ಊರೆಲ್ಲ ಹೊಳೆ ಹರಿದರೂ ಈ ಕೆರೆ ತುಂಬಿಲ್ಲ!

Team Udayavani, Jul 22, 2018, 4:42 PM IST

mand.jpg

ಮಳವಳ್ಳಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಬಿನಿ, ಹಾರಂಗಿ, ಹೇಮಾವತಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳು ತುಂಬಿ ಹರಿಯುತ್ತಿವೆ. ಎಲ್ಲೆಲ್ಲೂ ಜಲಧಾರೆ ವೈಭವ ಕಣ್ಣಿಗೆ ಕಾಣಿಸುತ್ತಿದೆ. ಆದರೂ ಸಕ್ಕರೆ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ನೀರಿನ ಕೊರತೆ ಮಾತ್ರ ನೀಗಿಲ್ಲ. ಅದಕ್ಕೆ ಸಾಕ್ಷಿ ತಾಲೂಕಿನ ಹಲಗೂರು ದೊಡ್ಡಕೆರೆ.

ಮಳೆ ಕೊರತೆಯಿಂದ ಹಲಗೂರಿನ ಕೆರೆ ಕಳೆದ 25 ವರ್ಷಗಳಿಂದ ತುಂಬಿಲ್ಲ. ಅಭಿವೃದ್ಧಿಯಿಂದಲೂ ಸಂಪೂರ್ಣ ವಂಚಿತವಾಗಿದೆ. ಉತ್ತಮ ಮಳೆಯಾಗಿ ಎಲ್ಲೆಡೆ ಹಸಿರು ನೆಲೆಸಿ, ರೈತರು ಬೆಳೆ ಕೈಗೆತ್ತಿಕೊಂಡಿದ್ದರೆ ಹಲಗೂರು ದೊಡ್ಡಕೆರೆ ವ್ಯಾಪ್ತಿಯ ರೈತರು ಮಾತ್ರ ನೀರಿಲ್ಲದೆ ಒಣಗುವ ಬೆಳೆಗಳನ್ನು ಕಂಡು ಕಂಗಾಲಾಗಿದ್ದಾರೆ.

ಮಳೆಯಾಶ್ರಿತ ಪ್ರದೇಶ: ಸುಮಾರು 60 ಎಕರೆ ಪ್ರದೇಶದಲ್ಲಿರುವ ದೊಡ್ಡಕೆರೆ ನೀರಿಲ್ಲದೆ ಬರಿದಾಗಿದೆ. ಇದರಿಂದ ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ 500 ಎಕರೆ ಪ್ರದೇಶದಲ್ಲಿರುವ ಬೆಳೆ ನೀರಿಲ್ಲದೆ ಒಣಗುತ್ತಿದೆ. ಕೆರೆ ಪ್ರದೇಶದ ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದೆ. ಈ ಕೆರೆಗೆ ನಾಲೆ, ಪೈಪ್‌ಲೈನ್‌ ಮೂಲಕ ಕೆರೆ ತುಂಬಿಸುವ ಪ್ರಯತ್ನಗಳು ಯಾರಿಂದಲೂ ನಡೆದಿಲ್ಲ. ಇದರಿಂದ ಈ ಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನ ಹಲಗೂರು ವ್ಯಾಪ್ತಿಯಲ್ಲಿರುವ ಸುಮಾರು 60 ಎಕರೆ ಪ್ರದೇಶದಲ್ಲಿರುವ ದೊಡ್ಡ ಕೆರೆ ಮಳೆ ಇಲ್ಲದೆ ಕಳೆದ 25 ವರ್ಷಗಳಿಂದ ಖಾಲಿ ಖಾಲಿ ಹೊಡೆಯುತ್ತಿರುವುದು ಪ್ರಕೃತಿ ವಿಕೋಪವೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷತೆಯೋ ಎಂಬುದು ಹೇಳತೀರದಾಗಿದೆ.

ಭೀಮನಕಿಂಡಿ ಬೆಟ್ಟಕ್ಕೆ ಮಳೆಯಾದರೆ ಮಾತ್ರ ಈ ಕೆರೆಗೆ ನೀರು ಬರುತ್ತದೆ. ಆದ ಕಾರಣ ಶಿಂಷಾ ನದಿಯಿಂದ ಅಥವಾ ಇಗ್ಗಲೂರು ಅಣೆಕಟ್ಟೆಯಿಂದ ಇಲ್ಲಿಗೆ ನೀರು ತರಲು ಅವಕಾಶವಿದೆ. ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡಕೆರೆ ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ. 

ನೀರಿನ ಮಾರ್ಗ ಮುಚ್ಚಿ ಹೋಗಿವೆ: ಉತ್ತಮ ವರ್ಷಧಾರೆಯಿಂದ ಎಲ್ಲಾ ನದಿಗಳು ಮೈದುಂಬಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಆದರೆ, ಹಲಗೂರಿನ ಕೆರೆಯಲ್ಲಿ ನೀರೇ ಇಲ್ಲದಂತಾಗಿದೆ. ಕೆರೆಗೆ ನೀರು ತುಂಬಬೇಕಾದರೆ ಭೀಮನ ಕಿಂಡಿ ಬೆಟ್ಟದಲ್ಲಿ ಮಳೆಯಾಗಬೇಕು. ಅಲ್ಲಿಂದ ಹಳ್ಳದಲ್ಲಿ ಹರಿದು ಬಂದ ಮಳೆ ನೀರು ಕೆರೆ ಸೇರುತ್ತದೆ.

ಈ ಬಾರಿ ಭೀಮನಕಿಂಡಿ ಬೆಟ್ಟದಲ್ಲಿ ಸಮೃದ್ಧ ಮಳೆಯಾಗಿದ್ದರೂ ಕೆರೆಗೆ ಮಾತ್ರ ನೀರು ಹರಿದುಬಂದಿಲ್ಲ. ಏಕೆಂದರೆ, ಕೆರೆಗೆ ನೀರು ಹರಿದುಬರುವ ಮಾರ್ಗದ ಎಲ್ಲಾ ಹಳ್ಳ-ಕೊಳ್ಳಗಳು ಮುಚ್ಚಿ ಹೋಗಿವೆ. ನೀರು ಅಲ್ಲಿಂದ ಇಲ್ಲಿಗೆ ಬರುವುದಕ್ಕೆ ಸಾಧ್ಯವಾಗದಂತಾಗಿದೆ ಎನ್ನುವುದು ಸ್ಥಳೀಯರು ಹೇಳುವ ಮಾತು. 

ನೀರು ತುಂಬಿಸಿ: ಈ ಕೆರೆಗೆ ನೀರು ತುಂಬಿಸಲು ಶಿಂಷಾ ನದಿಯಿಂದ ನೀರು ತರಬೇಕು ಅಥವಾ ಇಗ್ಗಲೂರು ಡ್ಯಾಂನಿಂದ ಪೈಪ್‌ ಮುಖಾಂತರ ನೀರು ತಂದು ತುಂಬಿಸಬಹುದು ಹಾಗೂ ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಶಿಂಷಾ ನದಿಯಿಂದ ಸಾತನೂರಿಗೆ ಹಲಗೂರು ಮಾರ್ಗವಾಗಿ ಪೈಪ್‌ಲೈನ್‌ ಮುಖಾಂತರ ಶುದ್ಧಿಕರಿಸದೆ ಇರುವ ನೀರನ್ನು ಕೊಂಡೊಯ್ಯಲಾಗುತ್ತಿದೆ. ಅದೇ ಮಾರ್ಗದ ಪೈಪ್‌ಗೆ ಒಂದು ಗೇಟ್‌ವಾಲ್‌ ಅಳವಡಿಸಿ ಹಲಗೂರು ಕೆರೆಯಲ್ಲೇ ಹಾದು ಹೋಗಿರುವ ಪೈಪ್‌ನಿಂದಲೇ ಕೆರೆಗೆ ನೀರು ಹರಿಸಿ ಭರ್ತಿ ಮಾಡಬಹುದು.

500 ಎಕರೆ ಪ್ರದೇಶದ ರೈತರಿಗೆ ಸಂಕಷ್ಠ: ಈ ಕೆರೆ ಸುಮಾರು 50 ರಿಂದ 60 ಎಕರೆ ಪ್ರದೇಶವಿದ್ದು, ಈ ಕೆರೆ ಭರ್ತಿಯಾದರೆ ಸುಮಾರು 500 ರಿಂದ 600 ಎಕರೆಗೆ ನೀರು ಸಿಗುತ್ತದೆ. ಗ್ರಾಮದಲ್ಲಿರುವ ಮನೆಗಳ ಬೋರ್‌ವೆಲ್‌ಗ‌ಳಲ್ಲಿ ಸಮೃದ್ಧಿಯಾಗಿ ನೀರು ಬರುತ್ತದೆ. ಹೊಸದಾಗಿ ಬೋರ್‌ವೆಲ್‌ ಹಾಕಿಸಿದರೆ ಕೇವಲ 50-60 ಅಡಿಗೆ ನೀರು ಬರುವಂತಹ ಪರಿಸ್ಥಿತಿ ಇದೆ. ಕೆರೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿ ರೈತರು ಭತ್ತ ಬೆಳೆಯಬಹುದು. ಸುಮಾರು ವರ್ಷಗಳ ಹಿಂದೆ ಈ ಕೆರೆಯ ನೀರಿನಿಂದ ರೈತರು 2 ಬಾರಿ ಭತ್ತ ಬೆಳೆಯುತ್ತಿದ್ದರು. ಈಗ ನೀರು ಇಲ್ಲದ ಕಾರಣ ವ್ಯವಸಾಯ ಮಾಡುವುದನ್ನೆ ನಿಲ್ಲಿಸಿ ಸಂಕಷ್ಟದಲ್ಲಿ ಮುಳುಗಿದ್ದಾರೆ.

ಕೆಲವು ಕಡೆ ಭರ್ತಿಯಾಗಿರುವ ಕೆರೆಗಳಿಗೆ ಶಾಸಕರು ಬಾಗಿನ ಅರ್ಪಿಸುತ್ತಿರುವ ರೀತಿ ಹಲಗೂರು ಕೆರೆಗೆ ನೀರು ತುಂಬಿಸುವ
ಯೋಜನೆ ರೂಪಿಸಿ ನೀರು ತುಂಬಿಸಬೇಕಿದೆ. ಇನ್ನಾದರೂ ಶಾಸಕರು ಅಥವಾ ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿ ಮಾಡುವರೇ ಎಂಬುದನ್ನು ಕಾದು ನೋಡಬೇಕಿ¨

ಪ್ರಭಾಕರ್‌

ಟಾಪ್ ನ್ಯೂಸ್

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.