷ್ಣಕುಮಾರ್, ಈಗ ಅವರು ಕಾಲವಾಗಿ ಜೊತೆಯಲ್ಲಿಲ್ಲದ ಕಾರಣಕ್ಕೆ ಈ ಹಳೆಯ ಸ್ಕೂಟರ್ ಅನ್ನೇ ತಂದೆಯೆಂದು ತಿಳಿದು ಕುಟುಂಬ ಸಮೇತರಾಗಿ ತೀರ್ಥಯಾತ್ರೆ ಮಾಡಿ ಬಂದಿದ್ದೇವೆಂದರು. ಇನ್ನು ಮಗ ತನ್ನ ಕಡೆ ಆಸೆ ಈಡೇರಿಸಿದ್ದಕ್ಕೆ ತಾಯಿಗೆ ಎಲ್ಲಿಲ್ಲದ ಸಂತಸವಾಗಿದೆ.
– ಗಂಜಾಂ ಮಂಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.