Cauvery Fight: ಕಮರಿದ ಕಾವೇರಿ ಹೋರಾಟದ ಕಿಚ್ಚು
Team Udayavani, Aug 28, 2023, 4:22 PM IST
ಮಂಡ್ಯ: ಮಳೆ ಕೊರತೆ ಎದುರಾದಾಗ ರಾಜ್ಯ ಸರ್ಕಾರಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಜಿಲ್ಲೆಯಲ್ಲಿ ಹೋರಾಟದ ಕಿಚ್ಚೇ ಹಬ್ಬಿಸುತ್ತಿತ್ತು. ಆದರೆ ಇದೀಗ ಆ ಹೋರಾಟದ ಕಿಚ್ಚು ಕಂಡು ಬರುತ್ತಿಲ್ಲ. ಮಾಜಿ ಸಂಸದ ಜಿ.ಮಾದೇಗೌಡ ನಂತರ ನಾಯಕತ್ವದ ಕೊರತೆ ಕಾಡುತ್ತಿದೆ.
ಕಾವೇರಿ ನೀರಿಗಾಗಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಹೋರಾಟ ಬೆಂಕಿಯನ್ನೇ ಹಬ್ಬಿಸುತ್ತಿತ್ತು. ಮಾಜಿ ಸಂಸದ ಜಿ.ಮಾದೇಗೌಡ ಅವರ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳು ಹೋರಾಟಕ್ಕಿಳಿಯುತ್ತಿದ್ದವು. ಇದರಿಂದ ಇಡೀ ಸರ್ಕಾರವೇ ಬೀಳಿಸುವ ಮಟ್ಟಕ್ಕೆ ಹೋರಾಟದ ಕಾವು ಪಡೆಯುತ್ತಿತ್ತು.
ನಾಯಕತ್ವದ ಕೊರತೆ: ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿತ್ತು. ಇಡೀ ಮಂಡ್ಯ ನಗರವೇ ಬಂದ್ ಆಗುತ್ತಿತ್ತು. ಅಂಥದ್ದೊಂದು ನಾಯಕನ ಕೂಗು ಕೇಳಿ ಬರುತ್ತಿತ್ತು. ಮಾದೇಗೌಡ ಎಂಬ ಗಟ್ಟಿಧ್ವನಿ ಯಾರೇ ಮುಖ್ಯಮಂತ್ರಿಯಾಗಿದ್ದರೂ ಮೊಬೈಲ್ ಮೂಲಕವೇ ನೀರು ನಿಲ್ಲಿಸಿ ಎಂದು ಗುಟುರು ಹಾಕುವ ಮೂಲಕ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಆದರೆ ಪ್ರಸ್ತುತ ನಾಯಕತ್ವದ ಕೊರತೆ ಕಾಡುತ್ತಿದೆ. ಮಾಜಿ ಸಂಸದ ಜಿ.ಮಾದೇಗೌಡ ನಿಧನದ ನಂತರ ಕಾವೇರಿ ಚಳವಳಿಯೇ ಇಲ್ಲದಂ ತಾಗಿದೆ. ಮಾದೇಗೌಡರು ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಕುಳಿತುಕೊಂಡರೆ ವಿವಿಧ ರೈತ ಸಂಘಟನೆಗಳು, ಕನ್ನಡಪರ, ಪ್ರಗತಿಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅವರ ಬೆನ್ನಿಗೆ ನಿಂತಿರುತ್ತಿದ್ದವು.
ನಿರ್ಜೀವವಾಗಿರುವ ಹಿತರಕ್ಷಣಾ ಸಮಿತಿ: ಕಾವೇರಿ ನೀರಿಗಾಗಿ ಹಾಗೂ ರೈತರ ಸಮಸ್ಯೆಗಳಿಗಾಗಿ ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದೇ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ.
ಆದರೆ ಇದೀಗ ಹಿತಾಸಕ್ತಿ ಕಳೆದುಕೊಂಡಿದೆ. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಬೀದಿಗಿಳಿಯುತ್ತಿತ್ತು. ಇದಕ್ಕೆ ಎಲ್ಲ ಸಂಘಟನೆಗಳು ಸಹಕಾರ ನೀಡುತ್ತಿದ್ದವು. ಜಿ.ಮಾದೇಗೌಡರ ನಿಧನದ ನಂತರ ಸಮಿತಿಯು ನಿರ್ಜೀವ ಸ್ಥಿತಿಯಲ್ಲಿದೆ. ಹೋರಾಟ ಮುನ್ನಡೆಸುವ ನಾಯಕತ್ವವೂ ಇಲ್ಲದಂತಾಗಿದೆ.
ಸಮಿತಿ ಪುನರ್ ರಚನೆಗಿಲ್ಲ ಆಸಕ್ತಿ: ಮಾದೇಗೌಡರ ನಿಧನದ ನಂತರ ಇದ್ದೂ ಸತ್ತಂತಿರುವ ಸಮಿತಿಯನ್ನು ಪುನರ್ ರಚನೆ ಮಾಡುವ ಆಸಕ್ತಿ ಯಾರಿಗೂ ಇಲ್ಲದಂತಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಪಕ್ಷಾತೀತ ವಾಗಿ ಕೂಡಿತ್ತು. ಸಮಿತಿಯಲ್ಲಿ ಎಲ್ಲ ಪಕ್ಷದ ನಾಯಕರು ಇದ್ದರು. ಸಮಿತಿಯಲ್ಲಿ ಪದಾ ಕಾರಿಗಳಾಗಿದ್ದ ರಾಜಕೀಯ ಮುತ್ಸದ್ಧಿಗಳಾದ ಜಿ.ಮಾದೇಗೌಡ, ಡಾ.ಎಚ್.ಡಿ. ಚೌಡಯ್ಯ ಸೇರಿದಂತೆ ಅನೇಕ ಹಿರಿಯರು ಪದಾಧಿಕಾರಿಗಳು ಮರಣ ಹೊಂದಿದ್ದಾರೆ. ಆದರೆ ಇದುವರೆಗೂ ಸಮಿತಿ ಪುನರ್ ರಚಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ. ಆಸಕ್ತಿಯನ್ನೂ ತೋರಿಸುತ್ತಿಲ್ಲ.
ಛಿದ್ರಗೊಂಡ ಹೋರಾಟ:
ಜಿಲ್ಲೆಯಲ್ಲಿ ಕಾವೇರಿ ಚಳವಳಿಯು ಛಿದ್ರಗೊಂಡಿದೆ. ಜಿ.ಮಾದೇಗೌಡರು ಇರುವ ವರೆಗೂ ಎಲ್ಲ ಸಂಘಟನೆಗಳು ಒಗ್ಗಟ್ಟಿಲ್ಲದಿದ್ದರೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದವು. ಆದರೆ ಪ್ರಸ್ತುತ ಎಲ್ಲ ಹೋರಾಟಗಳ ಸಂಘಟಕರು ಛಿದ್ರಗೊಂಡಿದ್ದಾರೆ. ಇದರಿಂದ ಸಂಘಗಳು ಛಿದ್ರಗೊಂಡಿವೆ. ರೈತಸಂಘವು ಮೂರು ಬಣಗಳಾಗಿದ್ದು, ಪ್ರತ್ಯೇಕ ಹೋರಾಟ ಮಾಡುತ್ತಿವೆ. ಮೂಲ ಸಂಘಟನೆ, ರೈತಬಣ ಹಾಗೂ ರೈತಸಂಘ ಎಂಬ ಮೂರು ಬಣಗಳಾಗಿ ಛಿದ್ರಗೊಂಡಿವೆ. ಇದರಿಂದ ಒಗ್ಗಟ್ಟು ಹಾಗೂ ಸಂಘಟನೆ ಇಲ್ಲದಂತಾಗಿದೆ. ಪ್ರತ್ಯೇಕವಾಗಿ ಪ್ರತಿಭಟನೆ ನಡೆಯುತ್ತಿರು ವುದರಿಂದ ಸರ್ಕಾರಕ್ಕೆ ಯಾವುದೇ ಬಿಸಿ ಮುಟ್ಟುತ್ತಿಲ್ಲ. ಇದರಿಂದ ಸರ್ಕಾರವೂ ನಿರ್ಲಕ್ಷ್ಯ ವಹಿಸಿದ್ದು, ನೀರನ್ನು ತಮಿಳುನಾಡಿಗೆ ಸಲೀಸಾಗಿ ಹರಿಸುತ್ತಿದೆ.
ಜೆಡಿಎಸ್ ಕೂಡ ಮೌನ:
ಜಿಲ್ಲೆಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಪûಾತೀತವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಇದೀಗ ಆ ಇತಿಹಾಸ ಕಾಣದಂತಾಗಿದೆ. ಇತ್ತೀಚೆಗೆ ಬಿಜೆಪಿಯು ಸಹ ಕಾಟಾಚಾರಕ್ಕೆ ಎಂಬಂತೆ ಪ್ರತಿಭಟನೆ ನಡೆಸಿ ಮೌನವಾಯಿತು. ಇತ್ತ ವಿರೋಧ ಪಕ್ಷವಾಗಿರುವ ಜೆಡಿಎಸ್ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್ ನಾಯಕರು ಮೌನ ವಹಿಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ಸೊಲ್ಲೆತ್ತುತ್ತಿಲ್ಲ. ರಾಜಕೀಯ ಹಿತಾಸಕ್ತಿಗೆ ತೋರುವ ಮನಸ್ಸು ಕಾವೇರಿ ವಿಚಾರದಲ್ಲಿ ತೋರಿಸುತ್ತಿಲ್ಲ. ಸೋಲಿನ ಹತಾಶೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಗಳು ಜಿಲ್ಲೆಯ ಜನರನ್ನು ಕಾಡುತ್ತಿದೆ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.