ಸಸಿ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಳ್ಳಿ
ಪರಿಸರ ಸಮತೋಲನ ಕಾಯ್ದುಕೊಂಡು ಭೂಮಿ ಆರೋಗ್ಯ ಕಾಪಾಡಿ
Team Udayavani, May 4, 2019, 12:16 PM IST
ಕೆ.ಆರ್.ಪೇಟೆ ಕಾಲೇಜು ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಮುತ್ತಪ್ಪ ರೈ ಹುಟ್ಟು ಹಬ್ಬ ಸಸಿ ನೆಟ್ಟು ಆಚರಿಸಿದರು. ಸಂಘದ ಅಧ್ಯಕ್ಷ ಕುಮಾರ್, ಕಾರ್ಯಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಸೋಮು ಇತರರಿದ್ದರು.
ಕೆ.ಆರ್.ಪೇಟೆ: ನಾಡು, ನುಡಿ, ನೆಲ, ಜಲ ಉಳಿವಿಗೆ ಜಯ ಕರ್ನಾಟಕ ಸಂಘಟನೆ ನಾಡಿನಾದ್ಯಂತ ಹೋರಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಕುಮಾರ್ ಹೇಳಿದರು.
ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಸಂಘಟನೆ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಆಚರಿಸಿ ಮಾತನಾಡಿದ ಅವರು, ಸಂಘಟನೆ ನಿರಂತರ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಮಹೇಶ್ ಮಾತನಾಡಿ, ಪರಿಸರ ಸಮತೋಲನ ಕಾಯ್ದುಕೊಂಡು ಭೂಮಿ ಆರೋಗ್ಯ ಕಾಪಾಡಬೇಕಿದೆ. ಪರಿಸರದ ಉಳಿವಿಗಾಗಿ ಅರಣ್ಯ ಸಂರಕ್ಷಣೆ ಮಾvಬೇಕು. ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಲ್ಲಿಸಬೇಕು. ಭೂಮಿಯ ಆರೋಗ್ಯ ಚನ್ನಾಗಿದ್ದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಅರಣ್ಯ ಉಳಿಸದಿದ್ದರೆ ಭವಿಷ್ಯದ ದಿನಗಳಲ್ಲಿ ಮನುಷ್ಯ ಸೇರಿ ದಂತೆ ಸಕಲ ಜೀವರಾಶಿಗಳು ನೀರು ಮತ್ತು ಆಹಾರಕ್ಕೆ ಪರಿತಪಿಸಬೇಕಾದ ದುಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು ಎಂದು ಮನವಿ ಮಾಡಿದರು. ಸಂಘ ಟ ನೆಯ ಉಪಾಧ್ಯಕ್ಷ ಅಜಯ್, ಸಂಘ ಟನಾ ಕಾರ್ಯದರ್ಶಿ ಸೋಮು, ಮಾಧ್ಯಮ ಕಾರ್ಯದರ್ಶಿ ಲೋಕೇಶ್, ಆಟೋ ಚಾಲಕರ ಘಟಕದ ಅಧ್ಯಕ್ಷ ಆಟೋ ಸೋಮು, ಮಹಿಳಾ ಘಟಕದ ಕಾರ್ಯಧ್ಯಕ್ಷೆ ಸರಸ್ವತಿ, ಗೌರವಾಧ್ಯಕ್ಷ ಜಯಲಕ್ಷ್ಮೀ, ಉಪಾಧ್ಯಕ್ಷ ಅರೆಬೊಪ್ಪನಹಳ್ಳಿ ಜಯ, ರಾಜಮ್ಮ, ಕಾರ್ ಚಂದ್ರಣ್ಣ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.