ಬರೋಬ್ಬರಿ 1.91 ಲಕ್ಷ ರೂ.ಗೆ ಮಾರಾಟವಾದ ಬಂಡೂರು ಟಗರು: ಊರಲ್ಲೆಲ್ಲಾ ಮೆರವಣಿಗೆ
Team Udayavani, Nov 7, 2021, 4:23 PM IST
ಮಳವಳ್ಳಿ (ಮಂಡ್ಯ): ಸಾಮಾನ್ಯವಾಗಿ ಒಂದು ಬಂಡೂರು ತಳಿಯ ಟಗರು 25 ರಿಂದ 30 ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಆದರೆ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ರೈತರೊಬ್ಬರು ಸಾಕಿದ ಟಗರೊಂದು ಬರೋಬ್ಬರಿ 1.91 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ರೈತ ಸಣ್ಣಪ್ಪ ಎಂಬುವವರ ಬಂಡೂರು ತಳಿಯ ಟಗರನ್ನು ಮಂಡ್ಯ ತಾಲ್ಲೂಕಿನ ಬಿದರಕೋಟೆಯ ರೈತ ಕೃಷ್ಣೇಗೌಡರಿಗೆ 1.91 ಲಕ್ಷ ರೂ. ಗೆ ಮಾರಾಟ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಸೋಮಣ್ಣ ಅವರ ಬಳಿ ಒಂದು ಲಕ್ಷದ ಐದು ಸಾವಿರ ಈ ಟಗರನ್ನು ಖರೀದಿ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಣ್ಣಪ್ಪ ಅವರು ವಿಶೇಷ ಕಾಳಜಿಯಿಂದ ಈ ಟಗರನ್ನು ಸಾಕಿದ್ದರು. ಹೀಗಾಗಿ ಎರಡು ವರ್ಷಗಳ ಬಳಿಕ ಈಗ ಟಗರು ದುಬಾರಿ ಬೆಲೆಗೆ ಮಾರಾಟವಾಗಿದೆ.
ಇದನ್ನೂ ಓದಿ:ಓರಿಯೊ ಬಿಸ್ಕೆಟ್ ನಲ್ಲಿ ಪಕೋಡಾ ಮಾಡಿದ ವ್ಯಾಪಾರಿ! ವೈರಲ್ ಆಗುತ್ತಿದೆ ವಿಡಿಯೋ
ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಿನ್ನೆಲೆ ಗ್ರಾಮದಲ್ಲಿ ಟಗರಿಗೆ ವಿಶೇಷ ಪೂಜೆ ಮಾಡಿ, ಟಗರು ಸಾಕಿದ್ದ ಸಣ್ಣಪ್ಪ ಹಾಗೂ ಖರೀದಿಸಿದ ಕೃಷ್ಣೇಗೌಡ ಇಬ್ಬರನ್ನು ಕಳಶದೊಂದಿಗೆ ದೇವಿಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಐದಾರು ಗ್ರಾಮಗಳಲ್ಲಿ ಟಮಟೆ, ನಗಾರಿಗಳೊಂದಿಗೆ ವಿಶೇಷ ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ವಿಶೇಷ ಟಗರನ್ನು ನೋಡಲು ಮುಗಿಬಿದ್ದರು.
ಈ ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಂಡು ಬರುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿದೆ. ಅಲ್ಲದೆ ಈ ಕುರಿಯ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ಇರುತ್ತದೆ ಎನ್ನಲಾಗುತ್ತದೆ. ಈ ತಳಿಯ ಕುರಿಗಳು ಇರುವುದು ಕೂಡ ಬೆರಳೆಣಿಕೆಯಷ್ಟು, ಹೀಗಾಗಿ ಸಣ್ಣಪ್ಪ ಈ ಟಗರಿನ ಮೂಲಕ ನೂರಾರು ಬಂಡೂರು ತಳಿಯ ಕುರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.