Cauvery: ತಮಿಳುನಾಡಿಗೆ ಕಾವೇರಿ: 102 ಅಡಿಗೆ ಕುಸಿತ
Team Udayavani, Aug 26, 2023, 3:33 PM IST
ಮಂಡ್ಯ: ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕೃಷ್ಣರಾಜಸಾಗರ ಜಲಾಶಯದಿಂದ ನಿರಂತರವಾಗಿ ಕಾವೇರಿ ನದಿಗೆ ನೀರು ಹರಿಸಿದ ಪರಿಣಾಮ 113 ಅಡಿಯಿಂದ 102 ಅಡಿಗೆ ಕುಸಿತವಾಗಿದ್ದು, ಇದುವರೆಗೂ ಒಟ್ಟು 11 ಅಡಿ ಕುಸಿತ ಕಂಡಿದೆ.
ಜುಲೈ ಕೊನೇ ವಾರಕ್ಕೂ ಮುಂಚೆ 77 ಅಡಿಗೆ ಕುಸಿದಿತ್ತು. ನಂತರ ಜುಲೈ ಕೊನೇ ವಾರದಲ್ಲಿ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟ ಏರಿಕೆ ಕಂಡಿತು. ಕೇವಲ 10 ದಿನದಲ್ಲಿ 10 ಅಡಿಗೂ ಹೆಚ್ಚು ನೀರು ಹರಿದು ಬಂದಿತ್ತು. ನಂತರ ಸುರಿದ ಭಾರಿ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ಜು.31ರಂದು ಜಲಾಶ ಯದಲ್ಲಿ 113.04 ಅಡಿಗೆ ನೀರು ಬಂದಿತ್ತು. ಆಗ ಒಳ ಹರಿವು 8,768 ಕ್ಯೂಸೆಕ್ ಇದ್ದರೆ, ಹೊರ ಹರಿವು 3,177 ಕ್ಯೂಸೆಕ್ ಇತ್ತು.
ತಮಿಳುನಾಡಿಗೆ ನೀರು: ಕಾವೇರಿ ನೀರು ಹರಿಸುವಂತೆ ತ.ನಾಡು ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾ ಕಾರದ ಮುಂ ದೆ ಅರ್ಜಿ ಸಲ್ಲಿಸಿದ್ದರಿಂದ ಪ್ರಾ ಧಿಕಾರ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಅದಕ್ಕೆ ಒಪ್ಪದ ರಾಜ್ಯ ಸರ್ಕಾರ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ತಮಿ ಳು ನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇ ರಿತು. ಇದರ ತೀರ್ಪು ವ್ಯತಿರಿಕ್ತ ವಾಗು ವುದನ್ನು ಅರಿತ ರಾಜ್ಯ ಸರ್ಕಾರ ಪ್ರಾ ಕಾರ ಹೇಳಿದಂತೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾರಂಭಿಸಿತು.
11 ಅಡಿ ನೀರು ತಮಿಳುನಾಡಿಗೆ: ಜು.31ರಂದು 113.04 ಅಡಿ ನೀರಿದ್ದ ಜಲಾಶಯದಲ್ಲಿ ತಮಿಳುನಾಡಿಗೆ 1,467 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಪ್ರಾ ಧಿಕಾರ ಸೂಚನೆ ನೀಡಿದ ಬಳಿಕ ಹೊರಹರಿವನ್ನು ಹೆಚ್ಚಿಸಲಾಗಿತ್ತು. ಆ.3ರಂದು ಜಲಾಶಯದ ನೀರಿನ ಮಟ್ಟ 113.48 ಅಡಿಗೆ ತಲುಪಿತ್ತು. ಅಂದೇ ಸಂಜೆ ವೇಳೆಗೆ ನದಿಗೆ 3,234 ಕ್ಯೂಸೆಕ್‌ಗೆ ಏರಿಸಲಾಗಿತ್ತು. ಅಂದಿನಿಂದ ನಿರಂತರ ವಾಗಿ 22 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇದುವರೆಗೂ 11 ಅಡಿ ನೀರು ತಮಿಳು ನಾಡಿಗೆ ಹರಿದು ಹೋಗಿದೆ. ಒಟ್ಟು 10 ಟಿಎಂಸಿ ನೀರು ತಮಿಳುನಾಡು ಪಾಲಾಗಿದೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಗುರುವಾರ ಸಂಜೆ ಸ್ವಲ್ಪ ಇಳಿಕೆ ಮಾಡಿದ್ದು, 3,130 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.
ಒಳಹರಿವು ಕುಸಿತ: ಜುಲೈ ಕೊನೇ ವಾರದಲ್ಲಿ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಬರುತ್ತಿದ್ದ ಜಲಾಶಯದಲ್ಲೀಗ 3276 ಕ್ಯೂಸೆಕ್‌ಗೆ ಒಳಹರಿವು ಕುಂಠಿತಗೊಂಡಿದೆ. ಇದರಿಂದ ಮುಂದೆ ಜಲಾಶಯ ತುಂಬಲಿದೆಯೋ ಎಂಬ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಅಕ್ಟೋಬರ್‌ಗೆ ತುಂಬುವ ನಿರೀಕ್ಷೆ?:
ಆಗಸ್ಟ್ ತಿಂಗಳಿಗೆ 113 ಅಡಿ ತಲುಪಿರುವ ಜಲಾಶಯವು ಮತ್ತೆ ಏರಿಕೆ ಕಾಣಲೇ ಇಲ್ಲ. ಅಲ್ಲದೆ, ಮಳೆಯೂ ಕ್ಷೀಣಿಸಿರುವುದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂದೆ ಜಲಾಶಯ ತುಂಬುವ ನಿರೀಕ್ಷೆಯೂ ಇಲ್ಲದಂತಾಗಿದೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆಗಳು ಇವೆ. 2012ರಲ್ಲಿ ಸೆ.15ರಂದು 110.42 ಅಡಿ ತುಂಬಿದ್ದು ಬಿಟ್ಟರೆ ಅಕ್ಟೋಬರ್‌ನಲ್ಲಿ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಕಳೆದ 2021ರಲ್ಲಿ ಅ.28ರಂದು 124.80 ಅಡಿ ತಲುಪಿತ್ತು. ಅದರಂತೆ 2010ರಲ್ಲಿ ಅ.18ರಂದು 124.10 ಅಡಿ ತಲುಪಿತ್ತು. 2017ರಲ್ಲಿ ಅ.23ರಂದು 114.32 ಅಡಿ ಮಾತ್ರ ತುಂಬಿತ್ತು. ಆದ್ದರಿಂದ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಭರ್ತಿಯಾಗುವ ನಿರೀಕ್ಷೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಮಳೆ ಬಾರದಿದ್ದರೆ ಕುಡಿವ ನೀರಿಗೂ ತೊಂದರೆ:
ಮುಂದಿನ ಸೆಪ್ಟಂಬರ್ ಹಾಗೂ ಅಕ್ಟೋಬರ್‌ನಲ್ಲಿ ವರುಣ ಕೃಪೆ ತೋರದಿದ್ದರೆ ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಜಲಾಶಯ 102 ಅಡಿಗೆ ಇಳಿದಿದೆ. ಮುಂದೆ ಇದೇ ರೀತಿ ತಮಿಳುನಾಡಿಗೆ ನೀರು ಹರಿಸಿದರೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳಿಗೂ ಕುಡಿಯುವ ನೀರಿನ ಕೊರತೆ ಕಾಡಲಿದೆ.
ನಿಲ್ಲದ ವಿವಿಧ ರೈತ ಸಂಘಟನೆಗಳ ಹೋರಾಟ:
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲೆಯ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹೆದ್ದಾರಿ ತಡೆ ಸೇರಿದಂತೆ ನಗರದಲ್ಲಿ ಸರಣಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ರೈತರು, ಮುಖಂಡರು, ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಮಾತ್ರ ನಿಲ್ಲಿಸಿಲ್ಲ.
ಬರದ ಕರಿಛಾಯೆ:
ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ಬಿತ್ತನೆಯೂ ಕುಂಠಿತವಾಗಿರುವುದರಿಂದ ಬರದ ಕರಿಛಾಯೆಆವರಿಸುವಂತಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಇಷ್ಟೊತ್ತಿಗಾಗಲೇ ಶೇಕಡವಾರು ಬಿತ್ತನೆ ಪ್ರಮಾಣ ಹೆಚ್ಚಾಗಬೇಕಾಗಿತ್ತು. ಮಳೆ ಕೊರತೆಯಾಗಿರುವುದರಿಂದ ಜಿಲ್ಲೆಯಲ್ಲಿ ಬರ ಆವರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾದ್ಯಂತ ಬಿತ್ತನೆ ಕುಂಠಿತ:
ಈಗಾಗಲೇ ಜಿಲ್ಲಾದ್ಯಂತ ಸಮರ್ಪಕವಾಗಿ ಮಳೆಯೂ ಸುರಿದಿಲ್ಲ. ಇತ್ತ ಜಲಾಶಯದಿಂದ ನಿರಂತರವಾಗಿ ನಾಲೆಗಳಿಗೂ ನೀರು ಹರಿಸುತ್ತಿಲ್ಲ. ಕಟ್ಟುಪದ್ಧತಿಯಲ್ಲಿ ನೀರು ಬಿಡುತ್ತಿದ್ದರೂ ಕೇವಲ ಖುಷ್ಕಿ ಬೆಳೆ ಬೆಳೆಯುವಂತೆ ಸೂಚಿಸಲಾಗಿದೆ. ಇದರಿಂದ ಜಿಲ್ಲಾದ್ಯಂತ ರೈತರಿಗೆ ಸಂಕಷ್ಟ ಎದುರಾಗಿದೆ. ಕೇವಲ ಕೊಳವೆ ಬಾವಿ ಇರುವ ರೈತರು ಮಾತ್ರ ಭತ್ತ, ಕಬ್ಬು ಬಿತ್ತನೆಗೆ ಮುಂದಾಗಿದ್ದಾರೆ.
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: 10 ಲಕ್ಷ ರೂ. ವಂಚಿಸಿದ ಪೋಸ್ಟ್ ಮಾಸ್ಟರ್ ಪುತ್ರ!
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.