ಇಂದು ಮಳವಳ್ಳಿಯಲ್ಲಿ “ಅಕ್ಷರ ಜಾತ್ರೆ’


Team Udayavani, Dec 23, 2017, 4:01 PM IST

mand.jpg

ಮಂಡ್ಯ: ಮಳವಳ್ಳಿಯಲ್ಲಿ ಶನಿವಾರ ಅಕ್ಷರ ಜಾತ್ರೆ. ಕನ್ನಡದ ಮನಸ್ಸುಗಳೆಲ್ಲವೂ ಒಂದಾಗುವ ಶುಭದಿನ. ಕನ್ನಡದ ವಿಕಾಸ ನಮ್ಮೆಲ್ಲರ ಮುಂದಿರುವ ಗುರಿ. ಅದನ್ನು ಸಾಧಿಸಲು ಎಲ್ಲರೂ ಕೈಜೋಡಿಸಬೇಕಿದೆ. ಇತ್ತ ಬೆಂಗಳೂರು ರಾಜಧಾನಿ, ಅತ್ತ ಮೈಸೂರುಗಳ ನಡುವಿರುವ ಮಂಡ್ಯ ಜಿಲ್ಲೆಗೆ ವಿಶೇಷ ಸ್ಥಾನಮಾನಗಳಿವೆ. ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕನ್ನಡ ಹಬ್ಬಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಾಂದಿ ಹಾಡಬೇಕಿದೆ.

ಮಳವಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಬಳಿ ನಡೆಯಲಿರುವ ಸಮ್ಮೇಳನದ ಮಹಾದ್ವಾರಕ್ಕೆ ಮಳವಳ್ಳಿ ಸುಂದರಮ್ಮ, ಮಹಾಮಂಟಪಕ್ಕೆ ಮ.ಮಲ್ಲಪ್ಪ, ಪ್ರಧಾನ ವೇದಿಕೆಗೆ ಷಡಕ್ಷರ ದೇವ ಹೆಸರಿಡಲಾಗಿದೆ. ಬೆಳಗ್ಗೆ 8.30ಕ್ಕೆ
ಶಾಸಕ ನರೇಂದ್ರಸ್ವಾಮಿ ರಾಷ್ಟ್ರ ಧ್ವಜಾರೋಹಣ, ತಹಶೀಲ್ದಾರ್‌ ದಿನೇಶ್‌ಚಂದ್ರ ನಾಡ ಧ್ವಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಕೆ.ರವಿಕುಮಾರ ಪರಿಷತ್‌ ಧ್ವಜಾ ರೋಹಣ ಮಾಡುವರು.

ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ ಚಾಲನೆ ನೀಡುವರು. ತಾಲೂಕು ಪಂಚಾಯಿತಿ ಕಚೇರಿಯಿಂದ ಕೊಳ್ಳೇಗಾಲ ರಸ್ತೆ ಮುಖಾಂತರ ಮೆರವಣಿಗೆ ಪ್ರಧಾನ ವೇದಿಕೆಯನ್ನು ತಲುಪಲಿದೆ. ಸಮ್ಮೇಳನವನ್ನು ಬೆಳಗ್ಗೆ 11 ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಪುಸ್ತಕ ಮಳಿಗೆ, ಸಂಸದ ಪುಟ್ಟರಾಜು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಮಾಜಿ ಸಚಿವ ಚೆಲುವರಾಯಸ್ವಾಮಿ ಪುಸ್ತಕ ಬಿಡುಗಡೆ ಮಾಡುವರು. ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಸಮ್ಮೇಳನಾಧ್ಯಕ್ಷರು ಭಾಷಣ ಮಾಡುವರು. ಸಮ್ಮೇಳನ ಕುರಿತು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಎಚ್‌.ಎನ್‌.ಯೋಗೇಶ್‌ ಮಾತನಾಡುವರು.

ಮೊದಲ ಗೋಷ್ಠಿ: ಮಧ್ಯಾಹ್ನ 2ರಿಂದ 3.30ರವರೆಗೆ ನಡೆಯುವ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಲೋಕ ಗೋಷ್ಠಿಯಲ್ಲಿ “ಜಿಲ್ಲೆಯ ರಂಗಭೂಮಿ ಮತ್ತು ಸಿನಿಮಾ ಕುರಿತು ಸರ್ಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎನ್‌.ಎಸ್‌.ಶಂಕರೇಗೌಡ, “ಜಿಲ್ಲೆಯ ಸಾಹಿತ್ಯ’ದ ಬಗ್ಗೆ ಮೈಸೂರು ಮಹಾರಾಜ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎಂ.ಬಿ.ಸುರೇಶ್‌, “ಕನ್ನಡ ಭಾಷಾ ಸಂವರ್ಧನೆಯಲ್ಲಿ ಆಡುನುಡಿಗಳ ಪಾತ್ರ’ ಕುರಿತು ಮದ್ದೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಚ್‌.ಜೆ.ಚಂದ್ರು ವಿಷಯ ಮಂಡಿಸುವರು.

ಎರಡನೇ ಗೋಷ್ಠಿ: ಗೋಷ್ಠಿ 2ರಲ್ಲಿ ಮಂಡ್ಯ ನೆಲದ ಬಹುಮುಖೀ ಸಂಸ್ಕೃತಿಯ ಇತಿಹಾಸವನ್ನು ಒಳಗೊಂಡಿದ್ದು, “ದಲಿತ ಚಳವಳಿ’ ಬಗ್ಗೆ ಸಾಹಿತಿ ಡಾ.ಹೊನ್ನು ಸಿದ್ಧಾರ್ಥ, “ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯ ಪರಂಪರೆ’ ಬಗ್ಗೆ ಸಂಕಥನ ಸಂಪಾದಕ ರಾಜೇಂದ್ರ ಪ್ರಸಾದ್‌, ರಾಮಾನುಜಾಚಾರ್ಯರು ಮತ್ತು ವೈಷ್ಣವ ಪಂಥ ಕುರಿತು ಮೈಸೂರು ಜೆಎಸ್‌ಎಸ್‌ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಬೇವುಕಲ್ಲು ಸುದೀಪ್‌ ಮಾತನಾಡುವರು.

ಕವಿಗೋಷ್ಠಿ: ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಡಾ.ಬಸವರಾಜ ಸಬರದ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಾಹಿತಿ ಡಾ.ಟಿ.ಸಿ.ಪೂರ್ಣಿಮಾ ವಹಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪನೆನಪಿನ ಕಾಣಿಕೆ ವಿತರಿಸುವರು. ಸಂಜೆ 6.30ರಿಂದ 7.15ರವರೆಗೆ ಶಿವಾರದ ಉಮೇಶ್‌ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7.15ರಿಂದ 8 ಗಂಟೆವರೆಗೆ ಎಂ.ಎಸ್‌.ನಿತ್ಯಶ್ರೀ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಮೈಸೂರಿನ ಕನ್ನಡ ಸಿರಿ ಕಲಾವೃಂದದಿಂದ “ಮುದುಕನ ಮದುವೆ’ ನಾಟಕ ನಡೆಯಲಿದೆ.

ಬೃಹತ್‌ ವೇದಿಕೆ ನಿರ್ಮಾಣ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 40×60 ಅಡಿ ಅಳತೆಯ ವೇದಿಕೆ ನಿರ್ಮಿಸಲಾಗಿದೆ. 3 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಸುಮಾರು 5 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. 

ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯ: ಮಳವಳ್ಳಿಯಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಶನಿವಾರಕ್ಕೆ ಅನ್ವಯವಾಗುವಂತೆ ಅನ್ಯ ಕಾರ್ಯನಿಮಿತ್ತ (ಒಒಡಿ) ಸೌಲಭ್ಯ ದೊರೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಕೆ. ರವಿಕುಮಾರ್‌ ತಿಳಿಸಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು, ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶನಿವಾರಕ್ಕೆ ಅನ್ವಯಿಸುವಂತೆ ಓಓಡಿ ಸೌಲಭ್ಯ ದೊರೆಯಲಿದೆ. ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರು, ಮಹಿಳಾ ಸಂಘಗಳ ಸದಸ್ಯರು, ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ

ಸಮ್ಮೇಳನದ ಸವಿಯೂಟ ಶನಿವಾರ ಬೆಳಗ್ಗೆ: ಸಿಹಿ ಪೊಂಗಲ್‌, ಖಾರ ಪೊಂಗಲ್‌, ಕಾಫಿ, ಟೀ. ಮಧ್ಯಾಹ್ನ: ರಾಗಿರೊಟ್ಟಿ, ಅಕ್ಕಿ ರೊಟ್ಟಿ, ಬೆಣ್ಣೆ, ಒಂದು ಲಾಡು, ಹೆಸರುಬೇಳೆ ಪಾಯಸ, ಸಿಹಿಪೊಂಗಲ್‌, ತುಪ್ಪ, ಹುಚ್ಚೆಳ್ಳು ಚಟ್ನಿ, ಚಿತ್ರಾನ್ನ, ಕೋಸಂಬರಿ ಪಲ್ಯ, ಅನ್ನ, ಸಾಂಬಾರ್‌, ರಸಂ, ಮಜ್ಜಿಗೆ, ಹಪ್ಪಳ. ರಾತ್ರಿ: ಅನ್ನ, ಸಾಂಬಾರ್‌, ಮೊಸರು, ಬಜ್ಜಿ, ಹಪ್ಪಳ.

ಭಾನುವಾರ ಬೆಳಗ್ಗೆ: ಕೇಸರಿ ಬಾತ್‌, ತಟ್ಟೆ ಇಡ್ಲಿ, ವಡೆ, ಸಾಂಬಾರ್‌, ಬೆಣ್ಣೆ, ರವೆ ವಾಂಗಿಬಾತ್‌, ಕಾಫಿ, ಟೀ. ಮಧ್ಯಾಹ್ನ: ಒಬ್ಬಟ್ಟು, ಗೋಧಿ ಪಾಯಸ, ಮೆಂತ್ಯ ಬಾತ್‌, ಮುದ್ದೆ, ಹಸಿ ಅವರೆಕಾಳು ಗೊಜ್ಜು, ಹುರಳಿ ಪಲ್ಯ, ಹೆಸರುಕಾಳು ಮೊಳಕೆ, ಅನ್ನ, ಹುರಳಿಕಟ್ಟು, ರಸಂ, ಮಜ್ಜಿಗೆ, ಬೆಣ್ಣೆ, ತುಪ್ಪ, ಹಪ್ಪಳ.

„ಮಂಡ್ಯ ಮಂಜುನಾಥ

ಟಾಪ್ ನ್ಯೂಸ್

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.