ಕೈಯ್ಯಲ್ಲಿ ಸ್ನೇಹಿತನ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಭೂಪ
Team Udayavani, Sep 30, 2018, 6:40 AM IST
ಮಳವಳ್ಳಿ: ತಾಯಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಎಂಬ ಕಾರಣಕ್ಕೆ ಸ್ನೇಹಿತನ ತಲೆಯನ್ನು ಕತ್ತರಿಸಿ, ರುಂಡ ಹಿಡಿದು
ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿಕ್ಕಬಾಗಿಲು ಗ್ರಾಮದ ಗಿರೀಶ್ (29) ಕೊಲೆ ಆರೋಪಿ. ಈತ ಮತ್ತು ಪಶುಪತಿ ಇಬ್ಬರೂ ಸ್ನೇಹಿತರಾಗಿದ್ದರು. ಮೂರು ದಿನಗಳ ಹಿಂದೆ ಪಶುಪತಿ ತಾಯಿಗೆ ಗಿರೀಶ್ ಕೆಟ್ಟದಾಗಿ ಸನ್ನೆ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಪಶುಪತಿ ದ್ವೇಷ ಕಾರುತ್ತಿದ್ದ. ಬಳಿಕ, ಗಿರೀಶ, “ನಾನು ನಿನ್ನ ತಾಯಿಯನ್ನು ಬೈದಿಲ್ಲ, ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಕರ್ಪೂರ ಮುಟ್ಟಿ ಪ್ರಮಾಣ ಮಾಡಿ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದ. ಆದರೂ ಪಶುಪತಿಯ ದ್ವೇಷ ಕಡಿಮೆ ಯಾಗಲಿಲ್ಲ. ಗಿರೀಶನನ್ನು ಕೊಲೆ ಮಾಡಲು ಆತ ಹೊಂಚು ಹಾಕಿದ್ದ. ಶುಕ್ರವಾರ ರಾತ್ರಿ ಗಿರೀಶ್‌ನ ಮನೆಗೆ ಬಂದು, ಸಿನಿಮಾ ನೋಡಲು ಹೋಗೋಣ ಬಾ ಎಂದು ಕರೆ ದಿದ್ದ. ಆದರೆ, ಗಿರೀಶ್ ಮಳೆ ಬರುವ ಹಾಗಿದೆ.
ಇವತ್ತು ಹೋಗೋದು ಬೇಡ ಎಂದಿದ್ದ.
24 ಕಿ.ಮೀ. ದೂರ ತಲೆ ಹಿಡಿದು ಓಡಾಡಿದ: ಶನಿವಾರ ಬೆಳಗ್ಗೆ ಮತ್ತೆ ಪಶುಪತಿ ಗಿರೀಶ್‌ನ ಮನೆಗೆ ಬಂದ. ಮನೆಯಲ್ಲಿ ತಿಂಡಿ ತಿನ್ನುತ್ತಿದ್ದ ಗಿರೀಶ ನನ್ನು, “ತುರ್ತು ಕೆಲಸ ಇದೆ ಬಾ’ ಎಂದು ಕರೆದ. ಬಳಿಕ, ಬೈಕ್‌ನಲ್ಲಿ ಗಿರೀಶನನ್ನು ಕೂರಿಸಿಕೊಂಡು ಗ್ರಾಮದ ಹೊರವಲಯದಲ್ಲಿರುವ ಕೊಳತೂರು ಕೆರೆ ಹತ್ತಿರ ಗಿರೀಶನನ್ನು ಕೆಳಗಿಳಿಸಿ, ಏಕಾಏಕಿ ಕೊಡಲಿಯಿಂದ ಹೊಡೆದ. ಕುಸಿದು ಬಿದ್ದ ಗಿರೀಶನ ಕತ್ತನ್ನು ಕತ್ತರಿಸಿ, ನಂತರ ಚಿಕ್ಕಬಾಗಿಲಿನಿಂದ ಹಂಗ್ರಾಪುರ ಗ್ರಾಮದ ಮಾರ್ಗವಾಗಿ ಸುಮಾರು 24 ಕಿ.ಮೀ.ದೂರ ತಲೆಯನ್ನು ಬೈಕ್‌ನಲ್ಲಿ ಇಟ್ಟುಕೊಂಡು ಓಡಾಡಿದ.
ಬಳಿಕ, ಗಿರೀಶನ ರುಂಡವನ್ನು ಕೈಯ್ಯಲ್ಲಿ ಹಿಡಿದುಕೊಂಡು ಪುರ ಪೊಲೀಸ್ ಠಾಣೆಗೆ ಬಂದ. ಪಶುಪತಿ ಯನ್ನು ಕಂಡ ಪೊಲೀಸರು
ಕ್ಷಣಕಾಲ ಆತಂಕಗೊಂಡರು. ತಕ್ಷಣವೇ ಆತನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು. ಸ್ನೇಹಿತನಾಗಿದ್ದುಕೊಂಡು ನನ್ನ ತಾಯಿಯನ್ನೇ ಕೆಟ್ಟ ದೃಷ್ಟಿಯಿಂದ ನೋಡಿದ. ಅದಕ್ಕೇ ಅವನನ್ನು ಕೊಲೆ ಮಾಡಿ ರುಂಡವನ್ನು ಕತ್ತರಿಸಿ ತಂದಿದ್ದೇನೆಂದು ಹೇಳಿಕೆ ನೀಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.