ಅಪಹರಣ ನಾಟಕವಾಡಿ ತಲೆಮರೆಸಿದ್ದ ವ್ಯಕ್ತಿ ಸೆರೆ: ಅರಕೆರೆ ಪೊಲೀಸರಿಂದ 30 ದಿನಗಳ ಕಾರ್ಯಾಚರಣೆ
Team Udayavani, Sep 14, 2022, 11:06 PM IST
ಶ್ರೀರಂಗಪಟ್ಟಣ: ಪ್ರಿಯತಮೆಗೆ ನೀಡಿದ್ದ ಸಾಲವನ್ನು ಮರಳಿ ಪಡೆಯಲು ಅಪಹರಣ ನಾಟಕವಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ, ಪ್ರಕರಣಕ್ಕೆ ಇತಿಶ್ರೀ ಹಾಕಿದ್ದಾರೆ.
ಪ್ರಕರಣದ ವಿವರ: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಮನು (34) ಅದೇ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಗೆ 7 ಲಕ್ಷ ರೂ. ಸಾಲ ನೀಡಿ, ಭದ್ರತೆಗಾಗಿ ಚೆಕ್ ಪಡೆದಿದ್ದ. ಇವರ ನಡುವೆ ಸಂಬಂಧ ಹದಗೆಟ್ಟ ಬಳಿಕ ಸಾಲ ಮರು ಪಾವತಿಸುವಂತೆ ಒತ್ತಡ ಹೇಳಿದ್ದ. ಆದರೂ ಮಹಿಳೆ ಹಣವನ್ನು ವಾಪಸ್ ನೀಡಿರಲಿಲ್ಲ. ಬದಲಿಗೆ ಆಕೆಯ ಕಡೆಯವರು ಚೆಕ್ ವಾಪಸ್ ಕೊಡುವಂತೆ ಮನುವಿಗೆ ಬೆದರಿಕೆ ಹಾಕಿದ್ದರು.
ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಸ್ನೇಹಿತನಿಗೆ ಕಳುಹಿಸಿದ ಮನು, ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಿ ಆ. 12ರಿಂದ ನಾಪತ್ತೆಯಾಗಿದ್ದ. ಪೊಲೀಸರು ಮಹಿಳೆ ಮತ್ತು ಕೆಲವರನ್ನು ಬಂಧಿಸಿ, ತನಿಖೆ ನಡೆಸಿದರೂ ಅಪಹರಣದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ತನಿಖೆ ಮುಂದುವರಿಸಿದಾಗ ಮನು ಗೋವಾದಲ್ಲಿರುವುದು ತಿಳಿದು ಬಂತು.
ಆತ್ಮಹತ್ಯೆ ನಾಟಕ: ಪೊಲೀಸರು ಗೋವಾಕ್ಕೆ ಹೋಗುವ ವಿಷಯ ತಿಳಿದು ಅಲ್ಲಿಂದ ಊರಿಗೆ ಬಂದಿದ್ದ ಮನು ನಾಲೆ ಬಳಿ ವಿಷ ಕುಡಿದ ಆಡಿಯೋವನ್ನು ಸ್ನೇಹಿತನಿಗೆ ಕಳುಹಿಸಿ ಮತ್ತೆ ನಾಪತ್ತೆಯಾಗಿದ್ದ. ಈತನಿಗಾಗಿ ನಾಲೆ ಬಳಿ ಸ್ನೇಹಿತರು ಮತ್ತು ಸಂಬಂಧಿಕರ ಹುಟುಕಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಈತ ಸತ್ತಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ತನಿಖೆ ಮುಂದುವರಿಸಿದರು.
ಬೆಂಗಳೂರಿನಲ್ಲಿ ಪತ್ತೆ: ಕೆಲವು ದಿನಗಳ ಬಳಿಕ ಈತ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
MUST WATCH
ಹೊಸ ಸೇರ್ಪಡೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.