ವೇಗವಾಗಿ ಬಂದು ಕ್ಷೀಣಿಸಿದ ಕೊರೊನಾ
Team Udayavani, Feb 15, 2022, 1:11 PM IST
ಮಂಡ್ಯ: ನೂತನ ವರ್ಷ 2022ರ ಜನವರಿಯ ಮೊದಲ ವಾರದಿಂದಲೇ ಭೀತಿ ಹುಟ್ಟಿಸಿದ್ದ ಕೊರೊನಾಸೋಂಕು ವೇಗವಾಗಿ ಜಿಲ್ಲೆಯಾದ್ಯಂತ ಹರಡಿತು.ಪ್ರಸ್ತುತ ಕ್ಷೀಣಿಸುತ್ತಿರಿವು ದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಫೆ.8ರ ನಂತರ ಗುಣ ಮುಖರಾಗುವವರ ಸಂಖ್ಯೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದೆ. ಜನವರಿಯ ಮೊದಲ ವಾರದ ಪ್ರಾರಂಭದಲ್ಲಿ ಎರಡಂಕಿ ಬಂದ ಕೊರೊನಾ ನಂತರ ಮೂರಂಕಿ ಯಿಂದ ಸಾವಿರದ ಗಡಿದಾಟಿತ್ತು.ಇದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿತ್ತು. ಜ.6ರಂದು ಶ್ರೀರಂಗಪಟ್ಟಣದ ಓಂಶಕ್ತಿ ದೇವಾಲಯದಲ್ಲಿ ಕಾಣಿಸಿಕೊಂಡ ಸೋಂಕು ಜಿಲ್ಲೆಗೆ ಹರಡುವ ಮೂಲಕ ಆತಂಕ ಹೆಚ್ಚುವಂತೆ ಮಾಡಿತ್ತು. ಅಲ್ಲದೆ, ಓಂ ಶಕ್ತಿ ದೇವಾಲಯಕ್ಕೆ ಬಸ್‌ಗಳಲ್ಲಿ ತೆರಳಿದ್ದವರಲ್ಲಿ ಸೋಂಕು ಪತ್ತೆಯಾಗಿತ್ತು.
2 ಸಾವಿರ ಗಡಿದಾಟಿದ್ದ ಸೋಂಕು: ನಂತರ ಜ.7 ರಂದು ಸೋಂಕಿತರ ಸಂಖ್ಯೆ ನೂರರ ಗಡಿದಾಟಿತ್ತು. ಅಲ್ಲಿಂದ ಪಾಸಿಟಿವಿಟಿ ದರ ಶೇ.21ರಷ್ಟು ಏರಿಕೆ ಯಾಯಿತು. ಜ.14ರಂದು 500 ಕ್ಕೂಹೆಚ್ಚು ಮಂದಿಗೆ ಸೋಂಕು ತಗುಲಿತ್ತು. ಜ.19 ರಂದು ಸಾವಿರದ ಗಡಿ ದಾಟಿತ್ತು. ಜ.20ರಂದು ಏಕಾಏಕಿ 1500ಕ್ಕೂ ಹೆಚ್ಚು ಪ್ರಕರಣ ಪತ್ತೆಯಾದವು. ಜ.24 ರಂದು 1800, ಜ.26 ರಂದು ಎರಡು ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿತು.
34 ಮಂದಿ ಸಾವು: ಮೊದಲ ಹಾಗೂ ಎರಡನೇ ಅವಧಿಯಲ್ಲಿ ಹೆಚ್ಚು ಸೋಂಕು ಹಾಗೂ ಸಾವು-ನೋವುಗಳು ಆಗಿದ್ದವು. ಆದರೆ ಮೂರನೇ ಅಲೆಯಲ್ಲಿ 34 ಮಂದಿಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 695 ಮಂದಿ ಸಾವನ್ನಪ್ಪಿದ್ದಾರೆ.
ಕ್ಷೀಣಿಸಿದ ಸೋಂಕು: ಕೊರೊನಾ ಸೋಂಕು ಜನವರಿ ಕೊನೆ ವಾರದಿಂದ ಕ್ಷೀಣಿಸುತ್ತಾ ಬಂದಿತು. ಜ.28ರಂದು 2 ಸಾವಿರದಿಂದ 800ಕ್ಕಿಳಿದ ಸೋಂಕು ನಂತರದಿನ ದಿಂದ ದಿನಕ್ಕೆ ಕಡಿಮೆಯಾಗುತ್ತಬಂದಿತು. ಫೆ.1ರಂದು 211ಕ್ಕಿಳಿದಿತ್ತು. ಈಗ ಪ್ರತಿದಿನ ಎರಡಂಕಿಗೆ ಇಳಿದಿದೆ.
ಸೋಂಕು ಇಳಿದಂತೆ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಜನವರಿ ಕೊನೇ ವಾರ ದಿಂದಲೂಸಂಪೂರ್ಣವಾಗಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದರು. ಜ.28ರಂದು 1500ಕ್ಕೂ ಹೆಚ್ಚು ಮಂದಿ, ಫೆ.1ರಂದು 1609, 3ರಂದು 1156ಮಂದಿ ಗುಣಮುಖರಾಗಿ ದ್ದರು. ಅದರಂತೆ ಪ್ರಸ್ತುತಸೋಂಕಿನ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿದೆ.
ಮಾಸ್ಕ್ ಇಲ್ಲದೇ ಸಂಚಾರ: ಪ್ರಸ್ತುತ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಯಾವುದೇ ಸೋಂಕಿನ ಭಯವಿಲ್ಲದೆ ಓಡಾಡುತ್ತಿದ್ದಾರೆ. ಹೆಚ್ಚು ಮಂದಿ ಮಾಸ್ಕ್ಧರಿಸುತ್ತಲೇ ಇಲ್ಲ. ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲೂ ಮಾಸ್ಕ್ ಇಲ್ಲದೆ ನಿರ್ಭೀತಿಯಿಂದ ಜನರುಓಡಾಡುವಂತಾಗಿದೆ. ಆದರೂ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಪೂರ್ವ ಸಿದ್ಧತೆಯಿಂದ ಸೋಂಕು ನಿಯಂತ್ರಣ :ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬಂದರೂ ಇಡೀ ಜಿಲ್ಲಾಡಳಿತವೇ ಒಂದು ತಂಡವಾಗಿ ಕೆಲಸಮಾಡಿದ್ದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಯಿತು.ಜತೆಗೆ ಜಿಲ್ಲಾದ್ಯಂತ ಅರ್ಹ ಎಲ್ಲರಿಗೂ ಲಸಿಕೆ ನೀಡಲಾಗಿದೆ.ಮೊದಲ ಡೋಸ್ ಶೇ.100ರಷ್ಟು ಮಾಡಿದೆವು. ಎರಡನೇ ಡೋಸ್ ಸಹ ಶೇ.94ರಷ್ಟಾಗಿದೆ. ಇದರಿಂದ ಸೋಂಕು ಹೆಚ್ಚು ಪರಿಣಾಮ ಬೀರಲಿಲ್ಲ. ಅಲ್ಲದೆ, ಜನರಲ್ಲಿ ಭಯ, ಆತಂಕ ಹುಟ್ಟಿಸದೆ ಧೈರ್ಯ ತುಂಬಿದ್ದರಿಂದ ಜನರು ಸಹ ಸಹಕರಿಸಿದರು. ಇದೆಲ್ಲವೂ ಸೋಂಕು ಕಡಿಮೆಯಾಗಲು ಕಾರಣವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ “ಉದಯವಾಣಿ’ಗೆ ತಿಳಿಸಿದರು.
ಐಸೋಲೇಷನ್‌ಗೆ ಒತ್ತು :
ಪ್ರಕರಣಗಳು ಹೆಚ್ಚಾದಾಗಿಂದಲೂ ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಒತ್ತು ನೀಡಲಾಗಿತ್ತು. ಅಲ್ಲದೆ, ಆರೋಗ್ಯಸಿಬ್ಬಂದಿಗಳ ಆರೈಕೆಯಿಂದ ಹೋಂಐಸೋಲೇಷನ್ ಇದ್ದವರು ಬೇಗ ಗುಣಮುಖರಾಗುತ್ತಿದ್ದಾರೆ.
1 ಲಕ್ಷ ಪ್ರಕರಣ :
ಜಿಲ್ಲೆಯಲ್ಲಿ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಮೊದಲ, ಎರಡನೇ ಹಾಗೂ ಮೂರನೇಅಲೆಯಿಂದ 10,1029 ಪ್ರಕರಣಗಳುದಾಖಲಾಗಿವೆ. ಅದರಂತೆ 16 ಲಕ್ಷ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.