ನರ್ಸಿಂಗ್ ಕಾಲೇಜಿನ ನಾಲ್ವರಿಗೆ ಕೊರೊನಾ
Team Udayavani, Jan 2, 2022, 1:00 PM IST
ನಾಗಮಂಗಲ: ದೇಶದೆಲ್ಲೆಡೆ ಒಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವ ಬೆನ್ನಲ್ಲೇ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ ಕೊಲ್ಕತ್ತಾ ಮೂಲದ ನಾಲ್ವರುವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.
ಕೊಲ್ಕತ್ತದಿಂದ ಕಳೆದ ಡಿ.20ರಂದು ತಾಲೂಕಿನಬಿ.ಜಿ.ನಗರಕ್ಕೆ ಆಗಮಿಸಿದ್ದ67ವಿದ್ಯಾರ್ಥಿಗಳಲ್ಲಿ ಕೋವಿಡ್ ನೆಗೆಟಿವ್‌ವರದಿ ಬಂದಿದ್ದ ಹಿನ್ನೆಲೆಯಲ್ಲಿ ಆ ಎಲ್ಲಾವಿದ್ಯಾರ್ಥಿಗಳನ್ನು 7ದಿನ ಕ್ವಾರಂಟೈನ್‌ನಲ್ಲಿಡಲಾಗಿತ್ತು. 7ನೇ ದಿನದ ನಂತರ ಎಲ್ಲಾ 67ವಿದ್ಯಾರ್ಥಿಗಳನ್ನು ಮತ್ತೂಮ್ಮೆ ಕೋವಿಡ್‌ಪರೀಕ್ಷೆಗೊಳಪಡಿಸಿದ ವೇಳೆ ನಾಲ್ಕುಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.ನಾಲ್ವರು ಸೋಂಕಿತ ವಿದ್ಯಾರ್ಥಿಗಳಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ137ಮಂದಿಯನ್ನು ಪತ್ತೆ ಹಚ್ಚಿರುವ ತಾಲೂಕುಆಡಳಿತ ಕೋವಿಡ್ ಪರೀಕ್ಷೆಗೊಳಪಡಿಸಿದೆ.
ಇನ್ನು ಸೋಂಕಿತ ನಾಲ್ವರು ಕೊಲ್ಕತ್ತಾದಿಂದ ಆಗಮಿಸಿರುವುದರಿಂದ ಅವರನ್ನು ಜಿನೋಸೀಕ್ವೆನ್ಸಿ ಪರೀಕ್ಷೆಗೆ ಮಾದರಿಯನ್ನುಕಳುಹಿಸಲಾಗಿದ್ದು, ವರದಿಗಾಗಿ ತಾಲೂಕು ಆಡಳಿತ ಕಾಯುತ್ತಿದೆ.
ಆತಂಕ: ಹೊರರಾಜ್ಯದಿಂದ ಬಂದಿರುವ ನಾಲ್ಕು ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್‌ಸೋಂಕು ತಗುಲಿರುವುದುತಾಲೂಕಿನ ಜನರಲ್ಲಿ ಭಾರೀಆತಂಕವನ್ನುಂಟುಮಾಡಿದ್ದು ನಾಲ್ವರುಸೋಂಕಿತರಿಗೆ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ವೈದ್ಯರಲ್ಲಿ ಸೋಂಕು ಪತ್ತೆ: ತಾಲೂಕಿನಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಓರ್ವ ಸರ್ಜನ್ ಹಾಗೂ ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರದಒಬ್ಬ ವೈದ್ಯರಿಗೂ ಸೋಂಕು ದೃಢಪಟ್ಟಿದೆ. ಈಇಬ್ಬರೂ ಸಹ ವೈದ್ಯರಾಗಿರುವುದರಿಂದ ಇವರಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಸೋಂಕು ಹಿನ್ನೆಲೆ: ಶಾಸಕರ ಸಭೆ :
ತಾಲೂಕಿನ ಬಿ.ಜಿ.ನಗರದ 4 ವಿದ್ಯಾರ್ಥಿಗಳಿಗೆ ಸೋಂಕು ಕಂಡಿರುವ ಹಿನ್ನೆಲೆ ಶಾಸಕ ಸುರೇಶ್‌ಗೌಡ ಅಧಿಕಾರಿಗಳೊಂದಿಗೆ ಕೋವಿಡ್‌ಮುನ್ನೆಚ್ಚರಿಕೆ ಸಭೆ ನಡೆಸಿದರು. ಆದಿಚುಂಚನಗಿರಿಯಲ್ಲಿಯುವಜನೋತ್ಸವ ನಡೆಯುತ್ತಿದ್ದು, ಕೋವಿಡ್‌ನಿಯಮಾನುಸಾರವೇ ಕಾರ್ಯಕ್ರಮ ನಡೆಯುತ್ತದೆ. ಬೆಳ್ಳೂರುಭಾಗದಲ್ಲಿ ಕೋವಿಡ್ ಹೆಚ್ಚಳವಾಗಿರಯವ ಹಿನ್ನೆಲೆಯಲ್ಲಿಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. 300ಕ್ಕಿಂತಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕಅಂತರ, ಮಾಸ್ಕ್, ಸ್ಯಾನಿಟೈಸರ್ ಸೇರಿ ಕೋವಿಡ್ ಸುರಕ್ಷತೆಗಳನ್ನುಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗಬೇಕಾಗಿರುವ ಆಕ್ಷಿಜನ್ ಪ್ಲಾಂಟ್ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಜಿಲ್ಲಾಡಳಿತ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಶಾಸಕಸುರೇಶ್‌ಗೌಡ ಗಂಭೀರವಾಗಿ ಆರೋಪಿಸಿದರು. ಮನ್‌ಮುಲ್‌ಡೇರಿಯಿಂದ ಹಣಕೊಡಲು ಮುಂದಾಗಿದ್ದರೂ ಜಿಲ್ಲಾಡಳಿತಸ್ಪಂದಿಸುತ್ತಿಲ್ಲ. ನಾನು ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದರೂಕಾಮಗಾರಿ ವಿಳಂಬವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಗಮನಕ್ಕೆ ತಂದಿದ್ದರೂ ಪ್ರಯೋಜವಾಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.