ನಟ ಅಜಯ್ ರಾವ್ ವಿಚಾರಣೆಗೆ ಹಾಜರು
ಡಿವೈಎಸ್ಪಿ ಸೂಚನೆ ಮೇರೆಗೆ ಬಿಡದಿ ಠಾಣೆಗೆ ಆಗಮಿಸಿದ ಚಿತ್ರನಟ
Team Udayavani, Aug 27, 2021, 7:12 PM IST
ರಾಮನಗರ: ಲವ್ ಯೂ ರಚ್ಚು ಚಿತ್ರದ ನಾಯಕ ನಟ ಅಜಯ್ ರಾವ್ ಗುರುವಾರ ತಾಲೂಕಿನ ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿ
ಸಿದ್ದಾರೆ. ಕಳೆದ ಆ.9ರಂದು ಬಿಡದಿ ಹೋಬಳಿ ಜೋಗನ ಪಾಳ್ಯದಲ್ಲಿ ಖಾಸಗಿ ತೆಂಗಿನ ತೋಟದಲ್ಲಿ ಚಿತ್ರೀಕರಣದ ವೇಳೆ ಸಂಭವಿಸಿದ್ದ ವಿದ್ಯುತ್ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದರು. ಘಟನೆ ನಡೆದ ಸಂದರ್ಭದಲ್ಲಿ ನಾಯಕ ನಟ ಅಜಯ್ ರಾವ್ ಸ್ಥಳದಲ್ಲಿದ್ದರು. ಎಫ್ಐಆರ್‌ನಲ್ಲಿ ಅಜಯ್‌ರಾವ್ ಹೆಸರಿಲ್ಲ. ಆದರೂ ಇವರು ನಿರೀಕ್ಷಿಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ರಾಮನಗರ ಡಿವೈಎಸ್ಪಿ ಮೋಹನ್ ಅವರ ಸೂಚನೆಯ ಮೇರೆಗೆ ಬಿಡದಿ ಠಾಣೆಗೆ ಆಗಮಿಸಿದ ಅವರು ವಿಚಾರಣೆ ಎದುರಿಸಿದರು.
ಅವಘಡ ನಡೆದಾಗ ಗಾಯಾಳುಗಳ ಸಹಕಾರಕ್ಕೆ ಧಾವಿಸಲಿಲ್ಲ ಎಂಬ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅಜಯ್ ರಾವ್, ಸೆಟ್‌ನಲ್ಲಿ ನಾನೊಬ್ಬನೇ ಇರಲಿಲ್ಲ. ಎಲ್ಲರೂ ಇದ್ದಾಗ ನಾನು ಎಲ್ಲರಂತೆಹೋಗಲುಆಗಲ್ಲ. ನಾನು ಒಬ್ಬ ತಿಳಿವಳಿಕೆ ಇರುವ ವ್ಯಕ್ತಿ. ಗುಂಪು ಸೇರಿರುವ ಸ್ಥಳದಲ್ಲಿ ನಾನು ಹೋಗುವುದು ಸರಿಯಲ್ಲ. ಬೇರೆಯವರು ಇದ್ದಾಗ ನಾನು ತಾಳ್ಮೆಯಿಂದ ಯೋಚನೆ ಮಾಡಿ ಮುನ್ನಡೆಯಬೇಕು ಎಂದುತಿಳಿಸಿದರು.
ಚಿತ್ರೀಕರಣ ವೇಳೆ ಏನು ದುರ್ಘಟನೆ ಸಂಭವಿಸಿದರೂ ಹೀರೋ ಮೊದಲು ಹೋಗಬೇಕೆಂದು ಫಿಲ್ಮ್ ಚೇಂಬರ್ ರೂಲ್ಸ್ ಮಾಡಲಿ. ತಪ್ಪು ಮಾಹಿತಿ ಹಬ್ಬಿಸುತ್ತಿರುವವರು ಸಿಕ್ಕರೆ ಒಂದು ನಾಲ್ಕು ಒಳ್ಳೆಯ ಮಾತು ಹೇಳಬಹುದು. ಆದರೆ, ಅಂತಹವರು ಯಾರು ಎಂದು ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ತಲೆ ಎತ್ತಲಿರುವ ಸಾಂಬಾರು ಪಾರ್ಕ್ ನಿರ್ಮಾಣ
ಸಾಕ್ಷ್ಯ ನಾಶಕ್ಕೆ ಚಿತ್ರ ತಂಡ ಯತ್ನಿಸಿಲ್ಲ: ಚಿತ್ರ ತಂಡ ಸಾಕ್ಷ್ಯಗಳನ್ನು ನಾಶ ಪಡಿಸುವ ಕೆಲಸ ಮಾಡಿಲ್ಲ. ನಿರ್ಮಾಪಕರು ಮೃತನ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡುತ್ತಾರೆ. ನಿರ್ಮಾಪಕರು ಚೆಕ್ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾನು ಸಹ ಮೃತನ ಕುಟುಂಬಕ್ಕೆ ನೆರವು ನೀಡುತ್ತೇನೆ. ಇದಕ್ಕೂ ನಾಯಕ ನಟನೇ ಮೊದಲು ಬರಬೇಕು ಅಂದರೆ ಅದಕ್ಕೂ ಸಿದ್ಧನಿದ್ದೇನೆ ಎಂದು ಅಜಯ್ ರಾವ್ ತಿಳಿಸಿದರು.
ಸಿಕ್ಕಿತು ಜಾಮೀನು
ಲವ್ ಯೂ ರಚ್ಚು ಚಿತ್ರದ ನಾಯಕ ನಟ ಅಜಯ್ ರಾವ್, ನಿರ್ಮಾಪಕ ಗುರುದೇಶ ಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ನಿರ್ದೇಶಕ ಶಂಕರ್,ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಅವರ ಜಾಮೀನು ಅರ್ಜಿ ಯನ್ನು ನ್ಯಾಯಾಲಯ ಪುರಸ್ಕರಿಸಿದರು.
ಹೆದರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಲ್ಲ
ತಾವು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದು, ಹೆದರಿಕೊಂಡು ಅಲ್ಲ. ಅದ್ಯಾರೋ ಮಹಾನುಭಾವರು ತಾವು ಹೆದರಿಕೊಂಡು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿಕೆಕೊಟ್ಟಿದ್ದಾರೆ. ತಾವು ತಮಗಾಗಿ ಜಾಮೀನು ಅರ್ಜಿ ಸಲ್ಲಿಸಿಲ್ಲ. ತಮ್ಮನ್ನು ನಂಬಿಕೊಂಡು ಕೋಟ್ಯಂತರ ರೂ. ಬಂಡವಾಳ ಹೂಡಿರುವ ನಿರ್ಮಾಪಕರಿದ್ದಾರೆ. ಹಲವಾರು ಚಿತ್ರಗಳು ಬಾಕಿ ಇವೆ, ರೀ ರಿಲೀಸ್ ಸಿನಿಮಾ ಇದೆ. ರಿಲೀಸ್‌ಗೆ ಸಿದ್ಧವಾಗಿರುವ ಸಿನೆಮಾಗಳು ಇವೆ. ಎರಡು ವರ್ಷಗಳ ಹಿಂದೆ ಕಮಿಟ್ ಆಗಿರುವ ಚಿತ್ರಗಳಿವೆ ಎಂದರು. ತಾವು ಜೈಲಿನಲ್ಲಿದ್ದರೆ ಚಿತ್ರೀಕರಣ ಹೇಗೆ ಸಾಧ್ಯ, ಜೈಲಿನಿಂದ ಹಾರಿಕೊಂಡು ಬಂದು ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಾ ಎಂದರು.ಕಾನೂನು ಪ್ರಕಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೇನೆ, ಭಯದಿಂದ ಅಲ್ಲ ಎಂದು ಅಜಯ್ ರಾವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.