ಜಿಲ್ಲೆಯಲ್ಲಿ ಮತ್ತೆ 84 ಮಂದಿಗೆ ಸೋಂಕು
Team Udayavani, Aug 16, 2020, 1:47 PM IST
ಮಂಡ್ಯ: ಜಿಲ್ಲೆಯಲ್ಲಿ ಶನಿವಾರ ಕೋವಿಡ್ ಸೋಂಕಿಗೆ ಒಬ್ಬ ಬಲಿಯಾಗಿದ್ದು, 84 ಮಂದಿಗೆ ಸೋಂಕು ಆವರಿಸಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3263ಕ್ಕೇರಿದೆ.
ಶ್ರೀರಂಗಪಟ್ಟಣದ ಸೋಂಕಿತ ನಿಮೋನಿಯಾ, ತೀವ್ರ ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದು, ಸೋಂಕು ದೃಢಪಟ್ಟಿತ್ತು. ಮಿಮ್ಸ್‌ನ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
84 ಮಂದಿಗೆ ಸೋಂಕು ತಗುಲಿದೆ. ಮಂಡ್ಯದ 14 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಇದರಲ್ಲಿ 11 ಮಂದಿಗೆ ಸೋಂಕಿತರ ಸಂಪರ್ಕ ಹಾಗೂ 3 ಮಂದಿಗೆ ಐಎಲ್‌ಐ ಇದೆ. ಮದ್ದೂರು ತಾಲೂಕಿನ 16 ಪ್ರಕರಣ ದಾಖಲಾಗಿದ್ದು, 14 ಮಂದಿಗೆ ಸೋಂಕಿತರ ಸಂಪರ್ಕದಿಂದ ಬಂದಿದ್ದರೆ, ಇಬ್ಬರಿಗೆ ಐಎಲ್‌ಐ ಇದೆ.ಮಳವಳ್ಳಿಯ 16 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 14 ಮಂದಿಗೆ ಸಂಪರ್ಕವಾದರೆ, ಒಬ್ಬರಿಗೆ ಐಎಲ್‌ಐ ಲಕ್ಷಣದಿಂದ ಪಾಸಿಟಿವ್ ಬಂದಿದೆ. ಪಾಂಡವಪುರದ 17 ಮಂದಿಯಲ್ಲಿ 16 ಸಂಪರ್ಕದಿಂದ ಸೋಂಕು ಬಂದರೆ, ಒಂದು ಐಎಲ್‌ಐ ಆಗಿದೆ. ಶ್ರೀರಂಗಪಟ್ಟಣದ 5 ಮಂದಿಯಲ್ಲಿ 4 ಸೋಂಕಿತನ ಸಂಪರ್ಕ, ಒಂದು ಐಎಲ್‌ಐ, ಕೆ.ಆರ್.ಪೇಟೆ ತಾಲೂಕಿನ 7 ಮಂದಿಗೆ ಕೋವಿಡ್ ದೃಢವಾಗಿದ್ದು, 7 ಜನರಿಗೂ ಸೋಂಕಿತರಿಂದ ಹರಡಿದೆ. ನಾಗಮಂಗಲದ 7 ಮಂದಿಯಲ್ಲಿ 6 ಸಂಪರ್ಕಿತವಾದರೆ, ಒಂದು ಐಎಲ್‌ಐ ಆಗಿದೆ. ಹೊರ ಜಿಲ್ಲೆ ಹಾಸನ ಹಾಗೂ ರಾಮನಗರದ ತಲಾ ಒಬ್ಬರು ಐಎಲ್‌ಐನಿಂದ ಮಿಮ್ಸ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಮಂಡ್ಯ ಮಿಮ್ಸ್ ಐಸೋಲೇಷನ್ ವಾರ್ಡ್‌ನಲ್ಲಿ 239, ಜಿಲ್ಲಾ ಕೋವಿಡ್ ಕೇರ್ ಸೆಂಟರ್ ವಾರ್ಡ್‌ನಲ್ಲಿ 103, ತಾಲೂಕು ಐಸೋಲೇಷನ್ ವಾರ್ಡ್‌ನಲ್ಲಿ 243, ತಾಲೂಕು ಕೋವಿಡ್ ಕೇರ್ ಸೆಂಟರ್ ವಾರ್ಡ್‌ನಲ್ಲಿ 284, ಖಾಸಗಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿ 86 ಹಾಗೂ ಹೋಂ ಐಸೋಲೇಷನ್‌ನಲ್ಲಿ 479 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 3263 ಪ್ರಕರಣ ಪತ್ತೆಯಾಗಿದ್ದು, 1795 ಮಂದಿ ಬಿಡುಗಡೆಯಾಗಿದ್ದಾರೆ. 1434 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.