ಚಲುವರಾಯಸ್ವಾಮಿ ಹೇಳಿಕೆ ತಪ್ಪು ಗ್ರಹಿಕೆ
Team Udayavani, Jun 3, 2020, 5:15 AM IST
ಮಂಡ್ಯ: ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳ ಕುರಿತು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. ಚಲುವರಾಯಸ್ವಾಮಿಗೆ ರೈತ ಹೋರಾಟಗಾರರ ಬಗ್ಗೆ ಗೌರವವಿದೆ. ಜಿಲ್ಲೆಯ ಮಾಜಿ ಸಚಿವರಾಗಿ, ಸಂಸದರಾಗಿ ಜಿಲ್ಲೆಯ ಅಭಿವೃದಿಟಛಿಗೆ ಕೆಲಸ ಮಾಡಿದ್ದಾರೆ. ಅದೇ ರೀತಿ ಮೈಷುಗರ್ ಉಳಿವಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ: ಕೆಲವು ಖಾಸಗಿ ಸಕ್ಕರೆ ಕಾರ್ಖಾನೆಗಳ ಸಂಚಿಗೆ ಬಲಿಯಾಗಿ ಮೈಷುಗರ್ ಆರಂಭ ವಿಳಂಬವಾಗುತ್ತಿದೆ ಎನ್ನುವ ಭಾವನೆ ಅವರದ್ದಾಗಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಭೇಟಿ ಮಾಡಿ ಸಂಘಟನೆ ಯವರೊಡಗೂಡಿ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯ ಬೇಕೆಂ ದು ಒತ್ತಾಯಿಸಿದ್ದಾರೆ. ಮೇ 7ರಂದು ನಡೆದ ಸಕ್ಕರೆ ಸಚಿವರ ನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಕ್ಯಾಬಿನೆಟ್‌ನಲ್ಲಿ ಖಾಸಗೀ ಕರಣದ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದಾಗ ಸಭೆಯು ಒಕ್ಕೊರಲಿನಿಂದ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯ ಬೇಕೆಂದು ಒತ್ತಾಯಿಸಲಾಯಿತು ಎಂದು ತಿಳಿಸಿದರು.
ಶೀಘ್ರ ಆರಂಭಿಸಲು ಒತ್ತಾಯ: ಸಿಎಂ ಮೈಷುಗರ್ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ ಕೊಡುತ್ತೇವೆಂದು ದೃಢಪಡಿಸಿದ್ದು, ಮೇ 29ರಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಸಿಎಂ ಶೀಘ್ರ ಮಂತ್ರಿಗಳೊಡನೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ಆಗಸ್ಟ್ ತಿಂಗಳೊಳಗೆ ಮೈಷುಗರ್ ಆರಂಭಿಸಬೇಕೆಂದು ಒತ್ತಾಯಿಸಿರುವು ದಾಗಿ ಹೇಳಿದರು.
ಮುಖಂಡರಾದ ಎಚ್.ಅಶೋಕ್, ಸಿದ್ದರಾಮೇಗೌಡ, ಸಿ.ಎಂ.ದ್ಯಾವಪ್ಪ, ಎಚ್.ಅಪ್ಪಾಜಿ, ಎಚ್. ಕೆ.ರುದ್ರೇಗೌಡ, ಅಂಜನಾ ಶ್ರೀಕಾಂತ್ ಇದ್ದರು. ತಿಂಗಳೊಳಗೆ ಮೈಷುಗರ್ ಆರಂಭಿಸಬೇಕೆಂದು ಒತ್ತಾಯಿಸಿರುವುದಾಗಿ ಹೇಳಿದರು. ಮುಖಂಡರಾದ ಎಚ್.ಅಶೋಕ್, ಸಿದ್ದರಾಮೇಗೌಡ, ಸಿ.ಎಂ.ದ್ಯಾವಪ್ಪ, ಎಚ್.ಅಪ್ಪಾಜಿ, ಎಚ್. ಕೆ.ರುದ್ರೇಗೌಡ, ಅಂಜನಾ ಶ್ರೀಕಾಂತ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.