ಸನ್ಯಾಸಿ ಮಂಟಪಕ್ಕೆ ಬೇಕು ತ್ವರಿತ ಕಾಯಕಲ್ಪ


Team Udayavani, Jun 3, 2022, 11:40 AM IST

6mantap

ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಮಾದಾಪುರ ಗ್ರಾಮದ ಸನ್ಯಾಸಿ ಮಂಟಪ ತನ್ನದೇ ಆದ ಆಧ್ಯಾತ್ಮಿಕ, ಶ್ರಾದ್ಧ ಕೇಂದ್ರ, ಪಿಂಡ ಪ್ರಧಾನ ಕೇಂದ್ರವಾಗಿದೆ. ಗ್ರಾಮಾಭಿವೃದ್ಧಿಗಾಗಿ ನೂರಾರು ಎಕರೆ ಫ‌ಲವತ್ತಾದ ಭೂಮಿಯನ್ನು ಗ್ರಾಮದ ಹೆಣ್ಣು ಮಗಳಾದ ಮಹಾರಾಣಿ ದೇವಿರಮ್ಮಣ್ಣಿ ಗ್ರಾಮಕ್ಕೆ ದತ್ತು ನೀಡಿದ್ದು, ಇದರಲ್ಲಿ ಸನ್ಯಾಸಿ ಮಂಟಪ ಕೂಡ ಒಂದಾಗಿದೆ.

ಸುಮಾರು 300 ವರ್ಷಗಳ ಇತಿಹಾಸವಿರುವ ಮಂಟಪ ನಿರ್ವಹಣೆ ಕಾಣದೆ ಒತ್ತುವರಿ, ಗಿಡಗಂಟಿ, ಜೋಂಡು ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಗ್ರಾಮದ ಹೊರವಲಯದ ಈ ಮಂಟಪದಲ್ಲಿ ಬಲು ಹಿಂದೆ ಓರ್ವ ಸನ್ಯಾಸಿ ನೆಲಸಿ ಜಪ, ತಪ ಮಾಡುತ್ತಿದ್ದನು ಎನ್ನುವುದು ಗ್ರಾಮದ ಹಿರಿಯರ ಅನಿಸಿಕೆಯಾಗಿದೆ. ಈ ಪ್ರದೇಶದಲ್ಲಿ ಹೇಮಾವತಿ ನದಿ ಪೂರ್ವಾಭಿಮುಖವಾಗಿ ಹರಿಯುವುದರಿಂದ ಅಪಾರ ಕರ್ಮಕ್ಕೆ ಪ್ರಾಶಸ್ತ್ಯವಾಗಿದೆ.

ಸನ್ಯಾಸಿ ನಿತ್ಯ ಗ್ರಾಮಕ್ಕೆ ತೆರಳಿ ಒಂದು ಮನೆಯಲ್ಲಿ ಮಾತ್ರ ಭಿಕ್ಷಾಟನೆ ಮಾಡಿ ನಂತರ ಜಪ, ತಪವನ್ನು ಮಂಟಪದಲ್ಲಿ ಮಾಡುತ್ತಿದ್ದರು. ಗ್ರಾಮದ ಓರ್ವ ಮಹಿಳೆ ಭಿಕ್ಷೆ ಬದಲು ಸಗಣಿಯನ್ನು ಭಿಕ್ಷೆ ನೀಡಿದ ಫ‌ಲವಾಗಿ ನೊಂದು ಈ ಸ್ಥಳದಲ್ಲಿರುವ ನದಿಯಲ್ಲಿ ಪ್ರಾಣ ತ್ಯಾಗ ಮಾಡಿದರು ಎನ್ನುವುದು ಸ್ಥಳೀಕರ ನುಡಿ. ಅಂದಿನಿಂದ ಈ ಸ್ಥಳದಲ್ಲಿ ಅಪಾರಕರ್ಮ, ಪಿಂಡ ಪ್ರಧಾನ ಕಾರ್ಯ ಸ್ಥಳದಲ್ಲಿ ನಡೆಯುತ್ತಿದ್ದು, ನಿರ್ವಹಣೆ ಕಾಣದೆ ಸನ್ಯಾಸಿ ಮಂಟಪ ಕುಸಿಯುವ ಹಂತ ತಲುಪಿದೆ. ತ್ವರಿತವಾಗಿ ಶ್ರಮದಾನದ ಮೂಲಕವಾದರೂ ಕನಿಷ್ಠ ಸನ್ಯಾಸಿ ಮಂಟಪ ಇರುವುದನ್ನು ಕಾಣುವಂತೆ ಮಾಡಲು ಮುಂದಾಗಬೇಕಿದೆ.

ನಮ್ಮ ಕ್ಷೇತ್ರದಲ್ಲಿ ಈ ಮಂಟಪ ಇರುವುದೇ ಹೆಮ್ಮೆಯಾಗಿದ್ದು, ಇತಿಹಾಸದ ಕುರುಹುನಂತಿರುವ ಈ ಸ್ಥಳದ ಅಭಿವೃದ್ಧಿಗೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. ಎಲ್ಲೆಡೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಶ್ರಮದಾನದ ಮೂಲಕ ಕೋಟೆ ಕೊತ್ತಲು ಶುಚಿ ಮಾಡಲು ಮುಂದಾಗುತ್ತಿದ್ದು, ನಮ್ಮೂರಿನ ಸ್ಮಾರಕದಂತಿರುವ ಈ ಮಂಟಪ ಶುಚಿಗೊಳಿಸುವರೇ ಎಂದು ಕಾದು ನೋಡಬೇಕಿದೆ ಎಂದು ಮಾದಾಪುರದ ಶೇಖರ್‌ ತಿಳಿಸಿದ್ದಾರೆ.

ಸ್ಥಳೀಯರ ಇಚ್ಛಾಶಕ್ತಿ ಕೊರತೆಯಿಂದ ಈಗಾಗಲೇ ದೇವಿರಮ್ಮಣ್ಣಿ ಹುಟ್ಟಿದ ಜಾಗದ ಕುರುಹು ಇಲ್ಲದಂತಾಗಿದೆ. ಇನ್ನಾದರೂ ಈ ಸನ್ಯಾಸಿ ಮಂಟಪವನ್ನು ಜಥನ ಮಾಡುವ ಕೆಲಸ ತ್ವರಿತವಾಗಿ ಮುಂದಾಗಬೇಕಿದೆ. 17 ಕಲ್ಲಿನಿಂದ ನಿರ್ಮಿತವಾಗಿರುವ ಮಂಟಪ ಹವಾನಿಯಂತ್ರಣ ಕೇಂದ್ರದಂತಿದ್ದು ಜಥನ ಮಾಡಿದರೆ ಸುಂದರ ಐತಿಹ್ಯ ಸ್ಥಳವಾಗಲಿದೆ.

ಟಾಪ್ ನ್ಯೂಸ್

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

crimebb

Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Arrest

Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.