ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಚಿತ್ತಾರ
Team Udayavani, Aug 1, 2018, 4:21 PM IST
ಮಳವಳ್ಳಿ: ಬಾನಂಗಳದಲ್ಲಿ ಮಕ್ಕಳ ನೂರಾರು ಬಣ್ಣ-ಬಣ್ಣದ ಗಾಳಿಪಟಗಳ ಚಿತ್ತಾರ ನೋಡುಗರ ಹಾಗೂ ಭಾಗವಹಿಸಿದ್ದ ಮಕ್ಕಳ ಮನಸೂರೆಗೊಂಡಿತು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ನಿವೇಶನದಲ್ಲಿ ತಾಲೂಕು ಗಾಳಿಪಟ ಸ್ಪರ್ಧೆ ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.
ಗಾಳಿ ಪಟ ಹಾರಿಸಿದ ಶಾಸಕ: ತಾಲೂಕಿನ ವಿವಿಧ ಶಾಲೆಗಳಿಂದ ಅಗಮಿಸಿದ ಮಕ್ಕಳು ಬಣ್ಣ-ಬಣ್ಣದಿಂದ ರಚಿಸಿದ ಗಾಳಿಪಟ ನೋಡಲು ಪಟ್ಟಣದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಶಾಸಕ ಡಾ. ಕೆ.ಅನ್ನದಾನಿ ಗಾಳಿಪಟ ಹಾರಿಸಿ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಿದರು. ತಾವೂ ಪ್ರೇಕ್ಷಕರಂತೆ ಭಾಗವಹಿಸಿ ಮಕ್ಕಳ ಕ್ರೀಡೆ ವೀಕ್ಷಣೆ ಮಾಡಿದರು.
ಗ್ರಾಮೀಣ ಕ್ರೀಡೆ: ಇದೇ ಸಂದರ್ಭದಲ್ಲಿ ಗಾಳಿಪಟ ಸ್ಪರ್ಧೆ ಸಮಿತಿ ಅಧ್ಯಕ್ಷ ಎನ್.ಎಂ.ಮಲ್ಲೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಕಳೆದ 5 ವರ್ಷದಿಂದ ಗಾಳಿಪಟ ಸ್ಫರ್ಧೆ ಆಯೋಜಿಸಿಕೊಂಡು ಬಂದಿದು, ಈ ವರ್ಷದಿಂದ ಅಳಿಗುಳಿ ಮಣೆ, ರಂಗೋಲಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಿನ್ನು ಆಯೋಜಿಸಲು ಮುಂದಾಗಿದ್ದೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸಿ.ಮಲ್ಲಿಕ್, ಸಮಿತಿಯ ಪದಾಧಿಕಾರಿಗಳು, ಉದ್ಯಮಿ ವೆಂಕಟೇಶ್, ಸಿಎಸ್‌ಪಿ ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಜನರು ಹಾಗೂ ವಿವಿಧ ಶಾಲೆಗಳಿಂದ ಅಗಮಿಸಿದ್ದ ನೂರಾರು ಮಕ್ಕಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.