ಸರ್ಕಾರಿ ನೌಕರರಿಗೂ ಕ್ಯಾಂಟೀನ್‌

Team Udayavani, Jan 27, 2020, 4:36 PM IST

mandya-tdy-1

ಮಂಡ್ಯ: ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ಪೂರೈಸಲು ಕ್ಯಾಂಟೀನ್‌ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಹಾಗೂ ಇತರೆ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದದರು.

ನೌಕರರ ಹಿತ ಕಾಪಾಡುವುದೇ ಗುರಿ: ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಕ್ಯಾಂಟೀನ್‌ ಪ್ರಾರಂಭಿಸಿರುವಂತೆ ಮುಂದಿನ ದಿನಗಳಲ್ಲಿ ಮಂಡ್ಯದಲ್ಲೂ ಕ್ಯಾಂಟೀನ್‌ ಆರಂಭಿಸಲಾಗುವುದು. ರಾಜ್ಯ ಸರ್ಕಾರಿ ನೌಕರರ ಸಂಘಟನೆ ನೌಕರರ ಅಖಂಡ ಏಕ ಸಂಘಟನೆಯಾಗಿದೆ. ಎಲ್ಲ ನೌಕರರ ಹಿತ ಕಾಪಾಡುವುದೇ ಸಂಘಟನೆಯ ಉದ್ದೇಶ ಮತ್ತು ಗುರಿಯಾಗಿದೆ. ನಾನು ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಅಧಿಕಾರ ಸಿಕ್ಕ ಸಂದರ್ಭದಲ್ಲಿ ನೌಕರರ ಧ್ವನಿಯಾಗಿ ಬೆಳಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಮೇಲೆ ದೂರು ಬಂದರೆ ಮೂಕ ಅರ್ಜಿಗಳ ತನಿಖೆ ಮಾಡುವ ಆದೇಶ ಮುನ್ನ ವಿಲೇ ಮಾಡುವ ಆದೇಶವನ್ನು ಹೊರಡಿಸಲಾಗಿದೆ. ಸರ್ಕಾರಿ ನೌಕರರು ಮೃತರಾದರೆ ಅವರ ಶವ ಸಂಸ್ಕಾರದ ವೆಚ್ಚವನ್ನು 15 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದ್ದು, ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದರು.

ವೇತನ ತಾರತಮ್ಯದ ವಿರುದ್ಧ ಹೋರಾಟ: ಮಾನಸಿಕ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿರುವ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಗೆ ಆತ್ಮಸೈರ್ಯ ತುಂಬಬೇಕು. ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ಕೊಡಬೇಕು ಎಂದು ಹೋರಾಟ ರೂಪಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಶಂಭುಗೌಡ, ರಾಜ್ಯ ಗೌರವಾಧ್ಯಕ್ಷ ಶಿವರುದ್ರಪ್ಪ, ರಾಜ್ಯ ಉಪಾಧ್ಯಕ್ಷರಾದ ರುದ್ರಪ್ಪ, ಮಹಾಲಿಂಗು, ಶ್ರೀಧರ್‌, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಟಿ.ಕೃಷ್ಣಯ್ಯ ದೇವರಾಜು, ಕೃಷ್ಣ, ಮೊದಲಾದವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರನ್ನು ಸನ್ಮಾನಿಸಿದರು.

ಟಾಪ್ ನ್ಯೂಸ್

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ

Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kuchuku Movie: ಟೀಸರ್‌ನಲ್ಲಿ ಕುಚುಕು

Kuchuku Movie: ಟೀಸರ್‌ನಲ್ಲಿ ಕುಚುಕು

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

10(1

Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.