ಶಾಲಾ ಆವರಣದಲ್ಲಿ 5 ಸಾವಿರ ಸಸಿ ಬೆಳೆಸುವ ಗುರಿ
Team Udayavani, Jul 15, 2019, 12:14 PM IST
ಕೆ.ಆರ್.ಪೇಟೆ ತಾಲೂಕಿನ ಶೆಟ್ಟಿನಾಯಕನಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹೊರನೋಟ.
ಕೆ.ಆರ್.ಪೇಟೆ: ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿರುವ ಹೆಣ್ಣುಮಕ್ಕಳಿಗೆ ಪಾಠದ ಜೊತೆಯಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸಿ ಎರಡೇ ವರ್ಷದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಬೆಳೆಸುವ ಮೂಲಕ ಇತರೆ ಶಾಲೆಗಳಿಗೂ ಮಾದರಿಯಾಗಿದ್ದಾರೆ.
ತಾಲೂಕಿನ ಶೆಟ್ಟಿನಾಯಕನಕೊಪ್ಪಲು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 250 ಹೆಣ್ಣು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರ, ವೃಕ್ಷ ಸಂರಕ್ಷಣೆ ಕುರಿತು ಪ್ರಾಯೋಗಿ ಕವಾಗಿ ಬೋಧಿಸಲಾಗುತ್ತಿದೆ. ಒಂದು ಮಗುವಿಗೆ ಕನಿಷ್ಟ 4 ಸಸಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಮಕ್ಕಳು ಅವರವರ ಸಸಿಗಳನ್ನು ಒಬ್ಬರಿಗಿಂತ ಒಬ್ಬರು ಕಾಳಜಿಯಿಂದ ಬೆಳೆಸುವ ಜವಾಬ್ದಾರಿ ಹೊತ್ತಿದ್ದಾರೆ.
ಸಾವಯವ ಗೊಬ್ಬರ: ಇಲ್ಲಿ ಮತ್ತೂಂದು ವಿಶೇಷವೆಂದರೆ ಮಕ್ಕಳು ಸಸಿಗಳಿಗೆ ಸಾವಯವ ಗೊಬ್ಬರವನ್ನೇ ಹಾಕುತ್ತಿರುವುದು ಗಮನಾರ್ಹ. ಜೊತೆಗೆ ಪ್ರತಿದಿನ ನೀರನ್ನು ಹಾಕಿ ಅತೀವ ಕಾಳಜಿ ವಹಿಸಿದ್ದು ಶಾಲಾ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ವಾಸ್ತವ್ಯ ಇದ್ದು ಬೆಳಗ್ಗೆ ಎದ್ದ ತಕ್ಷಣ ಸಸಿಗಳ ಪೋಷಣೆಗೆಂದೇ 30 ನಿಮಿಷ ಮೀಸಲಿಡುತ್ತಾರೆ.
ಹಣ್ಣು, ತರಕಾರಿ, ಹೂವು: 10 ಎಕರೆ ವಿಶಾಲವಾದ ಮೈದಾನದಲ್ಲಿ ಹೊಂಗೆ, ಬಾದಾಮಿ, ಅರಳಿ, ಮಾವು ಸೇರಿ ನೇರಳೆ ಹಣ್ಣಿನ 1500 ಸಸಿಗಳ ಜೊತೆಯಲ್ಲಿ ಪ್ರತಿದಿನ ಶಾಲೆಯಲ್ಲಿ ಅಡುಗೆಗೆ ಅಗತ್ಯವಾದ ತೊಗರಿ, ಟೊಮೆಟೋ, ಹಸಿಮೆಣಸಿನಕಾಯಿ, ಸೊಪ್ಪು ಮತ್ತಿತರ ಪೌಷ್ಟಿಕಾಂಶವುಳ್ಳ ಹಸಿರು ತರಕಾರಿ ಬೆಳೆದು ಮಕ್ಕಳ ಊಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ 200 ಬಾಳೆ ಗಿಡ ಬೆಳೆಯಲಾಗಿದೆ. ಅವುಗಳನ್ನು ಮಕ್ಕಳೇ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹೂವಿನ ಗಿಡಗಳು ಶಾಲೆ ಸೌಂದರ್ಯ ಹೆಚ್ಚಿಸಿವೆ. ಒಟ್ಟಾರೆ ಶಾಲಾ ಆವರಣದಲ್ಲಿ 2 ಸಾವಿರ ಮರಗಿಡಗಳು ಬೆಳೆಯುತ್ತಿವೆ. ಮಕ್ಕಳಿಗೆ ಪರಿಶುದ್ಧ ಗಾಳಿ ಮತ್ತು ನೆರಳು ಸಿಗುತ್ತಿದೆ.
ಸ್ವಾಗತಿಸುವ ಹುಲ್ಲುಹಾಸು: ಸಾಮಾನ್ಯವಾಗಿ ನಾವು ಸರ್ಕಾರಿ ಶಾಲೆಗಳಿಗೆ ಹೋದರೆ ಶಾಲೆ ನಾಮಫಲಕ ಮತ್ತು ಅದರ ಮುಂದೆ ನಿಲ್ಲಿಸಿರುವ ವಾಹನ ಅಥವಾ ಒಂದೆರಡು ಮರಗಳು ನಮ್ಮನ್ನು ಸ್ವಾಗತಿಸುವುದೇ ಹೆಚ್ಚು. ಆದರೆ, ಈ ಶಾಲೆಯ ಆವರಣ ಪ್ರವೇಶಿಸಿದರೆ ನಮಗೆ ಶಾಲೆಗೆ ಬಂದ ಅನುಭವದ ಬದಲು ನಾವೊಂದು ಸುಂದರವಾದ ಉದ್ಯಾನವನದಲ್ಲಿದ್ದೇವೆ ಎಂಬ ಅನುಭವವಾಗುತ್ತದೆ. ಶಾಲೆ ಮುಂದೆ ಹಸಿರಿನಿಂದ ಕಂಗೊಳಿಸುವ ಹುಲ್ಲಿನ ಹಾಸು, ಅದಕ್ಕೆ ಹೊಂದುವಂತೆ ಸುಂದರ ಹೂವು ಮತ್ತು ಎಲೆ ಹೊಂದಿರುವ ಅಲಂಕಾರಿಕ ಸಸಿಗಳು ನಮ್ಮನ್ನು ಸ್ವಾಗತಿಸುತ್ತವೆ. ಜೊತೆಗೆ ಶಾಲೆಯ ಸುತ್ತ ಇರುವ ಮರಗಳ ಕೆಳಗೆ ವಿಶ್ರಾಂತಿ ಪಡೆಯಲು ಕಲ್ಲಿನ ಆಸನ ನಿರ್ಮಿಸಲಾಗಿದೆ.
● ಎಚ್.ಬಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.