ಒಂದೇ ದಿನ 13 ಸೋಂಕಿತರು ಪತ್ತೆ
Team Udayavani, May 16, 2020, 7:03 AM IST
ಮಂಡ್ಯ: ಮುಂಬೈನಿಂದ ಆಗಮಿಸಿದ್ದ 13 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಸೋಂಕು ಪ್ರಕರಣಗಳು ವರದಿಯಾಗಿವೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49ಕ್ಕೇರಿಕೆಯಾಗಿದೆ.
ಈ 13 ಮಂದಿಯೂ ಮುಂಬೈನಿಂದ ವಿವಿಧ ದಿನಾಂಕಗಳಂ ದು ಕೆ.ಆರ್. ಪೇಟೆಗೆ ಆಗಮಿಸಿದ್ದರು. ಇವರ ಗಂಟಲ ದ್ರವ ವನ್ನು ಪರೀಕ್ಷೆಗೊಳಪಡಿಸಿದ ಸಮಯದಲ್ಲಿ ಸೋಂಕು ಇರುವು ದು ದೃಢಪಟ್ಟಿದೆ. ಆರು ಮತ್ತು ಒಂಭತ್ತು ವರ್ಷದ ಬಾಲಕಿಯರು, ಇಬ್ಬರು ಮಹಿಳೆಯರು ಮತ್ತು ಒರ್ವ ಬಾಲಕ, ಎಂಟು ಜನ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಿಗೆಲ್ಲ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಾಖಲಿಸಿ ಐಶೋಲೇಷನ್ ರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
30 ಪ್ರಕರಣ ಸಕ್ರಿಯ: ಮುಂಬೈನಿಂದ ಕೆ.ಆರ್.ಪೇಟೆಗೆ ಆಗಮಿಸಿ ರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಂತೆಯೇ, ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾ ಗಿತ್ತು. ಇದರಲ್ಲಿ 13 ಜನರ ವರದಿ ಪಾಸಿಟಿವ್ ಬಂದಿದೆ. ಈವರೆಗೆ ಜಿಲ್ಲೆಯಲ್ಲಿ 49 ಸೋಂಕಿತರ ಪ್ರಕರಣಗಳು ಕಂಡುಬಂ ದಿದ್ದು, ಈ ಪೈಕಿ 19 ಜನ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 30 ಪ್ರಕರಣಗಳು ಸಕ್ರಿಯವಾಗಿವೆ.
ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು: ಪಿ1050, ಪಿ1051, ಪಿ1052, ಪಿ1053 ಒಂದೇ ಕುಟುಂಬದವ ರಾಗಿದ್ದು, ಇವರು ಮುಂಬೈನಲ್ಲಿ ಕ್ಯಾಂಟೀನ್ ನಡೆಸಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೇ.12 ರಂದು ಖಾಸಗಿ ಬಸ್‌ನಲ್ಲಿ 16 ಜನರೊಂದಿಗೆ ಚನ್ನರಾಯ ಪಟ್ಟಣ, ಕಿಕ್ಕೇರಿ ಮೂಲಕ ಕೆ.ಆರ್.ಪೇಟೆಗೆ ಆಗಮಿಸಿದ್ದಾರೆ. ಇವರನ್ನು ಕ್ವಾರಂಟೈನ್‌ಗೊಳಪಡಿಸಿ ಗಂಟಲಿನ ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಪತ್ತೆಯಾಗಿದೆ. ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ಮೂರು ಜನರಿದ್ದಾರೆ.
ಐವರು ಸಂಪರ್ಕಿತರು: ಅಂತೆಯೇ, ಪಿ1044 ಮುಂಬೈನಲ್ಲಿ ಆಟೋ ಸ್ಪೇರ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಪಿ1045 ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು, ಸ್ವಂತ ಕಾರಿನಲ್ಲಿ ಕೆ.ಆರ್.ಪೇಟೆ ಆಗಮಿಸಿ ದಾಗ ಆನಗೊಳ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಿ ಬಳಿಕ ಮಾರ್ಗೋನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇವರಿಗೆ ಪ್ರಾಥಮಿಕ ಸಂಪರ್ಕದಲ್ಲಿ 5 ಜನರನ್ನು ಗುರುತಿ ಸಲಾಗಿದೆ. ಪಿ1046 ಮೇ 11ರಂದು ಕೆ.ಆರ್.ಪೇಟೆಗೆ ಆಗಮಿ ಸಿದ್ದು, ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ಐವರನ್ನು ಗುರುತಿಸಲಾಗಿದೆ.
ಪಿ1047 ಹೋಟೆಲ್ ಉದ್ಯೋಗ ಮಾಡಿ ಕೊಂಡಿದ್ದು, 11ರಂದು ಸ್ವಂತ ಕಾರಿನಲ್ಲಿ ಆಗಮಿಸಿದ್ದಾರೆ. ಪಿ1048 ಸ್ವಂತ ಕಾರಿನಲ್ಲಿ ಮೇ 12ರಂದು ಕೆ.ಆರ್.ಪೇಟೆಗೆ ಆಗಮಿಸಿದ್ದಾರೆ. ಪಿ1049 12ರಂದು ಕೆ.ಆರ್.ಪೇಟೆಗೆ ಬಂದಿ ದ್ದಾರೆ. ಪಿ1054 ಮುಂಬೈನಲ್ಲಿ ಕ್ಯಾಂಟೀನ್ ನಡೆಸಿಕೊಂಡು ಜೀವನ ನಿರ್ವ ಹಿಸುತ್ತಿದ್ದರು. ಟಿಟಿ ವಾಹನದ ಮೂಲಕ ಕೆ.ಆರ್.ಪೇಟೆಗೆ ಬಂದಿದ್ದಾರೆ. ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ನಾಲ್ವರನ್ನು ಗುರುತಿಸಲಾಗಿದೆ. ಪಿ1055 ಮೇ 11ರಂದು ಕೆ.ಆರ್ .ಪೇಟೆ ಆಗಮಿಸಿದ್ದಾರೆ. ಪಿ1056 ಇನ್ನೋವಾ ಕಾರಿನಲ್ಲಿ ಮೇ 11ರಂದು ಬಂದಿದ್ದಾರೆ.
ಕೊರೊನಾ ಸೋಂಕು ತಡೆಯಲು ಜಿಲ್ಲಾಡಳಿತ ತುರ್ತು ಕ್ರಮ ವಹಿಸಿದೆ. ಮುಂಬೈ ಹಾಗೂ ಇತರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು ಗ್ರಾಮಕ್ಕೆ ಭೇಟಿ ಕೊಡುವ ಮುನ್ನವೇ ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡಬೇಕಿಲ್ಲ. ಸೋಂಕಿತರನ್ನು 14ರಿಂದ 28 ದಿನಗಳ ಕ್ವಾರಂಟೈನ್ ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ.ವೆಂಕಟೇಶ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Mandya:87ನೇ ಕನ್ನಡ ಸಾಹಿತ್ಯ ಸಮ್ಮೇಳನ:ಹಿಂದಿ ಹೇರಿಕೆಯ ವಿರುದ್ಧ ಕಹಳೆ-ಗೊ.ರು.ಚನ್ನ ಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.