ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿ ಅಗ್ರಮಾನ್ಯರು
Team Udayavani, May 31, 2021, 8:07 PM IST
ಮಂಡ್ಯ: ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರಮೋದಿಯವರು ಅಗ್ರಮಾನ್ಯರಾಗಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು
.ಕೇಂದ್ರ ಸರ್ಕಾರ 7ನೇ ವರ್ಷವನ್ನು ಭಾನುವಾರಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಡೆದ ಸೇವೆಯೇಸಂಘಟನೆ 2.0 ಅಡಿಯಲ್ಲಿ 2ನೇ ಅವ ಧಿಯ 2ನೇವರ್ಷಾಚರಣೆ ಹಿನ್ನೆಲೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿಬಿಜೆಪಿಯಿಂದ ದೇಶಾದ್ಯಂತ ಸೇವಾ ಕಾರ್ಯಗಳನ್ನುಹಮ್ಮಿಕೊಂಡಿದೆ ಎಂದು ಹೇಳಿದರು.
ಸೇವಾ ಹೀ ಸಂಘಟನೆಯ ಧ್ಯೇಯ: ಈ ವರ್ಷವೂ ಯಾವುದೇ ಆಚರಣೆ ಮಾಡದೆ ಸೇವಾ ಹೀ ಸಂಘಟನೆ ಎಂಬಧ್ಯೇಯವಾಕ್ಯದೊಂದಿಗೆ ನಮ್ಮ ಕಾರ್ಯಕರ್ತರು ಎಲ್ಲೆಡೆಸೇವಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕೊರೊನಾ ಜಾಗೃತಿ: ಪ್ರತೀ ಬೂತ್ ಮಟ್ಟದಲ್ಲಿ ಶಕ್ತಿ ಮತ್ತುಮಹಾಶಕ್ತಿ ಕೇಂದ್ರಗಳು, ಮಂಡಲ ಸೇರಿದಂತೆ ವಿವಿಧವಲಯಗಳಲ್ಲಿ ನಮ್ಮ ಕಾರ್ಯಕರ್ತರು ಜನ ಸಾಮಾನ್ಯರು,ಬಡವರು, ಕೂಲಿ ಕಾರ್ಮಿಕರು, ಧಿಧೀನ ದಲಿತರಿಗೆಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸಮಾಡುತ್ತಿದ್ದಾರೆ. ಸ್ಯಾನಿಟೈಸರ್, ಮಾಸ್ಕ್ ವಿತರಿಸುತ್ತಿ ದ್ದಾರೆ.ಲಸಿಕೆ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
370 ವಿ ಧಿ ರದ್ದು: ಕೇಂದ್ರ ಸರ್ಕಾರ ಜನಸಾಮಾನ್ಯರಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ.ಜಮ್ಮು ಕಾಶ್ಮೀರದಲ್ಲಿದ್ದ 370 ವಿಧಿ ರದ್ದುಪಡಿಸಿ ಅಲ್ಲೂ ಸಹಸಾಮಾನ್ಯ ಕಾನೂನು ಜಾರಿಗೊಳಿಸಲಾಗಿದೆ. ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಅಯೋಧ್ಯೆಯಲ್ಲಿ ಚಾಲನೆನೀಡಲಾಗಿದೆ. ಹಲವಾರು ಜನಪರ ಯೋಜನೆಗಳನ್ನುಜಾರಿಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರಮೋದಿಯವರಿಗೆ ಸಲ್ಲಬೇಕು ಎಂದು ಬಣ್ಣಿಸಿದರು.
ಜಲಜೀವನ್‌ಮಿಷನ್ ಯೋಜನೆಯಡಿ ಜಿಲ್ಲೆಯ ವಿವಿಧ ಹಳ್ಳಿಗಳಿಗೆಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ 690 ಕೋಟಿರೂ. ವೆಚ್ಚದ ಯೋಜನೆ ಜಾರಿಗೊಳಿಸಲಾಗಿದೆ ಎಂದರು.ಕೇಂದ್ರ ಸರ್ಕಾರದಿಂದ ಉತ್ತಮ ಕೆಲಸ: ಬಿಜೆಪಿಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಮಾತನಾಡಿ,ಕೇಂದ್ರ ಸರ್ಕಾರ 7 ವರ್ಷ ಪೂರೈಸಿದ ಕಾರಣ ಜಿಲ್ಲೆಯಲ್ಲೂ ಸೇವಾ ಹಿ ಸಂಘಟನೆ ಅಭಿಯಾನ ಪ್ರಾರಂಭಿಸಿದ್ದು, ಕಾರ್ಯಕರ್ತರು ಎಲ್ಲೆಡೆ ರಕ್ತದಾನ ಶಿಬಿರ, ಸಸಿನೆಡುವ ಕಾರ್ಯಕ್ರಮ, ಲಸಿಕೆ ಬಗ್ಗೆ ಜನಸಾಮಾನ್ಯರಿಗೆ ಅರಿವು, ತರಕಾರಿ, ದಿನಸಿ ವಿತರಣೆ, ಮಾಸ್ಕ್,ಸ್ಯಾನಿ ಟೈಸರ್ ವಿತರಣೆ ಸೇರಿದಂತೆ ಹಲವುಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.
ಜಿಲ್ಲೆಯಲ್ಲಿ 3,500ಆಹಾರ ಕಿಟ್ ಹಾಗೂ 3,500 ಮಾಸ್ಕ್ ವಿತರಿಸಲಾಗಿದೆಎಂದು ಹೇಳಿ ದರು.ಮಂಡ್ಯ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗೀಗೌಡ, ಉಪಾಧ್ಯಕ್ಷ ಕುಮಾರ್, ಮುಖಂಡರಾದಜವರೇಗೌಡ, ಹೊಸಹಳ್ಳಿ ನಾಗೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.