ಮಿತ ನೀರಿನ ಬಳಕೆೆ ಸಾಧನ ಅಳವಡಿಸಿಕೊಳ್ಳಿ
ಕೊಮ್ಮನಹಳ್ಳಿಯ ಬಾಳೆ ತೋಟದಲ್ಲಿ ವಾಟರ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂನಿಂದ ನೀರು, ವಿದ್ಯುತ್ ಉಳಿತಾಯದ ಪ್ರಾತ್ಯಕ್ಷಿಕೆ ಪ್ರದರ್ಶನ
Team Udayavani, May 15, 2019, 4:09 PM IST
.ಆರ್.ಪೇಟೆ ರೋಬೋ ಮಂಜೇಗೌಡ ನೀರಿನ ಮಿತ ಬಳಕೆಗೆ ವಾಟರ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ ಕಾರ್ಯನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೆ.ಆರ್.ಪೇಟೆ: ಮಳೆ ಪ್ರಮಾಣ ಇಳಿಮುಖ, ಅಂತರ್ಜಲ ಮಟ್ಟ ಕುಸಿತದಿಂದ ನೀರಿಗೆ ಹಾಹಾ ಕಾರವೆದ್ದಿರುವ ಈ ಸಂದರ್ಭದಲ್ಲಿ ರೋಬೋ ಮಂಜೇಗೌಡ ತೋಟಗಳಿಗೆ ನೀರನ್ನು ಮಿತವಾಗಿ ಬಳಸುವ ಹೊಸ ಆವಿಷ್ಕಾರ ಕಂಡು ಹಿಡಿದು ರೈತರಿಗೆ ಕೋಮನಹಳ್ಳಿಯ ತಮ್ಮ ತೋಟದಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಇಂದಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತ್ತಿದೆ. ಹಾಗಾಗಿ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದನ್ನು ರೂಢಿಸಿ ಕೊಳ್ಳಬೇಕು. ಹಾಗೆ ಪೋಲಾಗುವ ನೀರು ತಡೆಯುವ ಯಂತ್ರವನ್ನು ರೋಬೋ ಮಂಜೇಗೌಡ ಆವಿಷ್ಕರಿ ಸಿದ್ದು, ಇದು ರೈತರಿಗೆ ವರದಾನವಾಗಿದೆ. ಕೇವಲ ನಾಲ್ಕೈದು ಸಾವಿರ ರೂ.ಗಳಲ್ಲಿ ಈ ಯಂತ್ರ ತಯಾರಿಸಿ ಮಾರಾಟ ಮಾಡಬಹುದು. ಹನಿ ನೀರಾವರಿ ಪದ್ಧತಿ ಯನ್ನು ಅಳವಡಿಸಿಕೊಂಡಿರುವ ರೈತರು ತೋಟಗಳಿಗೆ ವಾಟರ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರು ಪೋಲಾಗು ವುದನ್ನು ತಡೆಯಬಹುದು. ಜೊತೆಗೆ ವಿದ್ಯುತ್ ಬಿಲ್ ಹೊರೆಯೂ ಕಡಿಮೆ ಮಾಡಿಕೊಳ್ಳಬ ಹುದು ಎಂಬ ಬಗ್ಗೆ ಮಂಜೇಗೌಡ ಮಾಹಿತಿ ನೀಡಿದರು.
ಅಗತ್ಯವಿದ್ದಷ್ಟೇ ಬಳಕೆ: ಇಂದಿನ ದಿನಗಳಲ್ಲಿ ಬೇಸಾಯಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಬಳಸಿ ನೀರು ಪೋಲಾಗುತ್ತಿದೆ. ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಒಂದು ದಿನಕ್ಕೆ ಎಷ್ಟು ಲೀಟರ್ ನೀರಿನ ಅವಶ್ಯಕತೆ ಇದೆಯೋ ಅಷ್ಟು ನೀರಿನ ಪ್ರಮಾಣ ಯಂತ್ರದಲ್ಲಿ ಸೆಟ್ ಮಾಡಿದರೆ ಸಾಕು ನೀರಿನ ಗರಿಷ್ಠ ಪ್ರಮಾಣದ ನೀರಿನ ಸರಬರಾಜಾಗುತ್ತಿದ್ದಂತೆ ಮೋಟಾರ್ ಆಫ್ ಆಗುತ್ತದೆ. ಎಂದಿನಂತೆ ಹನಿ ನೀರಾವರಿ ಪದ್ಧತಿ ಸರಬರಾಜಾಗುವ ನೀರಿಗೆ ಮೋಟಾರ್ ಮೂರು ಗಂಟೆ ಕೆಲಸ ಮಾಡಿದರೆ ಈ ಯಂತ್ರದ ಮೂಲಕ ಎರಡು ಗಂಟೆ ಅವಧಿಯಲ್ಲಿ ನೀರು ಪೂರೈಕೆಯಾಗುತ್ತದೆ. ವ್ಯರ್ಥವಾಗಿ ಹರಿಯುವ ನೀರು ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಹೊಸಕೋಟೆಯ ಲಕ್ಷ್ಮೀದೇವಮ್ಮ, ಮುದುಗೆರೆ ರಾಜೇಗೌಡ, ಮೊಸಳೆಕೊಪ್ಪಲು ಬೋರೇಗೌಡ, ಸಿಂಧಘಟ್ಟ ಮುದ್ದುಕುಮಾರ್, ಕೆ.ಎಸ್.ಸೋಮಶೇಖರ್ ಸೇರಿದಂತೆ ವಿವಿಧ ತಾಲೂಕು ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.