ದೇಗುಲಕ್ಕೆ ನಾಮಫಲಕ ಅಳವಡಿಕೆ ವಿವಾದ
Team Udayavani, Jan 4, 2020, 4:16 PM IST
ಮಳವಳ್ಳಿ: ತಾಲೂಕಿನ ಮಾದಹಳ್ಳಿಯಲ್ಲಿ ಶ್ರೀಬಸವೇಶ್ವರ ದೇವಾಲಯ ಉದ್ಘಾಟನೆಗೆ ನಾಮಫಲಕ ಹಾಕಿಸುವ ವಿಚಾರ ವಿವಾದದ ಸ್ವರೂಪ ತಾಳಿದೆ. ನಾಮಫಲಕ ಅಳವಡಿಸಲು ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ನಾಮಫಲಕ ಹಾಕಿದಲ್ಲಿ ಮುಂದಾಗುವ ಅನಾಹುತಕ್ಕೆ ತಹಶೀಲ್ದಾರರೇ ಹೊಣೆ ಎಂದು ಎಚ್ಚರಿಸಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಮುಜರಾಯಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಬಸವೇಶ್ವರ ದೇವಸ್ಥಾನಸರ್ಕಾರದಅನುದಾನ ಪಡೆಯದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ದೇವಾಲಯ ನಿರ್ಮಾಣಗೊಂಡಿದೆ. ಕೆ.ಆರ್.ಪೇಟೆ ಉಪ ಚುನಾವಣೆಗೆ ಸಂದರ್ಭದಲ್ಲಿ ನೀತಿ ಸಂಹಿತೆ ಇದ್ದು ಶ್ರೀ ಚುಂಚನಗಿರಿ ಸ್ವಾಮೀಜಿಯಿಂದ ಉದ್ಘಾಟನೆ ಮಾಡಿಸಲಾಗಿತ್ತು. ಆದರೆ, ದೇವಾಲಯ ಉದ್ಘಾಟನೆಗೊಂಡು ಹಲವು ದಿನಗಳ ನಂತರ ಶಿಷ್ಟಾಚಾರದ ಪ್ರಕಾರ ನಾಮಫಲಕ ಹಾಕಬೇಕು ಎಂದು ತಹಶೀಲ್ದಾರ್ ಚಂದ್ರಮೌಳಿ ತಿಳಿಸಿದ್ದು, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಸ್ವಾಮೀಜಿ ಹೆಸರು ಬಿಟ್ಟು ಇನ್ನಾವುದೇ ಜನಪ್ರತಿನಿಧಿಗಳ ಹೆಸರಿರುವ ನಾಮಫಲಕ ಹಾಕಬಾರದು ಎಂದು ಬಿಗಿ ಪಟ್ಟುಹಿಡಿದರು.
ಶಿಷ್ಠಾಚಾರದ ಪ್ರಕಾರ ಹಾಕುವುದಾದರೂ ನಮಗೆ ಕಾಲಾವಕಾಶ ನೀಡಬೇಕು. ನಾವೂ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡುತ್ತೇವೆ. ಅವರಿಂದ ಯಾವ ಸೂಚನೆ ಬರುತ್ತದೆ ಎಂದು ತಿಳಿದ ನಂತರ ಹಾಕಿಸಿ. ಅಲ್ಲಿಯವರಗೆ ಹಾಕಿಸಬಾರದೆಂದು ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು.
ದಾನಿಗಳ ಹೆಸರು ಹಾಕಿ: ನೀತಿ ಸಂಹಿತೆ ಇದ್ದು ಜನಪ್ರತಿನಿಧಿಗಳು ವೇದಿಕೆಯಲ್ಲೇ ಇರಲಿಲ್ಲ. ಜೊತೆಗೆ ಯಾರೂ ದೇವಾಲಯ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಕೇವಲ ಅಧಿಕಾರ ಇದೆ ಎಂದು ನಾಮಫಲಕ ಹಾಕಬಾರದು. ಜೊತೆಗೆ ದೇವಾಲಯಕ್ಕೆ ಹಲವರು ಧನ ಸಹಾಯ ನೀಡಿದ್ದು ಅವರ ಹೆಸರು ಹಾಕಿಸಿ. ಅಲ್ಲಿಯವರೆಗೆ ಹಾಕಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಇಡೀ ಗ್ರಾಮವೇ ಬೇಡವೆಂದರೂ ಯಾರದೋ ಒತ್ತಡಕ್ಕೆ ಮಣಿದು ನಾಮಫಲಕ ಹಾಕಿಸುವುದಾದರ ಮುಂದೆ ಆಗುವ ಯಾವುದೇ ಅನಾಹುತಕ್ಕೆ ನಮ್ಮನ್ನು ಹೊಣೆ ಮಾಡಬಾರದು. ಒಂದು ವೇಳೆ ಕಿಡಿಗೇಡಿಗಳು ಅನಾಹುತ ಮಾಡಿ ಅದನ್ನು ನಮ್ಮ ಮೇಲೆ ಹೊರಿಸಬಾರದು. ಹಾಗಿದ್ದರೆ ಜವಾಬ್ದಾರಿ ಹೊತ್ತು ಹಾಕಿಸಿ ಎಂದರು.
ಶಿಷ್ಠಾಚಾರವನ್ನೇ ಪಾಲನೆ ಮಾಡಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಏಕಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ತಹಶೀಲ್ದಾರ್ ಸಮರ್ಪಕ ಉತ್ತರ ನೀಡಲಿಲ್ಲ. ಎರಡು ಗಂಟೆ ಚರ್ಚೆ ನಡೆದು ಕಾಲಾವಕಾಶ ನೀಡದೆ ನಾಮಫಲಕ ಅಳವಡಿಸಲು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.
ಗ್ರಾಮದಲ್ಲಿ ಒಂದೇ ಬಾರಿ ಮೂರು ದೇವಾಲಯ ನಿರ್ಮಿಸಿ ಉದ್ಘಾಟಿಸಿದ್ದು, ಉಳಿದ ಎರಡು ದೇವಾಲಯಕ್ಕೆ ನಾಮಫಲಕ ಹಾಕಿಸದೆ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಮಾತ್ರ ಏಕೆ ಹಾಕಿಸಬೇಕು. ನಿಯಮ ಇದೆಯಾ. ಹಾಗಿದ್ದರೆ ಮೂರು ದೇವಾಲಯಕ್ಕೂ ಹಾಕಿಸಿ ಇಲ್ಲದಿದ್ದರೆ ಯಾವುದೇ ದೇವಸ್ಥಾನಕ್ಕೂ ಹಾಕಸಬೇಡಿ ಎಂದು ಮನವಿ ಮಾಡಿದರೂ ತಹಶೀಲ್ದಾರ್ ನಾನು ಕಾನೂನು ಪಾಲನೇ ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಹಾಕಿಸು ವುದಾಗಿ ಹೇಳಿ ಅಂತಿಮವಾಗಿ ಅಳವಡಿಸಿ ತೆರಳಿದರು.
ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಮಾತನಾಡಿ, ಗ್ರಾಮದಲ್ಲಿ ಶಾಂತಿಯುತವಾಗಿ ದೇವಸ್ಥಾನ ನಿರ್ಮಿಸಿದ್ದು, ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಾಮಫಲಕ ಅಳವಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಪಿಎಸ್‌ಐ ಮಂಜು ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.