ಜಿಲ್ಲೆಯಲ್ಲಿ ರಸ ಗೊಬ್ಬರ ಪೂರೈಕೆಗೆ ಸೂಕ್ತ ಕ್ರಮ
3180 ಮೆಟ್ರಿಕ್ ಟನ್‌ಯೂರಿಯಾ ಪೂರೈಕೆ: ಚಂದ್ರಶೇಖರ್
Team Udayavani, Sep 23, 2020, 3:47 PM IST
ಮಂಡ್ಯ: ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಎಲ್ಲ ರಸಗೊಬ್ಬರಗಳಿಗೆ 93127 ಮೆಟ್ರಿಕ್ ಟನ್ ಬೇಡಿಕೆ ಬಂದಿತ್ತು. ಯೂರಿಯಾಗೆ43650 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಆಗಸ್ಟ್‌ವರೆಗೆ 35838 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಸರಬರಾಜು ಮಾಡಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ9750 ಮೆಟ್ರಿಕ್ ಟನ್‌ಯೂರಿಯಾಪೂರೈಸಬೇಕಾಗಿದೆ. ಇದರಲ್ಲಿ ಈಗಾಗಲೇ 3180 ಮೆಟ್ರಿಕ್ ಟನ್ ಪೂರೈಸಲಾಗಿದೆ. ಇನ್ನೂ 6570 ಮೆಟ್ರಿಕ್ ಟನ್ ಪೂರೈಸಲು ಅಗತ್ಯಕ್ರಮ ವಹಿಸಲಾಗಿದೆ ಎಂದರು.
8300 ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ: ಜಿಲ್ಲೆಗೆ ಅಗತ್ಯವಿರುವ 8300 ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಸಲ್ಲಿಸಲಾಗಿದೆ. ಕ್ರಿಬ್ಕೋ, ಎಫ್ಪಿಎಲ್ ಸೇರಿದಂತೆ ವಿವಿಧ ರಸಗೊಬ್ಬರ ಕಂಪನಿಗಳಿಂದ 8300 ಮೆಟ್ರಿಕ್ ಟನ್ ಮುಂದಿನ ದಿನಗಳಲ್ಲಿ ಸರಬರಾಜಾಗಲಿದೆ ಎಂದು ತಿಳಿಸಿದರು. ಪಿಒಎಸ್ ಮೂಲಕ ವಿತರಣೆಗೆ ಕ್ರಮ: ಜಿಲ್ಲೆಯಲ್ಲಿ 210 ಟಿಎಪಿಸಿಎಂಎಸ್ ಸೊಸೈಟಿ ಹಾಗೂ 295 ಡೀಲರ್ಗಳಿದ್ದಾರೆ. ಇವರ ಮುಖಾಂತರ ರೈತರಿಗೆ ವಿತರಿಸಲು ಕ್ರಮ ವಹಿಸಲಾಗಿದೆ. ಆನ್‌ಲೈನ್‌ನಲ್ಲಿ ಪಿಒಎಸ್ ಮೂಲಕವೇ ರೈತರ ಆಧಾರ್ ಸಂಖ್ಯೆ ಹಾಗೂ ಹೆಬ್ಬೆಟ್ಟು ಪಡೆದು ವಿತರಿಸಬೇಕಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಸಂಗ್ರಹವಿದೆ. ಬೇಡಿಕೆ ಎಷ್ಟಿದೆ ಎಂಬುದರ ಮಾಹಿತಿ ಆಧಾರದ ಮೇಲೆ ರಸಗೊಬ್ಬರ ಪೂರೈಸಲಿದೆ. ಆದರೆ, ಇದುವರೆಗೂ ಕೆಲವು ಸೊಸೈಟಿಗಳು ಪಿಒಎಸ್ ಕ್ರಮ ಅನುಸರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಆದ್ದರಿಂದ ಕೃಷಿ ಇಲಾಖೆಯಿಂದ ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ಸೊಸೈಟಿ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಈಗಾಗಲೇ ಯೂರಿಯಾಖರೀದಿಸಿರುವ ರೈತರ ಮಾಹಿತಿ ಪಡೆದು ಪಿಒಎಸ್ ಮಾಡಲಾಗುತ್ತಿದೆ ಎಂದು ಹೇಳಿದರು.
ಕಡಿಮೆ ದರಕ್ಕೆ ರೈತರ ಒಲವು: ಬೇರೆ ರಸಗೊಬ್ಬರಗಳಿಗಿಂತ ಯೂರಿಯಾ ಎಂಆರ್‌ಪಿ ಬೆಲೆ ಕಡಿಮೆ ಇರುವುದರಿಂದ ರೈತರು ಯೂರಿಯಾವನ್ನೇ ಹೆಚ್ಚು ಖರೀದಿಸುತ್ತಿದ್ದಾರೆ. ಡಿಎಪಿ, ಕಾಂಪ್ಲೆಕ್ಸ್, ಅಮೋನಿಯಂ ಸಲ್ಫೆàಟ್ ರಸಗೊಬ್ಬರಗಳ ಬೆಲೆ ಹೆಚ್ಚಿದೆ. ಆದ್ದರಿಂದ ಯೂರಿಯಾವನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.ಅಲ್ಲದೆ,ಬೆಳೆಗೆತಕ್ಕಂತೆಯೂರಿಯಾ ಬಳಸಬೇಕು. ಆದರೆ, ರೈತರು ಹೆಚ್ಚು ಹೆಚ್ಚು ಬೆಳೆಗೆ ಹಾಕುತ್ತಿದ್ದಾರೆ. ಇದರಿಂದ ಭತ್ತದ ಕಾಳುಗಳು ಜೊಳ್ಳು ಬೀಳುವ ಸಾಧ್ಯತೆ ಇದೆ ಎಂದರು.
ರಸಗೊಬ್ಬರ ಸಂಗ್ರಹಿಸಿದವರ ಮೇಲೆ ದಾಳಿ:ರಸಗೊಬ್ಬರಗಳನ್ನು ಖರೀದಿಸಿ, ಶೇಖರಿಸಿರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೆ.ಆರ್.ಪೇಟೆಯ ಶ್ರೀವೆಂಕಟೇಶ್ವರ ಆಗ್ರೋ ಟ್ರೇಡರ್ನ ಮಾಲೀಕ ರಸಗೊಬ್ಬರ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಸುಮಾರು 15 ಟನ್ ರಸಗೊಬ್ಬರ ವಶಪಡಿಸಿಕೊಳ್ಳಲಾಗಿತ್ತು. 21 ದಿನಗಳ ಕಾಲ ಪರವಾನಗಿ ಅಮಾನತ್ತಿನಲ್ಲಿಡಲಾಗಿದೆ ಎಂದರು.
ಸಾವಯವ ಹೆಸರಿನಲ್ಲಿ ಕೆಮಿಕಲ್ಸ್ ಮಾರಾಟ: ಜಿಲ್ಲೆಯಲ್ಲಿ ಸಾವಯವ ಬೆಳೆಗಳ ಹೆಸರಿನಲ್ಲಿ ಕೀಟ ನಾಶಕಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಕೆಮಿಕಲ್ಸ್‌ಗಳನ್ನು ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ವರದಿಯಲ್ಲಿ 10 ಕೆಮಿಕಲ್ಸ್‌ಗಳು ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಮಾರಾಟ ಮಾಡಬೇಕು. ಆದರೆ, ಸಾವಯವ ಹೆಸರಿನಲ್ಲಿ ಮಾರಾಟ ಮಾಡಿದರೆ ಯಾವುದೇ ಅನುಮತಿ ಬೇಕಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಮಂಡ್ಯ 1, ಪಾಂಡವಪುರ 1 ಹಾಗೂ ಕೆ.ಆರ್.ಪೇಟೆಯ 2 ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅವರ ಪರವಾನಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದರು.
10.70 ಲಕ್ಷ ಪ್ಲಾಟ್ ಬೆಳೆ ಸರ್ವೆ : ಜಿಲ್ಲೆಯಲ್ಲಿ 16,92,786 ಬೆಳೆ ಪ್ಲಾಟ್ ಇದ್ದು, ಇದುವರೆಗೂ 10.70 ಲಕ್ಷ ಪ್ಲಾಟ್ ಬೆಳೆ ಸರ್ವೆ ಮಾಹಿತಿ ದಾಖಲಿಸಲಾಗಿದೆ. ಸೆ.23ರವರೆಗೆ ರೈತರು ತಮ್ಮ ಮೊಬೈಲ್ ಆಪ್ ಮೂಲಕ ಬೆಳೆ ಸರ್ವೆ ನಡೆಸಿ ಮಾಹಿತಿ ನಮೂದಿಸಲು ಅವಕಾಶ ನೀಡಲಾಗಿದೆ. ಇದುವರೆಗೂ 3.89 ಲಕ್ಷ ಪ್ಲಾಟ್‌ಗಳ ಬೆಳೆಯ ಸರ್ವೆಯ ಮಾಹಿತಿಯನ್ನು ರೈತರೇ ಅಪ್‌ಲೋಡ್ ಮಾಡಿದ್ದಾರೆ. 6.70 ಲಕ್ಷ ಪ್ಲಾಟ್ ಬೆಳೆಯ ಸರ್ವೆಯನ್ನು ಖಾಸಗಿ ವ್ಯಕ್ತಿಗಳು ಮಾಡಿದ್ದಾರೆ. ಇನ್ನುಳಿದ6.70 ಲಕ್ಷ ಪ್ಲಾಟ್‌ನ ಬೆಳೆ ಸರ್ವೆ ಕಾರ್ಯ ನಡೆಯುತ್ತಿದೆ. ರೈತರು ಮಾಹಿತಿಯನ್ನು ಸರಿಯಾಗಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಬೆಳೆ ದರ್ಶಕ್ 2020 ಮೊಬೈಲ್ ಆಪ್ ಮೂಲಕ ತಿಳಿದುಕೊಳ್ಳಬಹುದು. ತಪ್ಪಿದ್ದರೆ ಮತ್ತೆ ಸರಿಯಾಗಿ ಅಪ್‌ಡೇಟ್ ಮಾಡಬಹುದಾಗಿದೆ ಎಂದುಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಶೇ.98ರಷ್ಟು ಬಿತ್ತನೆ : ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಶೇ.98ರಷ್ಟು ಬಿತ್ತನೆ ಕಾರ್ಯ ನಡೆದಿದೆ. ರಾಗಿ, ಭತ್ತ, ಮುಸುಕಿನ ಜೋಳ, ಉದ್ದು, ಹೆಸರು, ಆಲಸಂದೆ, ಅವರೆ, ನೆಲಗಡಲೆ, ತನಿ ಕಬ್ಬು, ಕೂಳೆ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಲಾಗಿದೆ. ಕೃಷಿ ಇಲಾಖೆಯಿಂದ 1,96,491 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೂ 1,73,994 ಹೆಕ್ಟೇರ್‌ಪ್ರದೇಶಬಿತ್ತನೆಯಾಗಿದೆ.ಕಳೆದವರ್ಷಇದೇಅವಧಿಯಲ್ಲಿ 1,29,924 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿತ್ತು.
ಶೇ.28.7ರಷ್ಟು ಹೆಚ್ಚು ಮಳೆ : ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.28.7ರಷ್ಟು ಹೆಚ್ಚುವರಿ ಮಳೆಯಾಗಿದೆ. ಏಪ್ರಿಲ್‌ನಿಂದ ಸೆ.21ರವರೆಗೆ ಸರಾಸರಿ ವಾಡಿಕೆ ಮಳೆ 429 ಮಿ.ಮೀ ಇತ್ತು. ಆದರೆ,ಈಬಾರಿ 552.2 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ 485.1, ಮದ್ದೂರು 565.7, ಮಳವಳ್ಳಿ 551.1, ಮಂಡ್ಯ 523.1, ನಾಗಮಂಗಲ 581.3, ಪಾಂಡವಪುರ 584.3, ಶ್ರೀರಂಗಪಟ್ಟಣ 574.6 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.