ತಾರಸಿ ಮೇಲೊಂದು ಪುಟ್ಟ “ಕೀರೆ ಮಡಿ’ ಮಾಡಿ


Team Udayavani, Feb 14, 2017, 4:15 PM IST

6999.jpg

ಭಾರತೀನಗರ: “ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆ ಮಾತು ಎಲ್ಲರಿಗೂ ಅನ್ವಯಿಸುತ್ತದೆ. ಏನಾದರು ಸಾಧಿಸಬೇಕೆಂದರೆ ಸೋಮಾರಿ ಯಾದವನಿಗೆ ಸಾಕಷ್ಟು ನೆಪಗಳೇ ಉತ್ತರ. ಆದರೆ ಕ್ರೀಯಾಶೀಲರಾದವರಿಗೆ ಮನಸ್ಸೇ ಕೈತೋಟ. ಹೀಗೆ ಮನೆಯ ಹಿಂದೆ-ಮುಂದೆ, ಅಕ್ಕ-ಪಕ್ಕ ಜಾಗವಿಲ್ಲ ನಾವೇನು ಬೆಳೆಯೋಣ ಎನ್ನುವವರಿಗೆ ಇಲ್ಲಿದೆ ಉತ್ತರ.

ದೈನಂದಿನ ಮನೆ ಬಳಕೆಗೆ ಬೇಕಾದ ಸೊಪ್ಪು-ತರಕಾರಿಗಳನ್ನು ಮನೆಯಂಗಲ, ತಾರಸಿಯಲ್ಲಿ ಸ್ವತಃ ಬೆಳೆದುಕೊಳ್ಳುವುದು ಇತ್ತೀಚೆಗೆ ಅಲ್ಲಲ್ಲಿ ಕಾಣುತ್ತಿದ್ದೇವೆ. ಅದ ರಂತೆ ನಮ್ಮ ಗ್ರಾಮೀಣ ಮಹಿಳೆಯರು ಮನೆಯ ಅಸು-ಪಾಸಿನಲ್ಲಿ ಕೀರೆಮಡಿ ಮಾಡಿ ಕೊಂಡು ಸೊಪ್ಪು, ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರು.

ಆಧುನಿಕತೆಗೆ ತೆರೆದುಕೊಂಡ ನಮ್ಮ ಬದುಕು ಹಾಗೂ ಕೌಟುಂಬಿಕ ಜೀವನ ಸಂಕೀರ್ಣ ವಾಗುತ್ತಿದೆ. ಅದರಂತೆ ಜನಸಂಖ್ಯೆ ಹೆಚ್ಚಳವಾಗುತ್ತಾ ಮನೆಯ ಸುತ್ತ-ಮುತ್ತ ಖಾಲಿ ಜಾಗವೂ ಇಲ್ಲದಾಗುತ್ತಿದೆ. ಪರಿಣಾಮ “ಕೀರೆ ಮಡಿ’ ಎಂಬ ಪರಿ ಕಲ್ಪನೆಯೇ ಮಾಯವಾಗುತ್ತಿರುವ ಈ ದಿನ ಗಳಲ್ಲಿ ಮಹಡಿಯ ಮೇಲೆ ಕೀರೆ ಮಡಿ ಮಾಡಿಕೊಳ್ಳುವ ಬೆಳವಣಿಗೆ ಕೆಲವೆಡೆ ಕಂಡು ಬಂದಿದೆ.

ಭಾರತೀನಗರದ ನಿವಾಸಿ ದೇವರಾಜು ಅರಸು ಪತ್ನಿ ಗೌರಮ್ಮ ತಮ್ಮ ಮನೆಯ ಮೂರನೇ ಮಹಡಿಯ ಮೇಲಿನ ಜಾಗದಲ್ಲಿ ಮನೆಗೆ ಬೇಕಾದ ತರಕಾರಿ, ಸೊಪ್ಪು, ಹೂವು ಬೆಳೆದಿದ್ದಾರೆ. ಒಂದಷ್ಟು ಮಣ್ಣು ಸಂಗ್ರಹಿಸಿ ಅದಕ್ಕೆ ಚೌಕಟ್ಟು ಮಾಡಿ ಅಗತ್ಯ ಗೊಬ್ಬರ ಮಿಶ್ರಣ ಮಾಡುವ ಮೂಲಕ ಫ‌ಲವತ್ತಾದ ಭೂಮಿಕೆ ಸಿದ್ದಪಡಿಸಿದ್ದಾರೆ. ವಿವಿಧ ಮಾದರಿಯ ಸೊಪ್ಪುಗಳನ್ನು ಬೆಳೆದಿದ್ದು ಅದರ ಸುತ್ತ-ಮುತ್ತ ಪ್ಲಾಸ್ಟಿಕ್‌ ಕುಂಡ‌, ಮಡಿಕೆ, ಅನುಪಯುಕ್ತ ಬಿಂದಿಗೆ, ಬಕೆಟ್‌ಗಳನ್ನು ಅರ್ಧಕ್ಕೆ ಕತ್ತರಿಸಿಕೊಂಡು ಅದನ್ನೆ ಕುಂಡದ ರೀತಿ ಬಳಸಿ ತರಕಾರಿಗಳನ್ನು ಬೆಳೆದಿದ್ದಾರೆ.

ದಿನನಿತ್ಯ ಬಳಕೆಗೆ ಸೊಪ್ಪು, ಕೊತ್ತಂಬರಿ, ಪಾಲಾಕ್‌, ಮೆಂತ್ಯಸೊಪ್ಪು, ಹಸಿ ಮೆಣಸಿನಕಾಯಿ, ಬದನೆ, ದಾಸವಾಳವನ್ನು ಬೆಳೆದಿದ್ದಾರೆ. ಇವುಗಳಿಗೆ ರೋಗ ಮತ್ತುಕೀಟ ಬಾಧೆ ಇಲ್ಲ. ಇದು ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತವಾಗಿದೆ.

ನಾವು ಬಾಡಿಗೆ ಮನೆಯಲ್ಲಿದ್ದೇವೆ. ಸುಮ್ಮನೆ ಕೂತು ಕಾಲಹರಣ ಮಾಡುವ ಬದಲು ಚಿಕ್ಕದೊಂದು ಕೀರೆಮಡಿಯನ್ನು 3ನೇ ಮಹಡಿಯಲ್ಲಿ ಮಾಡಿಕೊಂಡು ಮನೆಗೆ ಅಗತ್ಯವಾದ ಸೊಪ್ಪು, ತರಕಾರಿಯನ್ನು ಬೆಳೆದು ಕೊಳ್ಳುತ್ತಿದ್ದೇನೆ. ಇದರಿಂದ ಆರ್ಥಿಕ ಮಿತ ವ್ಯಯವೂ ಕಾಣಬಹುದು. ಜೊತೆಗೆ ಆರೋಗ್ಯಕರ ಮತ್ತು ತಾಜಾ ಸೊಪ್ಪು, ತರಕಾರಿ ಮನೆ ಬಳಕೆಗೆ ದೊರೆಯುತ್ತದೆ.
-ಗೌರಮ್ಮ, ಗೃಹಿಣಿ.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.