ಕ್ಷೇತ್ರದ ಜನರ ಸಂಕಷ್ಟಕ್ಕೆ ನೆರವಾದ ಪುಟ್ಟರಾಜು
Team Udayavani, Jun 2, 2021, 6:22 PM IST
ಮಂಡ್ಯ: ಜಿಲ್ಲೆಯ ಏಳು ತಾಲೂಕುಗಳ ಕ್ಷೇತ್ರಗಳ ಪೈಕಿಪಾಂಡವಪುರ ತಾಲೂಕಿಗೆ ವಲಸಿಗರು ಬಂದಿದ್ದು, ಇದರಿಂದಸೋಂಕಿನ ಪ್ರಮಾಣ ಮೊದಲ ಅಲೆ ಹಾಗೂಎರಡನೇ ಅಲೆಯಲ್ಲೂ ಹೆಚ್ಚಾಗಿತ್ತು.ಆದರೆ ಇದನ್ನು ನಿಭಾಯಿಸಲು ಶಾಸಕಸಿ.ಎಸ್.ಪುಟ್ಟರಾಜು ಅಧಿಕಾರಿಗಳತಂಡದೊಂದಿಗೆ ಹಗಲಿರುಳುಶ್ರಮಿಸುತ್ತಿದ್ದಾರೆ.
ಕ್ಷೇತ್ರದ ಜನತೆಪರವಾಗಿ ನಿಂತ ಪುಟ್ಟರಾಜು ಅವರು,ಸೋಂಕಿತರಿಗೆ ಬೇಕಾದ ಅಗತ್ಯಬೆಡ್, ಆಕ್ಸಿಜನ್, ಸೂಕ್ತ ಚಿಕಿತ್ಸೆಸೇರಿದಂತೆ ಇತರೆ ಸೌಲಭ್ಯಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಸೋಂಕಿನಿಂದಮೃತಪಟ್ಟ ಕುಟುಂಬವರ ಜತೆ ನಿಂತಿರುವ ಅವರು, ಖುದ್ದಾಗಿಆಯಾ ಗ್ರಾಮಗಳಿಗೆ ತೆರಳಿ ಶವಸಂಸ್ಕಾರ ನಡೆಸಿ ಕುಟುಂಬಸ್ಥರಿಗೆಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಪಾಂಡವಪುರತಾಲೂಕಿಗೆ ಬೆಂಗಳೂರು, ಮೈಸೂರು, ಮುಂಬೈನಿಂದ ಸಾಕಷ್ಟುಮಂದಿ ಆಗಮಿಸಿದ್ದು, ಅವರನ್ನು ಪತ್ತೆ ಹಚ್ಚುವುದು ಸವಾಲಿನಕೆಲಸವಾಗಿತ್ತು. ಆಯಾ ಗ್ರಾಪಂ ಮಟ್ಟದಲ್ಲಿ ತಂಡವನ್ನು ರಚಿಸಿವಲಸಿಗರನ್ನು ಪತ್ತೆ ಹಚ್ಚಿ ಅವರಿಗೆ ಪರೀಕ್ಷೆ, ಸೂಕ್ತ ಚಿಕಿತ್ಸೆ ನೀಡಲುಕ್ವಾರಂಟೈನ್ ಕೇಂದ್ರಗಳಿಗೆ ಕರೆತಂದು ಸೋಂಕು ಹರಡುವುದನ್ನುನಿಯಂತ್ರಿಸಿದ್ದಾರೆ.
ಜಿಲ್ಲೆಯ ಏಳು ತಾಲೂಕುಗಳ ಪೈಕಿ ಪ್ರಸ್ತುತಪಾಂಡವಪುರ ತಾಲೂಕು ಕೊರೊನಾ ಸೋಂಕಿತರ ಪ್ರಮಾಣದಲ್ಲಿಕೊನೆಯ ಸ್ಥಾನದಲ್ಲಿದೆ. ನಿರಂತರ ಶ್ರಮ, ಅಧಿಕಾರಿಗಳ ಕೆಲಸದಿಂದಸೋಂಕು ನಿಯಂತ್ರಣಕ್ಕೆ ಬಂದಿದೆ. ಈಗಲೂ ತಾಲೂಕು ಆಸ್ಪತ್ರೆ,ಪ್ರಾಥಮಿಕ, ಆರೋಗ್ಯ ಕೇಂದ್ರಗಳಲ್ಲೂ ಉತ್ತಮ ಚಿಕಿತ್ಸೆ ಕೊಡಿಸುವಮೂಲಕ ಸೋಂಕಿತರು ಶೀಘ್ರ ಗುಣಮುಖರಾಗಿಬಿಡುಗಡೆಯಾಗುತ್ತಿರುವುದು ಸಮಾಧಾನ ತಂದಿದೆ. ಕೊರೊನಾಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಕ್ರಮಗಳ ಕುರಿತಂತೆ ಶಾಸಕಸಿ.ಎಸ್.ಪುಟ್ಟರಾಜುಅವರು ಉದಯವಾಣಿಸಂದರ್ಶನದೊಂದಿಗೆತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಾಲೂಕಿನಲ್ಲಿ ವಲಸಿಗರ ಪತ್ತೆ ಹಚ್ಚಲುಯಾವ ಕ್ರಮ ಕೈಗೊಂಡಿದ್ದೀರಾ?
ಪಾಂಡವಪುರ ತಾಲೂಕಿಗೆ ವಲಸಿಗರು ಹೆಚ್ಚಿನಸಂಖ್ಯೆಯಲ್ಲಿಯೇ ಆಗಮಿಸಿದ್ದರು. ಅವರ ಪತ್ತೆಗಾಗಿಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳ ತಂಡರಚಿಸಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ವಲಸಿಗರನ್ನುಪತ್ತೆ ಹಚ್ಚಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ಪಾಸಿಟಿವ್ ದೃಢಪಟ್ಟ ಸೋಂಕಿತರನ್ನುಕೂಡಲೇ ಕ್ವಾರಂಟೈನ್‌ಕೇಂದ್ರಗಳಿಗೆಕರೆತಂದು ಸೂಕ್ತಚಿಕಿತ್ಸೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆಪ್ರಯತ್ನಿಸಲಾಯಿತು.
ಪ್ರಸ್ತುತ ತಾಲೂಕಿನಲ್ಲಿ ಸೋಂಕುನಿವಾರಿಸಲು ಕ್ರಮ ಏನು?
ಸದ್ಯ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಕಂಡಿದೆ. ಕಳೆದ ಎರಡೂ¾ರು ತಿಂಗಳಲ್ಲಿ ಕಾಣಿಸಿಕೊಂಡಕೊರೊನಾ ಸೋಂಕಿನ ಎರಡನೇ ಅಲೆಯನ್ನುನಿಯಂತ್ರಿಸಲು ತಾಲೂಕು ಅಧಿಕಾರಿಗಳ ನೇತೃತ್ವದಲ್ಲಿ100 ಬೆಡ್‌ಗಳ ಆಸ್ಪತ್ರೆಯಲ್ಲಿ63 ಆಕ್ಸಿಜನ್ ಬೆಡ್,8ಐಸಿಯು, 3 ವೆಂಟಿಲೇಟರ್ ಹಾಗೂ 15ರಿಂದ 20ಸಾರಿ ಪ್ರಕರಣಗಳ ವಾರ್ಡ್ ವ್ಯವಸ್ಥೆ ಮಾಡಿಕೊಂಡುಗ್ರಾಪಂಮಟ್ಟದಲ್ಲಿಟಾಸ್‌ಫೋರ್ಸ್ ಸಮಿತಿರಚಿಸಿ, ಸಿಬ್ಬಂದಿ ವರ್ಗ, ಅಂಗನವಾಡಿ,ಆಶಾ ಕಾರ್ಯಕರ್ತೆಯರಿಂದಗ್ರಾಮಗಳಲ್ಲಿ ಸೋಂಕು ಪತ್ತೆ ಹಚ್ಚಿನಿಯಂತ್ರಿಸಲುಕ್ರಮ ವಹಿಸಲಾಗಿದೆ.
ಸೋಂಕು ನಿಯಂತ್ರಿಸುವಲ್ಲಿ ವೈಯಕ್ತಿಕವಾಗಿ ನಿಮ್ಮಕೊಡುಗೆ ಏನು?
ಸೋಂಕು ನಿಯಂತ್ರಣಕ್ಕಾಗಿ ವೈಯಕ್ತಿಕವಾಗಿಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಮೈಸೂರು ಜಿಲ್ಲೆ, ಮಂಡ್ಯ, ಪಾಂಡವಪುರತಾಲೂಕುಗಳಲ್ಲಿ ಒಟ್ಟು 5 ಆ್ಯಂಬುಲೆನ್ಸ್‌ಗಳ ವ್ಯವಸ್ಥೆಮಾಡಲಾಗಿದೆ.ಯಾವುದೇ ಕ್ಷಣದಲ್ಲೂರೋಗಿಗಳಿಗೆತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.ನನ್ನ ಮೊಬೈಲ್ ನಂಬರ್ 24 ಗಂಟೆಗಳುಚಾಲನೆಯಲ್ಲಿದ್ದು, ಕ್ಷೇತ್ರದ ಜನತೆ ಯಾವಸಂದರ್ಭದಲ್ಲಾದರೂ ಕರೆ ಮಾಡಿದ ತಕ್ಷಣ ಸ್ಪಂದಿಸಿಅವರಿಗೆ ಅಗತ್ಯವಾದ ಬೆಡ್, ಆಕ್ಸಿಜನ್ ಹಾಗೂಬೇರೆಡೆ ದಾಖಲಾಗಲು ಇಚ್ಛಿಸಿದರೆಅವರಿಗೆಅಗತ್ಯಕ್ಕೆತಕ್ಕಂತೆ ಅಲ್ಲಿಯೂ ಬೆಡ್ ವ್ಯವಸ್ಥೆ ಮಾಡಿಕೊಡುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅಲ್ಲದೆ,ಸೋಂಕಿನಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೂಆತ್ಮಸ್ಥೆçರ್ಯ ತುಂಬಿ, ಸ್ಥಳ ದಲ್ಲಿಯೇಖುದ್ದಾಗಿ ಇದ್ದು,ಅಂತ್ಯಸಂಸ್ಕಾರ ಕಾರ್ಯಗಳನ್ನು ನೆರವೇರಿಸಿದ್ದೇನೆ.ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿದ ತೃಪ್ತಿ ತಂದಿದೆ.
ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳ ವ್ಯವಸ್ಥೆ ಹೇಗಿದೆ?
ತಾಲೂಕಿನ ಎಲ್ಲ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆನೀಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿಸೋಂಕಿತರಿಗೆ ಬೇಕಾದ ಅಗತ್ಯ ಸೌಲಭ್ಯಕಲ್ಪಿಸಲಾಗಿದೆ. ಗುಣಮಟ್ಟದ ಊಟ, ಚಿಕಿತ್ಸೆ,ಕುಡಿಯಲು ಬಿಸಿ ನೀರು, ಬೆಳಗ್ಗೆ ಹಾಗೂ ಸಂಜೆಕಷಾಯ, ಶೌಚಾಲಯ, ಸಂಗೀತ ಆಯೋಜನೆ, ಯೋಗ ಸೇರಿದಂತೆ ಶುಚಿತ್ವಕ್ಕೆ ಒತ್ತು ನೀಡಲಾಗಿದೆ.ಇದರಿಂದ ಸೋಂಕಿತರು ಬೇಗ ಗುಣಮುಖರಾಗುವಂತೆ ಕ್ರಮ ವಹಿಸಲಾಗಿ ದೆ. ಅಲ್ಲದೆ, ವ್ಯಾಕ್ಸಿನ್‌ಹಾಗೂ ಕೋವಿಡ್ ಪರೀಕ್ಷೆಗೆ ನೂಕು ನುಗ್ಗಲುಉಂಟಾಗಿ ಸೋಂಕು ಹರಡದಂತೆ ಮುಂಜಾಗ್ರತೆವಹಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ, ಅಲ್ಲಿಗೆಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ,ಕುಡಿಯುವ ನೀರು ವ್ಯವಸ್ಥೆ ಮಾಡುವ ಮೂಲಕಯಾವುದೇ ತೊಂದರೆ ಇಲ್ಲದಂತೆ ಮನೆಗೆ ವಾಪಸ್‌ಆಗುವ ವ್ಯವಸ್ಥೆ ಮಾಡಲಾಗಿದೆ. ಇದುರಾಜ್ಯ¨ಲ್ಲಿ ಯೇ ಮಾದರಿ ಕೆಲಸವಾಗಿದೆ.
ನಿಮ್ಮ ಸಮಸ್ಯೆಗಳಿಗೆ ಸರ್ಕಾರದ ಸಹಕಾರ ಹೇಗಿತ್ತು?
ಸರ್ಕಾರದಸ್ಪಂದನೆಗಿಂತಅಧಿಕಾರಿಗಳಬೆನ್ನುತಟ್ಟಿಕೆಲಸಮಾಡುವುದುಬಹುಮುಖ್ಯವಾಗಿತ್ತು.ಅದರಂತೆ ಅಧಿಕಾರಿಗಳ ತಂಡ ರಚಿಸಿ ಸೋಂಕು ನಿಯಂತ್ರಿಸಲು ಕ್ರಮ ವಹಿಸಲಾಯಿತು.ಅಲ್ಲದೆ, ಕ್ಷೇತ್ರದ ಜನರು ಸಹ ನನ್ನನ್ನು ತಮ್ಮ ಮಗನಂತೆ ಪ್ರೀತಿಯಿಂದ ನನ್ನ ಸಲಹೆಗಳಿಗೆ ಸ್ಪಂದಿಸಿದ್ದಾರೆ. ಏನೇ ಕಷ್ಟವಿದ್ದರೂ ನನ್ನ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲುಮುಂದಾಗುತ್ತಿದ್ದಾರೆ. ಸೋಂಕು ನಿಯಂತ್ರಿಸುವಕುರಿತಂತೆ ಜಾಗೃತರಾದ ಪರಿಣಾಮ ಇಂದು ಇಡೀ ಜಿಲ್ಲೆಯಲ್ಲಿ ಪಾಂಡÊಪ ುರ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಕಂಡಿದೆ.
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.