![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 28, 2020, 12:54 PM IST
ಮಂಡ್ಯ: ಕೋವಿಡ್ ದಿಂದ ನಷ್ಟಕ್ಕೆ ಸಿಲುಕಿರುವಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಲೀಟರ್ ಹಾಲಿನ ದರವನ್ನು2.50 ರೂ. ಇಳಿಸಿದೆ. ಇದರಿಂದ ರೈತರ ಹೈನುಗಾರಿಕೆ ಮೇಲೆ ಹೊಡೆತ ಬಿದ್ದಂತಾಗಿದೆ.
ಮನ್‌ಮುಲ್ ಆಡಳಿತ ಮಂಡಳಿ ತಾತ್ಕಾಲಿಕವಾಗಿ ದರ ಪರಿಷ್ಕರಣೆ ಮಾಡಿದ್ದು,24.90 ರೂ. ಇದ್ದ ಲೀಟರ್ ಹಾಲಿಗೆ 22.40 ರೂ.ಗೆ ಇಳಿಸಿದೆ. ಒಕ್ಕೂಟವುಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಡಿ.1ರಿಂದ ಹಾಲಿನ ಖರೀದಿ ದರವನ್ನು ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ. ಪರಿಷ್ಕರಣೆಯ ನಂತರ ಶೇ.3.5 ಫ್ಯಾಟ್ ಮತ್ತು ಶೇ.8.5 ಎಸ್‌ಎನ್‌ಎಫ್ ಇರುವ ಪ್ರತಿ ಲೀಟರ್ ಹಾಲಿಗೆ24.90 ರೂ. ಬದಲಾಗಿ 22.50 ರೂ. ಸಂಘಗಳಿಗೆ ವಿತರಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಉತ್ಪನ್ನಗಳ ಮಾರಾಟ ಕುಸಿತ: ಈ ವರ್ಷ ಪ್ರಾರಂಭದಿಂದಲೂ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಮಾರಾಟ ವಹಿವಾಟುಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗದಿರುವ ಕಾರಣ ಮಾರ್ಚ್‌ನಿಂದ ಇಲ್ಲಿಯವರೆಗೂ ಹಾಲಿನ ಪುಡಿ ಹಾಗೂ ಬೆಣ್ಣೆ ಸಗಟು ರೂಪ ದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಉತ್ಪಾದನಾ ವೆಚ್ಚಕ್ಕೆ ಹೋಲಿಸಿದಲ್ಲಿ ಹಾಲಿ ಮಾರಾಟದ ಬೆಲೆಯು ಅತಿ ಕಡಿಮೆ ಇರುವ ಕಾರಣ ಒಕ್ಕೂಟಕ್ಕೆ ನಷ್ಟವಾಗಿದೆ .ಅಲ್ಲದೆ, ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಜಿಪಂ ಮತ್ತು ಇತರೆ ಒಕ್ಕೂಟಗಳಿಂದ ಹಾಲಿನ ಪುಡಿಗೆ ಬೇಡಿಕೆಯೂ ಕುಂಠಿತವಾಗಿದೆ ಎಂದು ಕಾರಣ ನೀಡಲಾಗಿದೆ.
8.5 ಲಕ್ಷ ಲೀಟರ್ ಹಾಲು ಸಂಗ್ರಹ: ಪ್ರತಿದಿನ ಒಕ್ಕೂಟದಲ್ಲಿ 8.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಹಾಲು ಮತ್ತು ಮೊಸರು ರೂಪದಲ್ಲಿ ಪ್ರತಿದಿನ 3.23 ಲಕ್ಷ ಲೀಟರ್ ಮಾರಾಟವಾಗುತ್ತಿದೆ.66 ಸಾವಿರ ಲೀಟರ್ ಯುಎಚ್‌ಟಿ ಹಾಲು,1ಲಕ್ಷ ಟೀರರ್ ಅಂತರ ಡೇರಿ ಹಾಲು ಮಾರಾಟ ಮಾಡಿ ಉಳಿದ ಸುಮಾರು 3.5 ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಸಂಪೂರ್ಣವಾಗಿ ಬೆಣ್ಣೆ ಹಾಗೂ ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ವೆಚ್ಚ ಹೆಚ್ಚಳ: ಹೆಚ್ಚುವರಿ ಹಾಲಿನಲ್ಲಿ ದಿನವಹಿ 1.5 ಲಕ್ಷ ಕೆ.ಜಿ. ಹಾಲನ್ನು ಒಕ್ಕೂಟದಲ್ಲೇ ಪರಿವರ್ತನೆ ಮಾಡುತ್ತಿದ್ದು, ಉಳಿಕೆ ಅಂದಾಜು2.0 ಲಕ್ಷಕೆ.ಜಿ. ಹಾಲನ್ನು ಪರಿವರ್ತನೆಗಾಗಿ ರಾಜ್ಯದ ಇತರೆ ಡೇರಿಗಳಿಗೆ ಹಾಗೂ ಹೊರ ರಾಜ್ಯದ ಡೇರಿಗಳಿಗೆ ಕಳುಹಿಸುತ್ತಿ ರುವುದರಿಂದ ಪರಿವರ್ತನಾ ವೆಚ್ಚ, ಸಾಗಾಣೆ ಹಾಗೂ ದಾಸ್ತಾನು ವೆಚ್ಚಹೆಚ್ಚಳವಾಗುತ್ತಿದೆ ಎಂಬುದನ್ನು ಮಂಡಳಿ ಸ್ಪಷ್ಟೀಕರಿಸಿದೆ.
ಹಾಲಿನ ಪುಡಿ ದರ ಇಳಿಕೆ: ಕೆನೆರಹಿತ ಹಾಲಿನಪುಡಿಯದರವುಕಳೆದ ವರ್ಷ ಪ್ರತಿ ಕೆ.ಜಿ.ಗೆ 227 ರೂ. ಇತ್ತು. ಆದರೆ ಈ ವರ್ಷ ಕೋವಿಡ್ ದಿಂದಾಗಿ ಬೇಡಿಕೆ ಕಳೆದುಕೊಂಡ ಪರಿಣಾಮ 160 ರೂ.ಗೆ ಕುಸಿದಿದೆ. ಅಲ್ಲದೆ, ಸಗಟು ಹಾಲು ಮಾರಾಟವು ಗಣನೀಯವಾಗಿ ಕಡಿಮೆಯಾಗಿದೆ. ಒಕ್ಕೂಟದಲ್ಲಿ ಈಗಾಗಲೇ 3,479 ಮೆಟ್ರಿಕ್ ಟನ್ ಕೆನೆರಹಿತ ಹಾಲಿನಪುಡಿ, 1,169 ಮೆಟ್ರಿಕ್ ಟನ್ ಬೆಣ್ಣೆ ಹಾಗೂ 216 ಮೆಟ್ರಿಕ್ ಟನ್ ಕೆನೆಭರಿತ ಹಾಲಿನ ಪುಡಿ ದಾಸ್ತಾನಿದ್ದು, ಮಾರಾಟ ದರ ಹಾಗೂ ಬೇಡಿಕೆ ದಿನೇ ದಿನೆ ಕುಸಿಯುತ್ತಿದೆ.
ಹಾಲಿನ ಬೇಡಿಕೆ ಕುಸಿತ : ಶಾಲಾ ಮಕ್ಕಳಿಗೆ ಉಚಿತವಾಗಿ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲು ವಿತರಿಸಲಾಗುತ್ತಿತ್ತು. ಇದಕ್ಕಾಗಿ ಜಿಪಂ ಮನ್ ಮುಲ್‌ನಿಂದ ಹಾಲು ಖರೀದಿಸಲಾಗುತ್ತಿತ್ತು. ಪ್ರಸ್ತು ಕೋವಿಡ್ ದಿಂದ ಶಾಲೆಗಳು ಮುಚ್ಚಿರುವುದರಿಂದ ಹಾಲಿನ ಬೇಡಿಕೆಕುಸಿದಿದೆ. ಅಲ್ಲದೆ, ಬೇರೆ ಬೇರೆ ಜಿಲ್ಲೆಗಳ ಒಕ್ಕೂಟಗಳಿಗೂ ಮನ್‌ಮುಲ್‌ನಿಂದ ಹಾಲಿನಪುಡಿ ಸರಬರಾಜು ಮಾಡಲಾಗುತ್ತಿತ್ತು. ಅದೂ ಸಹ ಕುಸಿತವಾಗಿದೆ.
ದರ ಕಡಿಮೆ ಮಾಡದಿರಲು ಆಗ್ರಹ : ಪಶು ಆಹಾರ ಬೆಲೆ ಏರಿಕೆಯಾಗಿ ಹೈನುಗಾರಿಕೆಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ರೈತರ ಹಾಲಿನಖರೀದಿ ದರಕಡಿಮೆ ಮಾಡಿರುವಕ್ರಮ ಸರಿಯಲ್ಲ. ಆಡಳಿತ ಮಂಡಳಿಯವರು ಆಡಂಬರದ ಆಡಳಿತ ನಡೆಸುತ್ತಿದ್ದಾರೆ. ಇವರ ಆಡಳಿತಕ್ಕೆ ರೈತರ ಮೇಲೆ ಬರೆ ಎಳೆಯುವುದುಸರಿಯಲ್ಲ. ಗ್ರಾಹಕರಿಂದ 1 ಲೀ.ಗೆ 44 ರೂ. ಅಂದರೆ ಎರಡು ಲೀಟರ್‌ದರ ಪಡೆದು, ರೈತರಿಗೆ ಮೋಸ ಮಾಡುತ್ತಿರುವುದುಖಂಡನೀಯ. ಆಡಳಿತಮಂಡಳಿ ದರಕಡಿತ ಮಾಡಬಾರದು ಎಂದು ರೈತ ಮುಖಂಡ ನಾಗರಾಜುಹನಿಯಂಬಾಡಿ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೋವಿಡ್-19 ನಿಂದ ಚೇತರಿಕೆಯಾಗಿ ಒಕ್ಕೂಟದಲ್ಲಿ ಮಾರಾಟ ವಹಿವಾಟು ಹೆಚ್ಚಳವಾಗುವ ನಿರೀಕ್ಷೆಇದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆ ಯಾದ ನಂತರ ಹಾಲು ಖರೀದಿ ದರವನ್ನು ಹೆಚ್ಚಿಸಲಾಗುವುದು.ಕೋವಿಡ್ ಪರಿಸ್ಥಿತಿಯಲ್ಲಿ ಉತ್ಪಾದಕರು ಒಕ್ಕೂಟದೊಂದಿಗೆ ಸಹಕರಿಸಬೇಕು .- ಬಿ.ಆರ್.ರಾಮಚಂದ್ರ,ಮುನುಮುಲ್ ಅಧ್ಯಕ್ಷ
You seem to have an Ad Blocker on.
To continue reading, please turn it off or whitelist Udayavani.