22ರಿಂದ 28ರವರೆಗೆ ಮಕ್ಕಳ ಚಲನಚಿತ್ರೋತ್ಸವ
Team Udayavani, Nov 20, 2019, 4:15 PM IST
ಮಂಡ್ಯ: ಜಿಲ್ಲಾಧಿಕಾರಿಯವರ ಕಾರ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ.22ರಿಂದ 28ರವರೆಗೆ ಮಕ್ಕಳ ಚಲನ ಚಿತ್ರೋತ್ಸವವನ್ನು ಮಂಡ್ಯ, ಮದ್ದೂರು, ಪಾಂಡವಪುರ, ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ತಾಲೂಕು ಗಳಲ್ಲಿರುವ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುವುದು.
ಎಲ್ಲಾ ಮಕ್ಕಳಿಗೆ ಅವಕಾಶ: ಮಕ್ಕಳ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲಿ ವಿಶೇಷವಾಗಿ 3ನೇ ತರಗತಿಯಿಂದ 10ನೇ ತರಗತಿಯವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ. ಇದಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹತ್ತಿರದ ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಆಸನದ ವ್ಯವಸ್ಥೆ ಪರಿಶೀಲಿಸಿ ತಾಲೂಕಿನಲ್ಲಿರುವ ಶಾಲಾ ಮಕ್ಕಳ ಸಂಖ್ಯೆಗನುಗುಣವಾಗಿ ಎಲ್ಲಾ ಮಕ್ಕಳು ಇದರ ಸದುಪ ಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
15 ರೂ. ಟಿಕೆಟ್: ಮಕ್ಕಳ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸುವ ಒಂದು ಮಗುವಿಗೆ 15 ರೂ.ನಂತೆ ಟಿಕೆಟ್ ಹಣ ಪಡೆಯುವಂತೆ ಹಾಗು ಚಿತ್ರ ಪ್ರದರ್ಶನವನ್ನು ಆಯಾ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 8ರಿಂದ 10ರವರೆಗೆ ವ್ಯವಸ್ಥೆ ಮಾಡಲಾಗಿದೆ. ಚಲನ ಚಿತ್ರ ಪ್ರದರ್ಶನ ಸಮಯದಲ್ಲಿ ಬಂದ ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಬಾರದು, ಈ ವೇಳೆ ಮಹಿಳಾ ಸಿಬ್ಬಂದಿ ಚಿತ್ರಮಂದಿರಗಳಲ್ಲಿದ್ದು, ಮಕ್ಕಳ ಪೂರ್ಣ ರಕ್ಷಣೆ ನಿರ್ವಹಿಸಬೇಕು. ಹಾಗೂ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಪ್ರದರ್ಶನ ಮುಗಿದ ಮೇಲೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವಂತೆ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಸೂಚಿಸಿದ್ದಾರೆ.
ಪುಟಾಣಿ ಸಫಾರಿ ಮಕ್ಕಳ ಚಿತ್ರ ಪ್ರದರ್ಶನ: ಮಕ್ಕಳ ಚಲನ ಚಿತ್ರೋತ್ಸವ ಪ್ರದರ್ಶನವನ್ನು ನ.22ರಿಂದ 28ರವರೆಗೆ ಬೆಳಿಗ್ಗೆ 8ರಿಂದ 10ರವರೆಗೆ ಪುಣಾಣಿ ಸಫಾರಿ ಎಂಬ ಚಿತ್ರವನ್ನು ಮಂಡ್ಯದ ಸಂಜಯ, ಮಹಾವೀರ, ಜಯಲಕ್ಷ್ಮೀ ಮತ್ತು ನಂದಾ ಚಿತ್ರಮಂದಿರ, ಸಾತನೂರಿನ ವೆಂಕಟೇಶ್ವರ ಚಿತ್ರಮಂದಿರ, ಮದ್ದೂರಿನ ಸಂಜಯ ಮತ್ತು ಮಹಾವೀರ ಚಿತ್ರಮಂದಿರ, ಕೆ.ಎಂ.ದೊಡ್ಡಿಯ ಸುಮಾ ಚಿತ್ರಮಂದಿರ, ಭಾರತೀನಗರದ ಮಾರುತಿ ಚಿತ್ರಮಂದಿರ, ಮಳವಳ್ಳಿಯ ಮಹಾಲಕ್ಷ್ಮೀ ಚಿತ್ರಮಂದಿರ, ಹಲಗೂರಿನ ರವಿ ಚಿತ್ರಮಂದಿರ, ಬೆಳಕವಾಡಿಯ ಬೀರೇಶ್ವರ ಚಿತ್ರಮಂದಿರ, ಪಾಂಡವಪುರದ ಲಾಲ್ ಬಹುದ್ದೂರ ಮತ್ತು ಕೋಕಿಲ ಚಿತ್ರಮಂದಿರ, ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರ, ಕೆ.ಆರ್. ಪೇಟೆಯ ಬಸವೇಶ್ವರ ಮತ್ತು ಶ್ರೀ ರಂಗ ಚಿತ್ರಮಂದಿರ, ಬೆಳ್ಳೂರು ಕ್ರಾಸ್‌ನ ಮಾರುತಿ ಚಿತ್ರಮಂದಿರ, ಗಂಜಾಂನ ಶ್ರೀದೇವಿ ಚಿತ್ರಮಂದಿರ, ಬಾಬುರಾಯನಕೊಪ್ಪಲಿನ ಭಾರತೀ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ ಚಿತ್ರಮಂದಿರಗಳಲ್ಲಿ 6 ದಿನಗಳ ಕಾಲ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.