ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ ಸರಿಯಲ್ಲ
Team Udayavani, Jun 25, 2022, 3:33 PM IST
ಪಾಂಡವಪುರ: ಕಾಂಗ್ರೆಸ್‌ನ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಹಣ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ ನಡೆಸುತ್ತಿದೆ. ಈ ವಿಚಾರವನ್ನು ಜನರ ಮನಸ್ಸಿನಿಂದ ದೂರ ವಿಡಲು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.
ಹಣ ವ್ಯವಹರಿಸಿದ ವಿಚಾರಕ್ಕೆ ಇ.ಡಿ. ಸಂಸ್ಥೆ ವಿಚಾರಣೆ ನಡೆಸುವುದೇ ತಪ್ಪು ಎಂಬುದು ಕಾಂಗ್ರೆಸ್ ಪಕ್ಷದ ಅಭಿಪ್ರಾಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.
ಕ್ರಮಕೈಗೊಳ್ಳದೇ ನಿರ್ಲಕ್ಷ್ಯ: ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರು ನಾಡಗೀತೆಯನ್ನು ಬೇರೆ ರೀತಿ ವ್ಯಾಖ್ಯಾನಿಸಿದ ಬರಹವನ್ನು ಫಾರ್ವಡ್ ಮಾಡಿದ್ದು, 2017ರಲ್ಲಿ ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರೂ. ಆಗ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದರು ಎಂದು ಕಿಡಿಕಾರಿದರು.
ಹಿಂದೂ ರಾಜರ ಕಡೆಗಣನೆ: ಮಕ್ಕಳಿಗೆ ಬೋಧಿಸುವ ಸಮಾಜ ವಿಜ್ಞಾನ ಪಠ್ಯ ಪರಿಸರ ಸೌಂದರ್ಯ, ಸಾಂಸ್ಕೃತಿಕ ವ್ಯವಸ್ಥೆ ಬಲ ಪಡಿ ಸುವ ಜತೆಗೆ ದೇಶದ ಘನತೆಯನ್ನು ಹೆಚ್ಚಿಸುವ ವಿಚಾರಗಳನ್ನು ಒಳಗೊಂಡಿರಬೇಕು. ಆದರೆ, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡ ಪಠ್ಯದಲ್ಲಿ ಟಿಪ್ಪು ಸುಲ್ತಾನ್, ಘಜಿನಿ ಮಹಮ್ಮದ್, ಹುಮಾಯೂನ್, ಮೊಗಲರು, ನಿಜಾಮರ ದೊರೆಗಳನ್ನು ವೈಭವೀಕರಿಸಿ, ಹಿಂದೂ ರಾಜರಾದ ಛತ್ರಪತಿ ಶಿವಾಜಿ, ಮಹಾರಾಣ ಪ್ರತಾಪಸಿಂಹ, ವಿಜಯನಗರ ಅರಸುಗಳನ್ನು ಕಡಗಣಿಸಲಾಗಿತ್ತು ಎಂದು ಆರೋಪಿಸಿದರು.
ಹಿಂದೂ ಎಂಬ ಶಬ್ಧವನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದರು. ಮೈಸೂರು ರಾಜಮನೆತನದ ಅಧಿದೇವತೆ ಚಾಮುಂಡೇಶ್ವರಿ, ಒಡೆಯರ್ ಅವರ ವಿಚಾರ ತಿಳಿಸುವ ಪಠ್ಯಗಳನ್ನು ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಪರಿಷ್ಕರಣೆಗೊಂಡ ಪಠ್ಯದಲ್ಲಿ ಕೈಬಿಡಲಾಗಿತ್ತು ಎಂದು ಆರೋಪಿಸಿದರು.
ಹಲವು ಯೋಜನೆ ಜಾರಿ: ರಾಜ್ಯದ ಹಳೇ ಮೈಸೂರು ಪ್ರಾಂತ್ಯ ದಲ್ಲಿ ಬಿಜೆಪಿ ನೆಲೆಗಟ್ಟಿಗೊಳ್ಳಬೇಕು, 2023ಕ್ಕೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಶಸ್ತ್ರೀಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಿಜೆಪಿ ರೈತರ ಪರವಾಗಿದ್ದು, ಯಾರ ಬಳಿಯೂ ಕೈವೊಡ್ಡಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆ, ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಉಚಿತ ಪಡಿತರ ಮುಂದುವರಿದಿದೆ: ಅದೇರೀತಿ ಪ್ರತಿಯೊಬ್ಬರಿಗೂ ಉತ್ಕೃಷ್ಟ ಆರೋಗ್ಯ ಸೇವೆ ಒದಗಿಸಿಲು ಆಯುಷ್ಮಾನ್ ಯೋಜನೆ ರೂಪಿಸಿದರು. ಮೋದಿ ಅವರ ಯೋಜನೆಗಳು ಇಲ್ಲದ ಒಂದೇ ಒಂದು ಮನೆಯನ್ನು ದೇಶದಲ್ಲಿ ಕಾಣಲು ಸಾಧ್ಯ ವಿಲ್ಲ. ಕೊರೊನಾ ಸಂಕಷ್ಟದಲ್ಲಿ ಪ್ರಾರಂಭವಾದ ಉಚಿತ ಪಡಿತರ ಈಗಲೂ ಮುಂದುವರಿದಿದೆ, ಮುಂದೆಯೂ ಇರು ತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ಕೆ.ಎಲ್.ಆನಂದ್, ಮಧು ಗಂಗಾಧರ್, ಗ್ರಾಪಂ ಸದಸ್ಯ ಕಾಂತರಾಜು, ತಾಪಂ ಮಾಜಿ ಸದಸ್ಯೆ ಮಂಗಳಾ, ಕ್ಷೇತ್ರಾ ಧ್ಯಕ್ಷ ಎಲ್.ಅಶೋಕ್, ಕಾರ್ಯದರ್ಶಿ ನೀಲನಹಳ್ಳಿ ಧನಂಜಯ, ರಾಜೀವ್ ತಮ್ಮಣ್ಣ, ಪುರಸಭೆ ಸದಸ್ಯ ಶ್ರೀನಿವಾಸ್ ನಾಯಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.