757 ಪಾಸಿಟಿವ್ ಕೇಸ್ :3 ಮಂದಿ ಬಲಿ
Team Udayavani, Jun 2, 2021, 6:53 PM IST
ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ 343ಮಂದಿಗೆ ಸೋಂಕು ಆವರಿಸಿದ್ದು, 3ಮಂದಿ ಮೃತಪಟ್ಟಿದ್ದಾರೆ. ಮೃತ 3ಮಂದಿಯಪೈಕಿಮಳವಳ್ಳಿ,ನಾಗಮಂಗಲಹಾಗೂ ಹೊರ ಜಿಲ್ಲೆಯ ತಲಾ ಒಬ್ಬರುಸಾವನ್ನಪ್ಪಿದ್ದಾರೆ. ಎಲ್ಲರೂ ಕೊರೊನಾಸೋಂಕಿನ ಜತೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದರಿಂದ ಸಾವಿನ ಸಂಖ್ಯೆ 453ಕ್ಕೇರಿದೆ.ಜಿಲ್ಲೆಯಾದ್ಯಂತ343 ಮಂದಿಗೆ ಸೋಂಕುಆವರಿಸಿದೆ. ಮಂಡ್ಯ70, ಮದ್ದೂರು41,ಮಳವಳ್ಳಿ 31, ಪಾಂಡವಪುರ 59,ಶ್ರೀರಂಗಪಟ್ಟಣ 45, ಕೆ.ಆರ್.ಪೇಟೆ 58,ನಾಗಮಂಗಲ 31 ಹಾಗೂ ಹೊರಜಿಲ್ಲೆಯ 8 ಮಂದಿಗೆ ಸೋಂಕು ಆವರಿಸಿದೆ.
ಇದುವರೆಗೂ ಜಿಲ್ಲೆಯಲ್ಲಿಒಟ್ಟು61,215 ಪ್ರಕರಣದಾಖಲಾಗಿವೆ. ಅದರಂತೆ 513 ಮಂದಿ ಸೋಂಕಿನಿಂದಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 55,294 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 5,466 ಸಕ್ರಿಯ ಪ್ರಕರಣಗಳಿದ್ದು,ಇದರಲ್ಲಿ561 ಸರ್ಕಾರಿ ಆಸ್ಪತ್ರೆ, 119 ಖಾಸಗಿಆಸ್ಪತ್ರೆ, 1,735 ಮಂದಿ ಕೋವಿಡ್ ಕೇರ್‌ಸೆಂಟರ್ ಹಾಗೂ 3051 ಮಂದಿಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
3,291 ಮಂದಿಗೆ ಪರೀಕ್ಷೆನಡೆಸಲಾಗಿತ್ತು. ಅದರಲ್ಲಿ 2,574 ಆರ್‌ಟಿಪಿಸಿಆರ್ ಹಾಗೂ 717 ಮಂದಿಗೆರ್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು.ಇದುವರೆಗೂ ಒಟ್ಟು 7,70,339 ಮಂದಿಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.