ಪ್ರವಾಸಿಗರ ಮೃತ್ಯುಕೂಪವಾದ ಬಲಮುರಿ, ಎಡಮುರಿ

ನಾಲ್ಕೂವರೆ ತಿಂಗಳಲ್ಲಿ 11ಪ್ರವಾಸಿಗರ ಸಾವು • ಎಚ್ಚರಿಕೆ ಫ‌ಲಕ ಹಾಕಿದರೂ ಡೋಂಟ್ ಕೇರ್‌ • ಪ್ರವಾಸಿಗರ ರಕ್ಷಣೆಗೆ ಕ್ರಮ

Team Udayavani, Jun 3, 2019, 9:51 AM IST

mandya-tdy-1..

ಶ್ರೀರಂಗಪಟ್ಟಣ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಲಮುರಿ ಹಾಗೂ ಎಡಮುರಿ ಜಲಪಾತಗಳು ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆ. ಸೂಚನಾ ಫ‌ಲಕಗಳನ್ನು ಅಳವಡಿಸಿ ಅಪಾಯದ ಮುನ್ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ನೀರಿನೊಡನೆ ಸರಸವಾಡಲು ಇಳಿಯುವ ಪ್ರವಾಸಿಗರು ಸಾವನ್ನಪ್ಪುತ್ತಿದ್ದಾರೆ. ಕಳೆದ ನಾಲ್ಕೂವರೆ ತಿಂಗಳಲ್ಲಿ 11 ಮಂದಿ ಸಾವನ್ನಪ್ಪಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕೆಆರ್‌ಎಸ್‌ -ಮೈಸೂರು ಮಾರ್ಗ ಮದ್ಯೆ ಇರುವ ಬೆಳಗೊಳ ಗ್ರಾಮದ ಬಳಿಯಿಂದ ಉತ್ತರಕ್ಕೆ ಎರಡೂವರೆ ಕಿ.ಮೀ. ಸಾಗಿದರೆ ಕಾಣುವುದೇ ಬಲಮುರಿ. ಕೆಆರ್‌ಎಸ್‌ ಕೆಳಭಾಗದಲ್ಲಿನ ರೈತರಿಗೆ ಮೈಸೂರು ರಾಜವಂಶಸ್ಥರು 300 ವರ್ಷಗಳ ಹಿಂದೆಯೇ ಅಣೆಕಟ್ಟು ನಿರ್ಮಾಣ ಮಾಡಿ ಆ ಮೂಲಕ ನಾಲೆಗಳಿಗೆ ನೀರು ಹರಿಸಿ ರೈತರ ಬಾಳು ಬೆಳಕಾಗುವಂತೆ ಮಾಡಿದ್ದರು.

ನೀರಿನ ಆಟದಲ್ಲಿ ಪ್ರಾಣಬಲಿ: ಬಲಮುರಿಯ ಬಳಿಯೇ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಚಂದ್ರಾಕಾರದಲ್ಲಿ ಕಟ್ಟೆ ನಿರ್ಮಿಸಿ ನಾಲೆಗೆ ನೀರು ಹರಿಸಲು ಮಾಡಿರುವ ವಿನ್ಯಾಸವೇ ಇಲ್ಲಿನ ಸೌಂದರ್ಯಕ್ಕೆ ಮೆರಗು ತಂದಿದೆ. ಕಟ್ಟೆಯ ಮೇಲಿಂದ ಬಿದ್ದ ನೀರಿನ ವಿಶಾಲ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಆಗಮಿಸುವರು. ಬಲಮುರಿಯ ಪ್ರಕೃತಿ ಸೊಬಗಿಗೆ ಮಾರುಹೋಗುವ ಪ್ರವಾಸಿಗರು ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿನ ಸೌಂದರ್ಯ ಸವಿಯುತ್ತಿದ್ದಾರೆ.

ಬಲಮುರಿಯ ಸೌಂದರ್ಯವನ್ನಷ್ಟೇ ಸವಿದು ಹೋಗಲು ತಯಾರಿಲ್ಲದ ಪ್ರವಾಸಿಗರು ನೀರಿನೊಳಗೆ ಇಳಿದು ಆಟವಾಡಲು ಹೋಗಿ ನೀರಿನ ಸುಳಿ ಹಾಗೂ ನೀರಿನ ಹೊಂಡಗಳಿರುವುದು ಗೊತ್ತಿಲ್ಲದೆ ಅಪಾಯಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಿಬ್ಬಂದಿ ಕಣ್ತಪ್ಪಿಸಿ ನೀರಿನಾಟ: ಪೊಲೀಸ್‌ ಇಲಾಖೆ , ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಬಲಮುರಿ ಸಮಿತಿ ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸೇರಿ ನದಿ ತೀರದ ಅಲ್ಲಲ್ಲಿ ಎಚ್ಚರಿಕೆ ಫ‌ಲಕಗಳನ್ನು ಹಾಕಿದೆ. ನದಿ ಬಂಡೆ ಮೇಲೆ ಹೋಗಿ ಪೋಟೋ ತೆಗೆಯಬೇಡಿ, ಇಲ್ಲಿ ಸುಳಿ ಇದೆ. ಆ ಸ್ಥಳಕ್ಕೆ ಹೋಗಬೇಡಿ, ಈ ವರ್ಷ ಇಷ್ಟು ಜನ ಸಾವನ್ನಪ್ಪಿದ್ಧಾರೆ ಎಂದು ವಿವಿಧ ರೀತಿಯ ಫ‌ಲಕಗಳನ್ನು ಹಾಕಿದರೂ ಪ್ರವಾಸಿಗರು ಅದನ್ನು ಗಮನಿಸಿಯೂ ಭಯವಿಲ್ಲದೆ ನೀರಿಗಿಳಿಯುತ್ತಾ ಕೊನೆಗೆ ಮೃತ್ಯಕೂಪಕ್ಕೆ ಸಿಲುಕಿ ಪ್ರಾಣ ಬಿಡುತ್ತಿದ್ದಾರೆ. ಪೊಲೀಸರು ಸಹ ಪ್ರವಾಸೋದ್ಯಮ ಇಲಾಖೆಯಿಂದ ಬಲಮುರಿಯಲ್ಲಿ ನೀರಿಗಿಳಿಯುವವರ ಬಗ್ಗೆ ನಿಗಾ ಇಡಲು ಮೂರು-ನಾಲ್ಕು ಸಿಬ್ಬಂದಿ ನೇಮಿಸಿದೆ. ಆದರೂ ಸಿಬ್ಬಂದಿಯ ಕಣ್ತಪ್ಪಿಸಿ ನೀರಿಗಿಳಿಯುವುದು ಕಂಡುಬರುತ್ತಿದೆ.

ಒಂದೇ ದಿನ ಐವರ ಸಾವು: ಈ ವರ್ಷದ ಜನವರಿ 19ರಿಂದ ಇಲ್ಲಿವರೆಗೆ ಬಲಮುರಿ ಹಾಗೂ ಎಡಮುರಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಬಲಮುರಿಯ ಕತ್ತೆಹಳ್ಳದ ಬಳಿಯೇ ಒಂದು ಕುಟುಂಬದ ಐವರು ಸ್ನಾನ ಮಾಡಲು ಹೋಗಿ ಒಬ್ಬರನ್ನು ರಕ್ಷಿಸಲು ಮತ್ತೂಬ್ಬರು ಮುಂದಾಗಿ ಕೊನೆಗೆ 5 ಮಂದಿ ಒಂದೇ ದಿನ ಸಾವನ್ನಪ್ಪಿರುವುದು ದೊಡ್ಡ ದುರಂತವಾಗಿದೆ.

ಮೇ 12ರಂದು ಮೈಸೂರಿನ ಇಬ್ಬರು ಯುವಕರು 18ರಂದು ಹಾಸನ ಯುವಕ ಹೀಗೆ ಪ್ರತಿ ಬಾರಿಯೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಲು ಎಂದು ಮುಂದಾಗದಿರುವುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ. ಇದೇ ತಿಂಗಳಲ್ಲಿ ವಾರದ ಅಂತರದಲ್ಲಿ ನಾಲ್ವರು ಮೃತಪಟ್ಟಿರುವುದು ಬಲಮುರಿ ಪ್ರವಾಸಿ ತಾಣದ ನಿಸರ್ಗ ಸೌಂದರ್ಯದ ಹಿಂದಿನ ಸಾವಿನ ನಿಗೂಢತೆಗೆ ಸಾಕ್ಷಿಯಾಗಿದೆ.

13 ವರ್ಷದಲ್ಲಿ 105 ಸಾವು: ಕಳೆದ 13 ವರ್ಷದಲ್ಲಿ ಬಲಮುರಿ ವ್ಯಾಪ್ತಿಯಲ್ಲಿ ಒಟ್ಟು 105 ಮಂದಿ ಸಾವನ್ನಪ್ಪಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2006ರಲ್ಲಿ 05, 2007ರಲ್ಲಿ 09, 2008ರಲ್ಲಿ 09, 2010ರಲ್ಲಿ 08, 2011 ರಲ್ಲಿ 11, 2012ರಲ್ಲಿ 08, 2013ರಲ್ಲಿ 07, 2014ರಲ್ಲಿ 15, 2015ರಲ್ಲಿ 08, 2016ರಲ್ಲಿ 04, 2017ರಲ್ಲಿ 09, 2018ರಲ್ಲಿ 01 ಹಾಗೂ 2019ರ ಜನವರಿಯಿಂದ ಮೇವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ.

● ಗಂಜಾಂ ಮಂಜು

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.