ಜಿಲ್ಲೆಯಲ್ಲಿ ಹೆಚ್ಚಿದ ಸರಗಳ್ಳತನ ಪ್ರಕರಣ
Team Udayavani, Mar 13, 2021, 1:02 PM IST
ನಗರದಲ್ಲಿ ಸಂಚಾರ ಠಾಣೆ ಪೊಲೀಸರು ಬೈಕ್‌ಗಳನ್ನು ತಡೆದು ತಪಾಸಣೆ ನಡೆಸ್ತುರುವುದು.
ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸರಗಳ್ಳತನ ಪ್ರಕರಣ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಪ್ರದೇಶಗಳಲ್ಲಿ ಹೆಚ್ಚಾಗಿದ್ದ ಸರಗಳ್ಳತನ ಪ್ರಕರಣ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆಇಟ್ಟಿದ್ದು ಒಂಟಿ ಮಹಿಳೆಯರು, ದಂಪತಿಗಳನ್ನೇಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.
11 ಪ್ರಕರಣ ದಾಖಲು: ಜಿಲ್ಲಾದ್ಯಂತ ಕಳೆದ 1ವಾರ ದಿಂದ ಸುಮಾರು 11 ಪ್ರಕರಣ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಪ್ರಕರಣ ನಡೆದಿವೆ. ಮಂಡ್ಯ, ಕೆ.ಆರ್.ಪೇಟೆ, ಭಾರತೀನಗರ, ನಾಗಮಂಗಲ, ಮಳವಳ್ಳಿ,ಪಾಂಡವಪುರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.
ಮಳವಳ್ಳಿಯಲ್ಲಿಯೇ ಅತಿ ಹೆಚ್ಚು: ಕಳೆದ ವಾರದಿಂದ ಮಳವಳ್ಳಿಯಲ್ಲಿ ಸುಮಾರು 5 ಪ್ರಕರಣದಾಖಲಾಗಿವೆ. ಮಳವಳ್ಳಿ ಪಟ್ಟಣ, ಹಲಗೂರು, ಬೆಳಕವಾಡಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕಳೆದ 2ದಿನಗಳ ಹಿಂದೆ ದಂಪತಿ ಬೈಕ್ ತಡೆದಸರಗಳ್ಳರು, ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರಕಿತ್ತು ಪರಾರಿಯಾಗಿದ್ದರು. ಆರೋಪಿಗಳ ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿಸೆರೆಯಾಗಿದ್ದು ಮಳವಳ್ಳಿಯ ಕಲ್ಯಾಣಮಂಟಪದಲ್ಲಿಯೇ ಜನರಿದ್ದರೂ ಮಹಿಳೆಯರ ಸರ ಕಸಿದು ಕಳ್ಳರು ಬೈಕ್ ಏರಿ ಪರಾರಿಯಾಗಿದ್ದರು.
ಒಂಟಿ ಮಹಿಳೆ, ವೃದ್ಧೆಯರೇ ಟಾರ್ಗೆಟ್ :ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವ ಒಂಟಿಮಹಿಳೆಯರು ಹಾಗೂ ವೃದ್ಧೆಯರನ್ನು ಹೆಚ್ಚಾಗಿಟಾರ್ಗೆಟ್ ಮಾಡಲಾಗುತ್ತಿದೆ. ಮಂಡ್ಯ ನಗರದ ವಿಜಯಲಕ್ಷ್ಮೀ ಸಮುದಾಯ ಭವನದ ಪಕ್ಕದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಸರ ಕಿತ್ತುಕೊಂಡು ಪರಾರಿಯಾಗಿದ್ದರು. ಅದರಂತೆಕೆರಗೋಡು ಗ್ರಾಮದಲ್ಲಿ ಹಾಗೂ ಸಾತನೂರಿನ ಬಳಿ ದೇವಾಲಯಕ್ಕೆ ಹೋಗಿ ಬರುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಸರ ಕಿತ್ತು ಪರಾರಿಯಾಗಿದ್ದರು. ಅಲ್ಲದೆ, ಮಳವಳ್ಳಿ ಪಟ್ಟಣದ ಗೌಡಯ್ಯನ ಬೀದಿಯ ವೃದ್ಧೆ ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಸರ ಕಿತ್ತು ಪರಾರಿಯಾಗಿದ್ದರು. ಭಾರತೀನಗರ ಶೆಟ್ಟಹಳ್ಳಿಹಾಗೂ ಬೋರಾಪುರ ಗೇಟ್ ಬಳಿ ಮಹಿಳೆಯರಿಬ್ಬರ ಸರ, ಕೆ.ಆರ್.ಪೇಟೆ ಪಟ್ಟಣದ ಜಯನಗರಬಡಾವಣೆಯ ಮನೆಯೊಂದರ ಮುಂದೆ ಕಸಗುಡಿಸುತ್ತಿದ್ದ ಮಹಿಳೆ ಸರ, ನಾಗಮಂಗಲಪಟ್ಟಣದ ಮಹಿಳೆಯೊಬ್ಬರ ಸರ ಕಸಿದು ಕಳ್ಳರು ಪರಾರಿಯಾಗಿದ್ದರು.
ಜಿಲ್ಲೆಯಲ್ಲಿ ಸರಗಳ್ಳರು ಬೀಡು ಬಿಟ್ಟಿರುವ ಶಂಕೆ? :
ಸರಗಳ್ಳತನ ಮಾಡಲು ತಂಡವೊಂದು ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಳವಳ್ಳಿಯ ಬಳಿ ದಂಪತಿ ಅಡ್ಡಗಟ್ಟಿ ಸರಕಸಿದು ಪರಾರಿಯಾಗುತ್ತಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ವಿರೋಧ ವ್ಯಕ್ತಪಡಿಸಿದವರಿಗೆ ಚಾಕು ತೋರಿಸಿ ಹಲ್ಲೆ ನಡೆಸಿರುವ ಘಟನೆಗಳು ನಡೆಯುತ್ತಿರುವುದು ಆತಂಕ ತಂದಿದೆ. ಸರಗಳ್ಳರ ತಂಡವನ್ನು ಪತ್ತೆ ಹಚ್ಚಿ ಮಹಿಳೆಯರು, ವೃದ್ಧೆಯರು ನಿರ್ಭಯವಾಗಿ ಓಡಾಡುವ ವಾತಾವರಣ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರ ಗಸ್ತು ಹೆಚ್ಚಳ :
ಮಂಡ್ಯ ನಗರ ಸೇರಿ ಜಿಲ್ಲೆಯ ತಾಲೂಕು ಕೇಂದ್ರ, ಘಟನೆ ನಡೆದ ಗ್ರಾಮೀಣ ಪ್ರದೇಶಗಳಲ್ಲೂ ಸರಗಳ್ಳರ ಪತ್ತೆ, ಪ್ರಕರಣ ನಿಯಂತ್ರಣಕ್ಕೆ ಗಸ್ತಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯ ನಗರದ ಕಲ್ಲಹಳ್ಳಿ, ಬಾಲಕರ ಕಾಲೇಜು, ಜಯಚಾಮರಾಜೇಂದ್ರ ವೃತ್ತ, ನಂದ ವೃತ್ತ, ಕಾಳಿಕಾಂಬ ದೇವಾಲಯ, ನೂರಡಿರಸ್ತೆ, ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳಾದ ಬೆಂಗಳೂರು-ಮೈಸೂರು ಹೆದ್ದಾರಿಯ ವಿ.ಸಿ.ಫಾರಂ ರಸ್ತೆ, ಕಿರಂಗೂರು ರಸ್ತೆ, ಉಮ್ಮಡಹಳ್ಳಿ ಗೇಟ್, ಮೈಷುಗರ್-ಅಸಿಟೇಟ್ ಟೌನ್ ಸಂಪರ್ಕ ರಸ್ತೆ, ಉಮ್ಮಡಹಳ್ಳಿ ಸಾತನೂರು ರಸ್ತೆ, ಅರಕೇಶ್ವರ ದೇವಾಲಯದ ತಿರುವು, ಹನಿಯಂಬಾಡಿ ರಸ್ತೆ, ಬನ್ನೂರು ರಸ್ತೆ, ಸಂತೆ ಕಸಲಗೆರೆ ರಸ್ತೆ, ಹೊಳಲು ವೃತ್ತ ಹಾಗೂ ಚಿಕ್ಕಮಂಡ್ಯ ರಸ್ತೆ, ಸಾತನೂರು ಬೆಟ್ಟ, ಮಳವಳ್ಳಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಅಲ್ಲದೆ, ನಗರಕ್ಕೆ ಬರುವ ಬೈಕ್ ಸವಾರರನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ.
ಮರ್ಯಾದೆಗೆ ಅಂಜಿ ಬೆಳಕಿಗೆ ಬಾರದ ಹಲವು ಪ್ರಕರಣ :
ಮಳವಳ್ಳಿ ತಾಲೂಕಿನ ಮುತ್ತತ್ತಿ, ಶಿಂಷಾ ರಸ್ತೆಗಳಲ್ಲಿ ಪ್ರೇಮಿಗಳು ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗಿರುವುದರಿಂದ ಆ ರಸ್ತೆಯಲ್ಲಿ ಬರುವ ಜೋಡಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಲಾಗುತ್ತಿದೆ. ಕೆಲವರು ಪೊಲೀಸರಿಗೆ ದೂರು ನೀಡಿದರೆ, ಮತ್ತೆ ಕೆಲವರು ಮರ್ಯಾದೆ ದೃಷ್ಟಿಯಿಂದ ದೂರು ನೀಡುತ್ತಿಲ್ಲ ಎಂಬ ಮಾತುಗಳೂ ಸ್ಥಳೀಯರಿಂದ ಕೇಳಿ ಬರುತ್ತಿವೆ.
ಸರಗಳ್ಳತನ ಪ್ರಕರಣ ಗಳು ನಡೆದಿದ್ದು, ಆರೋಪಿಗಳ ಪತ್ತೆಗೆಕ್ರಮ ವಹಿಸಲಾಗುತ್ತಿದೆ.ಸರಗಳ್ಳರ ಪತ್ತೆಗೆ ಆಯಾಕಟ್ಟಿನಜಾಗಗಳಲ್ಲಿ ಪೊಲೀಸ್ ಗಸ್ತಿಗೆ ನಿಯೋಜಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮವಹಿಸಲಾಗುವುದು. – ಡಾ.ಎಂ.ಅಶ್ವಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.