ದೇಶದ ಜನರ ಆಶೀರ್ವಾದವೇ ನನ್ನ ಅತೀ ದೊಡ್ಡ ರಕ್ಷಣಾ ಕವಚ: ಮಂಡ್ಯದಲ್ಲಿ ಮೋದಿ
ಡಬಲ್ ಇಂಜಿನ್ ನಿಂದ ಡಬಲ್ ಲಾಭ
Team Udayavani, Mar 12, 2023, 2:04 PM IST
ಮಂಡ್ಯ: ಕಾಂಗ್ರೆಸ್ ಮೋದಿಯ ಸಮಾಧಿಯ ಕನಸು ಕಾಣುತ್ತಿದೆ ಆದರೆ ಮೋದಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಮಾಡುವುದರಲ್ಲಿ ತೊಡಗಿದ್ದಾರೆ. ಮೋದಿ ಬಡವರ ಜೀವನ ಸುಧಾರಣೆ ಮಾಡುವುದರಲ್ಲಿ ಬ್ಯಸಿಯಾಗಿದ್ದಾರೆ. ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಈ ದೇಶದ ಕೋಟಿ ಕೋಟಿ ತಾಯಂದಿರು ಸಹೋದರಿಯರ ಜನರ ಆಶೀರ್ವಾದವೇ ಮೋದಿಯ ಅತೀ ದೊಡ್ಡ ರಕ್ಷಣಾ ಕವಚವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಿದರು.
ಕೆಲವ ದಿನಗಳಿಂದ ಎಕ್ಸ್ ಪ್ರೆಸ್ ವೇ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ವೈರಲ್ ಅಗತ್ತಿದೆ. ಇಂತಹ ಸುಂದರ ಆಧುನಿಕ ಎಕ್ಸ್ ಪ್ರೆಸ್ ವೇ ಎಲ್ಲಾ ಕಡೆ ಆಗಬೇಕು ಎನ್ನುವುದು ದೇಶವಾಸಿಗಳ ಇಚ್ಚೆಯಾಗಿದೆ ಎಂದರು.
ಭಾರತದಲ್ಲಿ ಅಭಿವೃದ್ಧಿಯ ದೂರದರ್ಶಿತ್ವದ ಬಗ್ಗೆ ಚರ್ಚೆಯಾದಗೆಲ್ಲಾ ಇಬ್ಬರ ಹೆಸರು ನೆನಪಾಗುತ್ತದೆ. ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ. ಇವರನ್ನು ಈ ಪುಣ್ಯ ಭೂಮಿ ದೇಶಕ್ಕೆ ನೀಡಿದೆ. ಈ ವ್ಯಕ್ತಿಗಳ ಪ್ರೇರಣೆಯಿಂದ ಕೆಲಸವಾಗುತ್ತಿದೆ. ಸಾಗರಮಾಲಾ ಮತ್ತು ಭಾರತ್ ಮಾಲಾ ಯೋಜನೆಯಿಂದ ಕರ್ನಾಟಕ ಬದಲಾಗುತ್ತಿದೆ, ದೇಶ ಬದಲಾಗುತ್ತಿದೆ. ಕೋವಿಡ್ ಸಮಯದಲ್ಲೂ ಮೂಲಭೂತ ಸೌಕರ್ಯಕ್ಕಾಗಿ ನಾವು ಹತ್ತು ಲಕ್ಷ ಕೋಟಿ ರೂ ಕಾದಿರಿಸಿದ್ದೇವೆ ಎಂದರು.
ಬೆಂಗಳೂರು- ಮೈಸೂರು ರಾಜ್ಯದ ಪ್ರಮುಖ ನಗರಗಳು. ಒಂದು ತಂತ್ರಜ್ಞಾನವಾದರೆ ಮತ್ತೊಂದು ಪರಂಪರೆಗೆ ಹೆಸರಾದ ನಗರ. ಎರಡೂ ನಗರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಪರ್ಕಿಸುವುದು ಹಲವು ಕಾರಣದಿಂದ ಮುಖ್ಯವಾಗಿದೆ. ಎಕ್ಸ್ ಪ್ರೆಸ್ ವೇ ಕಾರಣದಿಂದ ಈ ಭಾಗದಲ್ಲಿ ಅಭಿವೃದ್ದಿಯ ವೇಗವೂ ಹೆಚ್ಚಾಗಲಿದೆ. ರಾಮನಗರ, ಮಂಡ್ಯದಲ್ಲೂಐತಿಹಾಸಿಕ ಸ್ಥಳಗಳಿವೆ. ಹೀಗಾಗಿ ಇಲ್ಲಿಯ ಪ್ರವಾಸೋದ್ಯಮ ಹೆಚ್ಚಾಗುತ್ತದೆ. ಅಲ್ಲದೆ ಕಾವೇರಿ ಜನ್ಮಸ್ಥಳ ಕೊಡಗಿಗೂ ಹೋಗುವ ವ್ಯವಸ್ಥೆ ಸುಲಭವಾಗುತ್ತದೆ ಎಂದು ಮೋದಿ ಹೇಳಿದರು.
ಗುಡ್ಡ ಕುಸಿತದ ಕಾರಣದಿಂದ ಬೆಂಗಳೂರು- ಮಂಗಳೂರು ರಸ್ತೆ ಆಗಾಗ ಬಂದ್ ಆಗುತ್ತಿದೆ. ಆದರೆ ಇದೀಗ ಮೈಸೂರು- ಕುಶಾಲನಗರ ರಸ್ತೆಯ ಕಾರಣದಿಂದ ಈ ಸಮಸ್ಯೆಯೂ ಪರಿಹಾರವಾಗುತ್ತದೆ. ಇದರಿಂದ ಇಲ್ಲಿ ಕೈಗಾರಿಕಾ ಅಭಿವೃದ್ದಿಯೂ ಆಗುತ್ತದೆ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, 2014ರ ಮೊದಲ ಕಾಂಗ್ರೆಸ್ ಸರ್ಕಾರವು ಬಡವರ ಅಭಿವೃದ್ದಿಯ ಹಣವನ್ನು ಲೂಟಿ ಮಾಡಿತ್ತು. ಕಾಂಗ್ರೆಸ್ ಗೆ ಬಡವರ ದುಖವು ಯಾವುದೇ ಕಲ್ಪನೆ ಇರಲಿಲ್ಲ. 2014ರಲ್ಲಿ ನೀವು ನನಗೆ ಅವಕಾಶ ನೀಡಿದ ಬಳಿಕ ಬಡವರ ದುಖ ಅರ್ಥವಾಗುವ ಸರ್ಕಾರ ಬಂತು. ಕೇಂದ್ರ ಸರ್ಕಾರವು ಪ್ರಾಮಾಣಿಕತೆಯಿಂದ ಬಡವರ ಏಳಿಗೆಗೆ ಕೆಲಸ ಮಾಡುತ್ತಿದೆ. ಬಡವರ ಬಳಿ ಮನೆ, ಮನೆಯಲ್ಲಿ ನಳದಲ್ಲಿ ನೀರು, ಗ್ಯಾಸ್- ವಿದ್ಯುತ್, ಊರಿಗೆ ಆಸ್ಪತ್ರೆ ಸಿಗುವಂತೆ ಮಾಡಲು ಬಿಜೆಪಿ ಸರ್ಕಾರವು ಮೊದಲ ಆದ್ಯತೆ ನೀಡಿದೆ ಎಂದರು.
ಕಳೆದ 9 ವರ್ಷದಿಂದ ಬಿಜೆಪಿ ಸರ್ಕಾರದ ಯೋಜನೆಗಳಿಂದ ಬಡವರ ಏಳಿಗೆಯಾಗಿದೆ. ಕಾಂಗ್ರಸ್ ಸರ್ಕಾರಲ್ಲಿ ಬಡವರು ಸವಲತ್ತು ಪಡೆಯಲು ಕಷ್ಟಪಡಬೇಕಿತ್ತು. ಆದರೆ ಬಿಜೆಪಿ ಸರ್ಕಾರವು ಬಡವರ ಮನೆ ಬಾಗಲಿಗೆ ಹೋಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಬಲ್ ಲಾಭ: ಭದ್ರಾ ಮೇಲ್ಡಂಡೆಗೆ ಯೋಜನೆಗೆ ನಮ್ಮ ಸರ್ಕಾರವು ಬಜೆಟ್ ನಲ್ಲಿ 5300 ಕೋಟಿ ಕೊಡುವ ಘೋಷಣೆ ಮಾಡಿದೆ. ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಕೃಷಿಕರ ಸಣ್ಣ ಸಣ್ಣ ಸಮಸ್ಯೆಗಳಿಗೂ ನಾವು ಪರಿಹಾರ ನೀಡುತ್ತೇವೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೃಷಿಕರ ಖಾತೆಗೆ ನೇರವಾಗಿ ಹಣ ನೀಡಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೆಚ್ಚುವರಿ ಹಣ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಡಬಲ್ ಇಂಜಿನ್ ನಿಂದ ಡಬಲ್ ಲಾಭ ಸಿಗುತ್ತಿದೆ ಎಂದರು.
ಸಕ್ಕರೆ ನಗರ ಮಂಡ್ಯದ ಕಬ್ಬು ಬೆಳೆಯುವ ರೈತರಿಗೆ ಸಮಸ್ಯೆಗಳಿವೆ. ಕಬ್ಬು ಹೆಚ್ಚಾದರೂ ಸಮಸ್ಯೆ, ಕಡಮೆಯಾದರೂ ಸಮಸ್ಯೆ. ಕಾರ್ಖಾನೆಗಳ ಮೇಲೆ ಅವಲಂಬನೆ ಹೆಚ್ಚಿತ್ತು. ರೈತರ ಸಮಸ್ಯೆಗೆ ಪರಿಹಾರ ನೀಡಲು ಇಥೆನಾಲ್ ಉತ್ಪಾದನೆ ಮೂಲಕ ಉಪಾಯ ಮಾಡಿದೆ. ಇದರಿಂದ ಕಬ್ಬು ಬೆಳೆಗಾರರಿಗೂ ಸಹಾಯವಾಗಿದೆ. ಕೇಂದ್ರ ಬಜೆಟ್ ನಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿ ರ ಕೊಟಿ ಸಹಾಯಧನ, ತೆರಿಗೆ ವಿನಾಯತಿ ಮಾಡಲಾಗಿದೆ ಎಂದರು.
ಬಯೋ ಟೆಕ್ನಾಲಜಿಯಿಂದ ಹಿಡಿದು ರಕ್ಷಣಾ ವಲಯದವರೆಗೆ ಕರ್ನಾಟಕದಲ್ಲಿ ಎಲ್ಲಾ ವಯಲದಲ್ಲಿ ಅಭಿವೃದ್ದಿಯಾಗುತ್ತಿದೆ. ಕರ್ನಾಟಕ್ಕಕೆ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.