Tender Coconut: ಮೊದಲ ಬಾರಿ ರೈತರಿಗೆ ಬಂಪರ್‌ ದರ

ಬೆಳೆಗಾರರಿಂದ 36 ರೂ.ಗೆ ಖರೀದಿ; ಮಂಡ್ಯದಲ್ಲಿ 50 ರೂ., ಬೆಂಗಳೂರಲ್ಲಿ 70 ರೂ.

Team Udayavani, Oct 16, 2024, 7:35 AM IST

Coconut Water: ಮೊದಲ ಬಾರಿ ರೈತರಿಗೆ ಬಂಪರ್‌ ದರ

ಮಂಡ್ಯ: ತೆಂಗು ಬೆಳೆಯಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ ಎಳನೀರು ಪೂರೈಕೆ ಕುಸಿತವಾಗಿದ್ದು ಇದರ ಪರಿಣಾಮ ಬೆಲೆ ಗಗನಕ್ಕೇರಿದೆ. ಜತೆಗೆ ಮೊದಲ ಬಾರಿಗೆ ರೈತರಿಗೆ ಬಂಪರ್‌ ದರ ದೊರೆಯುತ್ತಿದೆ.

ಕಳೆದ ಸಾಲಿನ ಭೀಕರ ಬರ ಹಾಗೂ ಅಧಿಕ ಬಿಸಿಲಿನಿಂದ ಕೂಡಿದ ವಾತಾವರಣದಿಂದಾಗಿ ತೆಂಗಿನ ಬೆಳೆ ಮೇಲೆ ಸಾಕಷ್ಟು ಹಾನಿಯಾಗಿತ್ತು. ನೀರಿನ ಕೊರತೆಯಾಗಿ ಎಳನೀರು ಬೆಳೆ ಸಿಗದಂತಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವೂ ಹೆಚ್ಚಾಗಿದೆ. ಮಂಡ್ಯದಲ್ಲಿ ದಲ್ಲಾಳಿಗಳು ರೈತರಿಂದ 36 ರೂ.ಗೆ ಎಳನೀರು ಖರೀದಿಸುತ್ತಿದ್ದಾರೆ. ಈ ಹಿಂದೆ ಬೆಳೆಗಾರರಿಂದ ದಲ್ಲಾಳಿಗಳು ಖರೀದಿಸುತ್ತಿದ್ದ ದರ 20 ರೂ. ಆಸುಪಾಸಿನಲ್ಲೇ ಇತ್ತು. ಇದೇ ಮೊದಲ ಬಾರಿ 33, 35 ಮತ್ತು 36 ರೂ. ಕೊಟ್ಟು ರೈತರಿಂದ ಖರೀದಿಸಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ದಾಖಲೆಯಾಗಿದೆ.

ಮಂಡ್ಯದಲ್ಲಿ ಸೋಮವಾರ ಒಂದು ಎಳನೀರಿಗೆ 43 ರೂ. ಇತ್ತು. ಉತ್ತಮ ಗುಣಮಟ್ಟದ ಎಳನೀರು 50 ರೂ. ಇದ್ದರೆ ಸ್ವಲ್ಪ ಸಣ್ಣ ಗಾತ್ರದ್ದಕ್ಕೆ 35 ರೂ. ಇದೆ. ಚುಕ್ಕೆ ಇರುವ ಎಳನೀರು 15ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ಎಳನೀರಿಗೆ 70 ರೂ. ಇದ್ದರೆ ಹೊರ ರಾಜ್ಯಗಳಿಗೆ ಸರಬರಾಜಾಗುವ ಎಳನೀರು 100 ರೂ. ಗಡಿ ದಾಟಿದೆ.

ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಮದ್ದೂರು ಎಳನೀರು ಮಾರುಕಟ್ಟೆಯಲ್ಲೂ ಎಳನೀರು ಪೂರೈಕೆ ಇಳಿಕೆಯಾಗಿದೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿರುವು ದರಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಇರುವ ಎಳನೀರು ಕೊçಲು ಮಾಡಿ ಪೂರೈಸಲಾಗಿದೆ. ಆದರೂ ಬೇಡಿಕೆ ನಿಂತಿಲ್ಲ.

ಹೊರ ರಾಜ್ಯಗಳಿಗೆ ಸರಬರಾಜು
ಜಿಲ್ಲೆಯ ಮದ್ದೂರು ಹಾಗೂ ಕೆ.ಆರ್‌. ಪೇಟೆ ಎಳನೀರು ಮಾರುಕಟ್ಟೆಯಿಂದ ದೇಶದ ದಿಲ್ಲಿ, ಪಂಜಾಬ್‌, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಡಿಕೆಗೆ
ತಕ್ಕಂತೆ ಎಳನೀರು ಸಿಗುತ್ತಿಲ್ಲ. ಮಳೆಗಾಲವಿದ್ದರೂ ಎಳನೀರಿಗೆ ಬೇಡಿಕೆ ಕಡಿಮೆಯಾಗಿಲ್ಲ.

ದಲ್ಲಾಳಿಗಳು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎಳನೀರು ತಂದು ಹೊರ ರಾಜ್ಯಗಳಿಗೆ ಪೂರೈಸುತ್ತಿದ್ದಾರೆ ಎಂದು ವರ್ತಕರೊಬ್ಬರು ತಿಳಿಸಿದರು.

ಡಿಸೆಂಬರ್‌ಗೆ ದರ ಇಳಿಕೆ?
ಕಳೆದ ಸಾಲಿನಲ್ಲಿ ಮಳೆ ಬಾರದೆ ಜಿಲ್ಲೆಯು ಭೀಕರ ಬರಗಾಲಕ್ಕೆ ತುತ್ತಾಗಿತ್ತು. ನೀರಿನ ಕೊರತೆ ಉಂಟಾಗಿ ಸಾಕಷ್ಟು ಬೆಳೆ ಒಣಗಿ ನಷ್ಟ ಎದುರಾಗಿತ್ತು. ಆಗ ಮಳೆ ಬಿದ್ದಿದ್ದರೆ ತೆಂಗಿನ ಮರಗಳೆಲ್ಲವೂ ಉತ್ತಮ ಫಲ ನೀಡುತ್ತಿದ್ದವು. ಆದರೆ ಈಗ ಮಳೆ ಬೀಳುತ್ತಿದ್ದರೂ ತೆಂಗಿನ ಫಸಲು ಉತ್ತಮವಾಗಿಲ್ಲ. ಮುಂದಿನ ಡಿಸೆಂಬರ್‌ ವೇಳೆ ಯಥೇತ್ಛವಾಗಿ ಎಳನೀರು ಸಿಗಲಿದ್ದು ಆಗ ದರ ಕಡಿಮೆಯಾಗಲಿದೆ ಎಂದು ರೈತರೊಬ್ಬರು ತಿಳಿಸಿದರು.

-ಎಚ್‌. ಶಿವರಾಜು

ಟಾಪ್ ನ್ಯೂಸ್

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

BYV-Modi

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

BYV-Modi

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

BYV-Modi

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್‌ ಭೇಟಿ: 21ರಿಂದ ಮೋದಿ ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.