ಕೋವಿಡ್ ಸೆಂಟರ್, ಆಸ್ಪತ್ರೆಗೆ ಡೀಸಿ ದಿಢೀರ್ ಭೇಟಿ
Team Udayavani, Apr 23, 2021, 4:21 PM IST
ಪಾಂಡವಪುರ: ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂಡ್ಯಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಪಟ್ಟಣದ ಸಾರ್ವಜನಿಕ ಉಪವಿಭಾಗೀಯಆಸ್ಪತ್ರೆ, ವಿವಿಧ ಕೋವಿಡ್ ವಾರ್ಡ್‌ಗಳಿಗೆ ಭೇಟಿ ನೀಡಿ ಸೋಂಕಿತರೊಂದಿಗೆಸೌಲಭ್ಯದ ಬಗ್ಗೆ ಸಮಸ್ಯೆ ಆಲಿಸಿದರು.
ಪಾಂಡವಪುರ ಉಪಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ಪ್ರಮೋದ್ ಎಲ್.ಪಾಟೀಲ್, ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಆಸ್ಪತ್ರೆವೈದ್ಯಾಧಿಕಾರಿ ಡಾ.ಕುಮಾರ್, ತಾಪಂ ಇಒ ಆರ್.ಪಿ.ಮಹೇಶ್, ಪುರಸಭೆಮುಖ್ಯಾಧಿಕಾರಿ ಮಂಜುನಾಥ್ ಸಮ್ಮುಖದಲ್ಲಿ ಕೋವಿಡ್ ವಾರ್ಡ್ ಹಾಗೂಆಸ್ಪತ್ರೆಗಳಿಗೆ ಮಂಡ್ಯ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಕೆಲಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಜಿಲ್ಲಾಧಿಕಾರಿ, ಆಸ್ಪತ್ರೆಯ ಕೊರೊನೊ ಲಸಿಕೆ ಹಾಕುವ ಕೇಂದ್ರ, ಕೋವಿಡ್ ವಾಡ್ìಗೆ ಭೇಟಿ ನೀಡಿ ಮಾತಿ ಸಂಗ್ರಸಿದರು.ಪಟ್ಟಣದ ಕೃಷ್ಣನಗರ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಾಲೂಕು ಅಧಿಕಾರಿಗಳತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೊರೊನಾಸೋಂಕಿತರು ಮಾತನಾಡಿ, ಉತ್ತಮವಾಗಿ ಮೂಲ ಸೌಕರ್ಯ ಕಲ್ಪಿಸಲಾಗಿದೆಎಂದರು.
ಜಿಲ್ಲಾಧಿಕಾರಿ ಅಶ್ವತಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕೊರೊನೊವೈರಸ್ ಎರಡನೇ ಹಂತ ಹೆಚ್ಚಾಗಿ ಹರಡುತ್ತಿರುವುದು ಆತಂಕ ಸೃrಯಾಗಿದೆ.ಆದ್ದರಿಂದ ಎಲ್ಲಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.ಕೊರೊನೊ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದುತಿಳಿಸಿದರು.
ಅಧಿಕಾರಿಗಳ ತಿರುಗಾಟ: ಜಿಲ್ಲಾಧಿಕಾರಿ ಅಶ್ವತಿ ಅವರು ಎಚ್ಚರಿಕೆ ನೀಡಿದನಂತರವಷ್ಟೇ, ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಪೊಲೀಸ್ ಅಧಿಕಾರಿಗಳುತಕ್ಷಣದಲ್ಲಿ ಸಂತೆ ತೆರವುಗೊಳಿಸಿ ಪಟ್ಟಣದಾದ್ಯಂತ ಕೊರೊನಾ ನಿಯಮಪಾಲಿಸುವಂತೆ ಸೂಚಿಸಿ ನಿರಂತರವಾಗಿ ಸಂಚರಿಸಿದ ಪ್ರಸಂಗ ನಡೆಯಿತು.
ಅಂಗಡಿಗಳು ಬಂದ್: ಗುರುವಾರ ಪಾಂಡವಪುರ ಪಟ್ಟಣದಲ್ಲಿ ಸಂತೆನಡೆಯುತ್ತಿದ್ದ ಪರಿಣಾಮ ಪಟ್ಟಣದಾದ್ಯಂತ ಅತಿಹೆಚ್ಚು ಜನಸಂಖ್ಯೆ ತಿರುಗಾಡುತ್ತಿದ್ದಹಿನ್ನೆಲೆ ಹಾಗೂ ಅಂಗಡಿಗಳಲ್ಲಿ ಗುಂಪು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಪರಿಣಾಮ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳನ್ನು ಮುಚ್ಚಿಸಿ ಎಚ್ಚರಿಸಿದರು.
ಮುಖ್ಯಾಧಿಕಾರಿಗೆಡೀಸಿ ಎಚ್ಚರಿಕೆಜಿಲ್ಲಾಧಿಕಾರಿ ಅಶ್ವತಿ ಅವರುಪಾಂಡವಪುರ ಪಟ್ಟಣಕ್ಕೆ ಆಗಮಿಸಿದಸಂದರ್ಭದಲ್ಲಿ ಪಟ್ಟಣದ ಎಲ್ಲಾಹೋಟೆಲ್‌ಗಳಲ್ಲಿ ಹೆಚ್ಚು ಜನ ಕುಳಿತುಊಟ ಮಾಡುತ್ತಿದ್ದ ದೃಶ್ಯ ಸೇರಿದಂತೆನಿಯಮ ಪಾಲಿಸದಿರುವುದನ್ನುವೀಕ್ಷಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಕರೆದು, ಏನ್ರಿ, ನೀವೇನಾಮುಖ್ಯಾಧಿಕಾರಿ, ಕೊರೊನಾ ಮಾರ್ಗಸೂಚಿ ಯಾವಾಗ ಸರ್ಕಾರ ಹೊರಡಿಸಿದೆಎಂದು ಪ್ರಶ್ನಿಸಿದಾಗ, ತಬ್ಬಿಬ್ಟಾದಮುಖ್ಯಾಧಿಕಾರಿ, ಒಂದು ವಾರ ಆಯ್ತುಮೇಡಂ ಎಂದು ಉತ್ತರಿಸಿದರು.
ಆಶ್ಚರ್ಯಪಟ್ಟ ಜಿಲ್ಲಾಧಿಕಾರಿ, ಏನ್ರೀನೀವು ಕೆಲಸ ಮಾಡ್ತೀರಾ, ಸರ್ಕಾರದಆದೇಶ ಯಾವಾಗ ಬಂತು ಅಂತಗೊತ್ತಿಲ್ವೇನ್ರಿ ತರಾಟೆ ತೆಗೆದುಕೊಂಡರು.ಪಾಂಡವಪುರ ಪಟ್ಟಣದ ಸಂತೆಮೈದಾನದಲ್ಲಿ ಗುರುವಾರ ಸಂತೆ ನಡೆಯುತ್ತಿದೆ.ಸಂತೆಯಲ್ಲಿ ಸಾವಿರಾರು ಮಂದಿ ಸೇರಿಕೊಂಡಿದ್ದಾರೆ. ಮುಖ್ಯಾಧಿಕಾರಿ ಯಾಗಿನೀವು ಏನ್ ಮಾಡುತ್ತಿದ್ದೀರಾ, ಸ್ವಲ್ಪನೂಕೆಲಸದ ಬಗ್ಗೆ ಕಾಳಜಿ ಇಲ್ಲವೇ, ತಕ್ಷಣಸಂತೆ ಸ್ಥಗಿತಗೊಳಿಸಲು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.